ತವರು ಕ್ಷೇತ್ರದ ಚುನಾವಣಾ ರಾಜಕೀಯಕ್ಕೆ ದೇವೇಗೌಡ್ರ ವಿದಾಯದ ಭಾಷಣ

Published : Mar 13, 2019, 03:36 PM ISTUpdated : Mar 13, 2019, 07:57 PM IST
ತವರು ಕ್ಷೇತ್ರದ ಚುನಾವಣಾ ರಾಜಕೀಯಕ್ಕೆ ದೇವೇಗೌಡ್ರ ವಿದಾಯದ ಭಾಷಣ

ಸಾರಾಂಶ

ತವರು ಕ್ಷೇತ್ರದ ಚುನಾವಣಾ ರಾಜಕೀಯಕ್ಕೆ ದೊಡ್ಡಗೌಡ್ರ ವಿದಾಯದ ಭಾಷಣ| ಹಾಸನ ಲೋಕಸಭೆಗೆ ಪ್ರಜ್ವಲ್ ರೇವಣ್ಣ ಹೆಸರು ಘೋಷಿಸಿದ ದೊಡ್ಡಗೌಡ್ರು| ತಮ್ಮ ಹೆಸರು ಘೋಷಣೆ ಯಾಗುತ್ತಿದ್ದಂತೆಯೇ ಗಳಗಳನೆ ಅತ್ತ ಪ್ರಜ್ವಲ್ ರೇವಣ್ಣ

ಹಾಸನ, (ಮಾ.13): ದೊಡ್ಡಗೌಡ್ರ ನಂತರ ಹಾಸನ ಉತ್ತರಾಧಿಕಾರಿ ಯಾರು ಎನ್ನುವುದಕ್ಕೆ ಸ್ವತಃ ಎಚ್.ಡಿ.ದೇವೇಗೌಡ ಅವರೇ ಇಂದು (ಬುಧವಾರ) ಸ್ಪಷ್ಟಪಡಿಸಿದ್ದಾರೆ.

"

ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ದೇವೇಗೌಡ ಅವರು, ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು. ಈ ಮೂಲಕ ದೇವೇಗೌಡ ನಂತರ ಹಾಸನ ಅಭ್ಯರ್ಥಿ ಯಾರು ಎನ್ನುವ ಗೊಂದಲಕ್ಕೆ ತೆರೆ ಎಳೆದರು.

ರಾಜಕೀಯ ಪ್ರ’ಹಾ’ಸನ: ಎ. ಮಂಜು ಹಳಸಿದ ಅನ್ನ, ಬಿಜೆಪಿಗೆ ಬರೋದು ಯಾಕಣ್ಣಾ?

ಹಾಸನ ಲೋಕಸಭೆ ಚುನಾವಣಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಹಾಸನ-ಮಂಡ್ಯದಲ್ಲಿ  ಮೊಮ್ಮಕ್ಕಳ ಸ್ಪರ್ಧೆ ಖಚಿತ. ನನ್ನ ಸ್ಪರ್ಧೆ ಎಲ್ಲಿಂದ ಗೊತ್ತಿಲ್ಲ ಎಂದು ಹೇಳಿದರು. 

ಹಾಸನದಲ್ಲಿ ಗೌಡರ ಕುಟುಂಬ ಕಣ್ಣೀರು: ಅಳ್ಬೇಡಿ ಗೌಡ್ರೇ ಅಂದ್ರು ಕಾರ್ಯಕರ್ತರು!

ಈ ಮೂಲಕ ತವರಲ್ಲಿ ಚುನಾವಣಾ ರಾಜಕೀಯಕ್ಕೆ ದೊಡ್ಡಗೌಡ್ರು ವಿದಾಯ ಹೇಳಿದು. 1962 ರಿಂದ ಚುನಾವಣಾ ರಾಜಕೀಯದಲ್ಲಿದ್ದ ದೇವೇಗೌಡ ಅವರು, 1991 ರಲ್ಲಿ ಮೊದಲ ಚುನಾವಣೆಯಲ್ಲೇ ಲೋಕಸಭೆಗೆ ಪ್ರವೇಶಿಸಿದ್ದರು.  ಈಗ ತಮ್ಮ ಕ್ಷೇತ್ರವನ್ನು ಮೊಮ್ಮನಿಗೆ ಬಿಟ್ಟುಕೊಟ್ಟಿದ್ದಾರೆ. 

ಆದ್ರೆ ದೇವೇಗೌಡ ಅವರು ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದನ್ನು ಸುಳಿವು ಸಹ ಬಿಟ್ಟುಕೊಡಲಿಲ್ಲ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!