ನಾಮಪತ್ರ ಸಲ್ಲಿಕೆ: ಸಂಸದ ಪ್ರತಾಪ್ ಸಿಂಹ ಆಸ್ತಿ ವಿವರ ಬಹಿರಂಗ!

By Web Desk  |  First Published Mar 26, 2019, 8:56 AM IST

ಲೋಕಸಭಾ ಚುನಾವಣೆ ಹಿನ್ನೆಲೆ ಎರಡನೇ ಬಾರಿ ಅದೃಷ್ಟಪರೀಕ್ಷೆಗೆ ಇಳಿದ ಸಂಸದ ಪ್ರತಾಪ್ ಸಿಂಹ| ಮೈಸೂರು-ಕೊಡಗು ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ| ಪ್ರತಾಪ್ ಸಿಂಹ ಆಸ್ತಿ ವಿವರ ಬಹಿರಂಗ


ಮೈಸೂರು[ಮಾ.26]: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್‌ ಸಿಂಹ ಸೋಮವಾರ ನಾಮಪತ್ರ ಸಲ್ಲಿಸಿದರು. ಕಳೆದ ಚುನಾವಣೆಯಲ್ಲಿ ಹೊಸ ಮುಖವಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದ ಪ್ರತಾಪ್‌ ಸಿಂಹ, ಈಗ ಎರಡನೇ ಬಾರಿ ಅದೃಷ್ಟಪರೀಕ್ಷೆಗಿಳಿದಿದ್ದಾರೆ.

ಸಾಂಪ್ರದಾಯಿಕ ಎದುರಾಳಿಗಳಿಲ್ಲದ ಕ್ಷೇತ್ರದಲ್ಲಿ ‘ಸಿಂಹ’ ಬಲವೇನು..?

Tap to resize

Latest Videos

7.29 ಲಕ್ಷ ಆಸ್ತಿ ಹೆಚ್ಚಳ:

ಪ್ರತಾಪ್‌ ಸಿಂಹ ತಮ್ಮ ಬಳಿ 63.14 ಲಕ್ಷ ಆಸ್ತಿ ಇದೆ ಎಂದು ಘೋಷಿಸಿದ್ದಾರೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಪ್ರತಾಪ ಸಿಂಹ ಆಸ್ತಿಯಲ್ಲಿ 7.29 ಲಕ್ಷ ಹೆಚ್ಚಳವಾಗಿದೆ. ಕೈಯಲ್ಲಿ 28 ಸಾವಿರ ನಗದು, 11,09,697 ಮೌಲ್ಯದ ಚಿನ್ನಾಭರಣ, 52,05,000 ಮೌಲ್ಯದ ಕೃಷಿಯೇತರ ಸ್ಥಿರಾಸ್ತಿ ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ 23.64 ಲಕ್ಷ ಸಾಲ ಇದೆ.

Today filed Nomination papers from BJP for the Mysuru - Kodagu LS constituency. Hon'ble former Dy CM Sri , Hon'ble MLA Sri S A Ramadas, Sri K G Bopaiah, Sri Appachu Ranjan & Sri L Nagendra, Former MLC Sri Thontadarya & Sri Go Madhusudan were present on the occasion. pic.twitter.com/JbOYrl1K4i

— Chowkidar Pratap Simha (@mepratap)

ನಾಮಪತ್ರ ಸಲ್ಲಿಕೆಗೆ ಮುನ್ನ ಚಾಮುಂಡಿಬೆಟ್ಟಕ್ಕೆ ಕುಟುಂಬ ಸಮೇತ ತೆರಳಿದ ಪ್ರತಾಪ್‌ ಸಿಂಹ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯಿಂದ ಆಶೀರ್ವಾದ ಪಡೆದರು.

ಭಾರೀ ಜನ ಬೆಂಬಲದೊಂದಿಗೆ ಮೈಸೂರು ’ಸಿಂಹ’ ನಾಮಪತ್ರ ಸಲ್ಲಿಕೆ

ನಂತರ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಪಕ್ಕದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟ ಪ್ರತಾಪ್‌ ಸಿಂಹ ಅವರಿಗೆ ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್‌, ಎಸ್‌.ಎ. ರಾಮದಾಸ್‌, ಎಲ್‌.ನಾಗೇಂದ್ರ, ವಿಧಾನ ಪರಿಷತ್ತು ಸದಸ್ಯ ಎಂ.ಪಿ. ಸುನಿಸ್‌ ಸುಬ್ರಮಣ್ಯ, ನಟಿ ತಾರಾ ಅನುರಾಧಾ, ಮಾಜಿ ಶಾಸಕರಾದ ಮೇದಪ್ಪ, ಇ. ಮಾರುತಿರಾವ್‌ ಪವಾರ್‌, ತೋಂಟದಾರ್ಯ, ಬಿಜೆಪಿ ನಗರಾಧ್ಯಕ್ಷ ಡಾ. ಬಿ.ಎಚ್‌. ಮಂಜುನಾಥ್‌, ಜಿಲ್ಲಾಧ್ಯಕ್ಷ ಕೋಟೆ ಎಂ. ಶಿವಣ್ಣ ಮೊದಲಾದವರು ಸಾಥ್‌ ನೀಡಿದರು.

ನಾಮಪತ್ರ ಸಲ್ಲಿಕೆ ದಿನವೇ 'ಸಿಂಹ'ಗೆ ಆಘಾತ

ವೀರಗಾಸೆ, ತಮಟೆ, ಆಟೋಗಳು, ತಲ್ಲುವ ಗಾಡಿಗಳು ಸೇರಿದಂತೆ ಸಾವಿರಾರು ಕಾರ್ಯಕರ್ತರೊಂದಿಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಗಾಂಧಿ ಚೌಕ, ಡಿ. ದೇವರಾಜ ಅರಸು ರಸ್ತೆಯ ಮೂಲಕ ಜೆಎಲ್‌ಬಿ ರಸ್ತೆ ಜಂಕ್ಷನ್‌ಗೆ ತಲುಪಿತು. ಬಳಿಕ ಪ್ರತಾಪ್‌ ಸಿಂಹ ಮತ್ತು ಕೆಲವು ನಾಯಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!