ಮಂಡ್ಯದಲ್ಲಿ ನಿಖಿಲ್‌ಗೆ ಯಾಕೆ ವೋಟ್ ಕೊಡಬೇಕು? ಅಜ್ಜಿಯ ಈ ಮಾತನ್ನು ಕೇಳಿ

Published : Apr 05, 2019, 03:07 PM ISTUpdated : Apr 05, 2019, 03:18 PM IST
ಮಂಡ್ಯದಲ್ಲಿ ನಿಖಿಲ್‌ಗೆ ಯಾಕೆ ವೋಟ್ ಕೊಡಬೇಕು? ಅಜ್ಜಿಯ ಈ ಮಾತನ್ನು ಕೇಳಿ

ಸಾರಾಂಶ

ಕುಮಾರಸ್ವಾಮಿ ಮಗನಿಗೆ ನನ್ನ ಓಟು ಎಂದು ಮಾತನಾಡಿರುವ ಅಜ್ಜಿಯ 46 ಸೆಕೆಂಡ್‌ಗಳ ವಿಡಿಯೋ ವೈರಲ್ ಆಗಿದೆ.  ಶ್ರೀನಿವಾಸ್ ಜಿ ವಿ ಎಂಬುವವರು ತಮ್ಮ‌ ಫೇಸ್‌ಬುಕ್‌ ಖಾತೆಯಲ್ಲಿ ಅಜ್ಜಿಯ ವಿಡಿಯೋವನ್ನು ವೈರಲ್ ಮಾಡಿದ್ದಾರೆ. 

ಮಂಡ್ಯ (ಏ. 05): ಕುಮಾರಸ್ವಾಮಿ ಮಗನಿಗೆ ನನ್ನ ಓಟು ಎಂದು ಮಾತನಾಡಿರುವ ಅಜ್ಜಿಯ 46 ಸೆಕೆಂಡ್‌ಗಳ ವಿಡಿಯೋ ವೈರಲ್ ಆಗಿದೆ.  ಶ್ರೀನಿವಾಸ್ ಜಿ ವಿ ಎಂಬುವವರು ತಮ್ಮ‌ ಫೇಸ್‌ಬುಕ್‌ ಖಾತೆಯಲ್ಲಿ ಅಜ್ಜಿಯ ವಿಡಿಯೋವನ್ನು ವೈರಲ್ ಮಾಡಿದ್ದಾರೆ. 

ನಿಖಿಲ್ ಗೆದ್ದೇ ಗೆಲ್ಲುತ್ತಾನೆ. ಭತ್ತದ ಹೊರೆ ಗುರುತಿಗೆ ನನ್ನ ಮತ. ನಿಖಿಲ್ ಗೆ ನನ್ನ ಮತ ಎಂದು ಅಜ್ಜಿ ಮಾತನಾಡಿದ್ದಾರೆ.  ಈ ಅಜ್ಜಿಗೆ ನೂರಾ ಆರು ವರ್ಷ. ನಡೆದುಕೊಂಡು ಹೋಗಿ ವೋಟ್ ಹಾಕುವಷ್ಟು ಶಕ್ತಿಯಿಲ್ಲ. ನನ್ನ ಮೊಮ್ಮಗ ಎತ್ತಕೊಂಡು ಹೋಗಿ ಓಟ್ ಹಾಕಿಸ್ತಾನೆ ಎಂದಿದ್ದಾರೆ ಅಜ್ಜಿ. 

ಅಜ್ಜಿಯ ವಿಡಿಯೋ ಬಗ್ಗೆ ಜೋರಾದ ಚರ್ಚೆ ಶುರುವಾಗಿದೆ.  ಎಲೆಕ್ಷನ್‌ವರೆಗೂ ಆರೋಗ್ಯವಾಗಿ ನೋಡಿಕೊಳ್ಳಿ ಎಂದು ಸುಮಲತಾ ಬೆಂಬಲಿಗರು ಕಮೆಂಟ್ ಮಾಡಿದ್ದಾರೆ.  ಎಲೆಕ್ಷನ್ ಮುಗಿದ ನಂತರ ಇನ್ನೂ 20 ವರ್ಷ ಬದುಕಿರುತ್ತಾರೆ ಎಂದು ಜೆಡಿಎಸ್ ಕಾರ್ಯಕರ್ತರು ಕಮೆಂಟ್ ಮಾಡಿದ್ದಾರೆ. 

"

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!