
ಬೆಂಗಳೂರು, [ಏ.07]: ಗೌಡ ಹಾಗೂ ನಾಯ್ಡು ಎನ್ನುವ ಜಾತಿ ರಾಜಕಾರಣ ಮಂಡ್ಯದಲ್ಲಿ ತಾರಕಕ್ಕೇರಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಿರುದ್ಧ ವೈಯಕ್ತಿಕ ಟೀಕೆ ಮಾಡುತ್ತಿರುವ ಕೆಲ ಜೆಡಿಎಸ್ ನಾಯಕರು, ಸುಮಲತಾ ಅವರದ್ದು ನಾಯ್ಡ ಸಮುದಾಯ.
ಹಾಗಾಗಿ ಅವರನ್ನು ಸೊಲಿಸಬೇಕೆಂದು ಹಾಲಿ ಸಂಸದ ಶಿವರಾಮೇಗೌಡ ಉದ್ದುದ್ದಾ ಭಾಷಣ ಮಾಡಿದ್ದಾರೆ. ಇತ್ತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಅದೇ ನಾಯ್ಡು ಪ್ರಚಾರಕ್ಕೆ ಹೋಗುತ್ತಿದ್ದಾರೆ.
ಶಿವರಾಮೇಗೌಡರ ‘ನಾಯ್ಡು’ ಹೇಳಿಕೆಗೆ ದರ್ಶನ್ ಚಾಲೆಂಜಿಂಗ್ ಕೌಂಟರ್
ನಾಳೆ [ಸೋಮವಾರ] ಚಂದ್ರಬಾಬು ನಾಯ್ಡು ಪರ ಚುನಾವಣಾ ಕ್ಯಾಂಪೇನ್ ಮಾಡಲು ಆಂದ್ರ ಪ್ರದೇಶಕ್ಕೆ ತೆರಳಲಿದ್ದಾರೆ. ಆಂದ್ರದಲ್ಲಿ ಐದು ಕಡೆಗಳಲ್ಲಿ ದೇವೇಗೌಡ್ರು ನಾಯ್ಡು ಪರ ಪ್ರಚಾರ ಮಾಡಿ ಪುನಃ ಅಂದೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಮಂಡ್ಯದಲ್ಲಿ ನಾಯ್ಡು ಸುಮದಾಯವನ್ನು ಟೀಕಿಸಿದ್ದ ಜೆಡಿಎಸ್ ನಾಯಕರ ವರಿಷ್ಠರೇ ಈಗ ಅವರ ಪರ ಪ್ರಚಾರಕ್ಕೆ ಎಂದು ಸಾರ್ವಜನಿಕರು ಜೆಡಿಎಸ್ ನಾಯಕರ ಕಾಲೆಳೆಯುತ್ತಿದ್ದಾರೆ.