HK ಪಾಟೀಲ್ ಪ್ಲಾನ್ ಸಕ್ಸಸ್, ಕಾಂಗ್ರೆಸ್ ಸೇರಿದ ಯಡಿಯೂರಪ್ಪ ಆಪ್ತ..!

By Web Desk  |  First Published Apr 9, 2019, 3:13 PM IST

 ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್  ಪ್ಲಾನ್ ವರ್ಕೌಟ್ ಆಗಿದೆ. ಯಡಿಯೂರಪ್ಪ ಆಪ್ತ ಹಾಗೂ ಗದಗ ಜಿಲ್ಲಾ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ ಕಾಂಗ್ರೆಸ್ ಸೇರಿದ್ದು, ಬಿಜೆಪಿಗೆ ಭಾರೀ ಹೊಡೆತ ಬಿದ್ದಿದೆ.


ಬೆಂಗಳೂರು,(ಏ.09): ಎಚ್.ಕೆ.ಪಾಟೀಲ್ ಅವರು ಗದಗ-ಹಾವೇರಿಯಲ್ಲಿ ಕ್ಷೇತ್ರದಲ್ಲಿ ತಮ್ಮ ಸಹೋದರ ಡಿ.ಆರ್.ಪಾಟೀಲ್ ನನ್ನು ಗೆಲ್ಲಿಸಲು ಹೆಣೆದಿದ್ದ ತಂತ್ರ ಸಕ್ಸಸ್ ಆಗಿದೆ.

ಗದಗನ ಮಾಜಿ ಬಿಜೆಪಿ ಶಾಸಕ, ಜಿಲ್ಲೆಯ ಪ್ರಭಾವಿ ಲಿಂಗಾಯತ ಮುಖಂಡ ಶ್ರೀಶೈಲಪ್ಪ ಬಿದರೂರ ಅವರನ್ನು ಸೆಳೆಯುವಲ್ಲಿ ಎಚ್.ಕೆ.ಪಾಟೀಲ್ ಯಶಸ್ವಿಯಾಗಿದ್ದಾರೆ. 

Tap to resize

Latest Videos

ಬಜೆಪಿಗೆ ಬಿಗ್ ಶಾಕ್: ಪ್ರಭಾವಿ ಲಿಂಗಾಯತ ಮುಂಖಡನಿಗೆ HK ಪಾಟೀಲ್ ಗಾಳ

ಬೆಂಗಳೂರಿನಲ್ಲಿಂದು ಶ್ರೀಶೈಲಪ್ಪ ಬಿದರೂರು ಅವರು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಈ ಹಿಂದೆ ಜನತಾ ಪರಿವಾರದಲ್ಲಿದ್ದ ಬಿದರೂರ ಬಿಜೆಪಿ ಸೇರಿದ್ದರು.

ಇದೀಗ ಹಳೆಯ ಗೆಳೆಯರಾದ ಶ್ರೀಶೈಲಪ್ಪ ಬಿದರೂರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಒಂದಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ತಮಗೆ ಬಿಜೆಪಿ ಟಿಕೆಟ್ ನೀಡಿಲ್ಲ ಎಂದು ಮುನಿಸಿಕೊಂಡಿದ್ದ ಬಿದರೂರು, ಲೋಕಸಭಾ ಎಲೆಕ್ಷನ್ ಪ್ರಚಾರದಿಂದ ದೂರ ಉಳಿದಿದ್ದರು. 

ಗದಗ ಜಿಲ್ಲೆಯಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ಬಿದರೂರು, ಕಾಂಗ್ರೆಸ್ ಸೇರಿರುವುದರಿಂದ ಬಿಜೆಪಿಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆಗಳಿವೆ. 

ಏಪ್ರಿಲ್ 23ರಂದು ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿಯಿಂದ ಹಾಲಿ ಸಂಸದ ಶಿವಕುಮಾರ ಉದಾಸಿ ಅಭ್ಯರ್ಥಿ. ಕಾಂಗ್ರೆಸ್‌-ಜೆಡಿಎಸ್ ಅಭ್ಯರ್ಥಿಯಾಗಿ ಡಿ.ಆರ್.ಪಾಟೀಲ್ ಅವರು ಕಣದಲ್ಲಿದ್ದಾರೆ.

click me!