ನಿಮ್ಮಿಷ್ಟದಂತೆ ಮತ ಹಾಕಿದ್ರೆ ಊಟ ಕೊಡಿ, ಇಲ್ಲದಿದ್ದರೇ ಉಪವಾಸ ಹಾಕಿ: ನಿತೀಶ್‌

Published : Apr 26, 2019, 11:08 AM IST
ನಿಮ್ಮಿಷ್ಟದಂತೆ ಮತ ಹಾಕಿದ್ರೆ ಊಟ ಕೊಡಿ, ಇಲ್ಲದಿದ್ದರೇ ಉಪವಾಸ ಹಾಕಿ: ನಿತೀಶ್‌

ಸಾರಾಂಶ

ಲೋಕಸಭಾ ಚುನಾವಣಾ ಪ್ರಚಾರದಲ್ಲಿ ನಿಮ್ಮಿಷ್ಟದಂತೆ ಮತ ಹಾಕಿದ್ರೆ ಊಟ ಕೊಡಿ, ಇಲ್ಲದಿದ್ದರೇ ಉಪವಾಸ ಹಾಕಿ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ.

ಪಟನಾ[ಏ.26]: ನಿಮ್ಮ ಇಷ್ಟದಂತೆ ನಿಮ್ಮ ಗಂಡ ಮತ ಹಾಕಿದರೆ, ಆತನಿಗೆ ಊಟ ಕೊಡಿ, ಇಲ್ಲದೇ ಹೋದಲ್ಲಿ ಉಪವಾಸ ಇರುವಂತೆ ಮಾಡಿ ಎಂದೆನ್ನುವ ಮೂಲಕ ಬಿಹಾರ ಸಿಎಂ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ ಮಹಿಳೆಯರಿಗೆ ವಿಚಿತ್ರವಾದ ಸಲಹೆ ನೀಡಿದ್ದಾರೆ.

ಮಧುಬನಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ರಾರ‍ಯಲಿಯಲ್ಲಿ ಮಾತನಾಡಿದ ಅವರು, ನಿಮ್ಮ ಮನೆಯ ಪುರುಷರೆಲ್ಲ ನಿಮ್ಮ ಇಷ್ಟದಂತೆ ಮತ ಚಲಾಯಿಸಬೇಕು. ಆಗ ಊಟ ಕೊಡಿ ಸಾಧ್ಯವಾದರೆ ಪ್ರೀತಿಯಿಂದ ನೀವೇ ಊಟ ಮಾಡಿಸಿ. ಇಲ್ಲದೇ ಹೋದಲ್ಲಿ ಇಡೀ ದಿನ ಉಪವಾಸ ಇರುವಂತೆ ಮಾಡಿ ಎಂದಿದ್ದಾರೆ.

ಮಹಿಳಾ ಮತಗಳ ಮೇಲೆ ಕಣ್ಣಿಟ್ಟಿರುವ ನಿತೀಶ್‌, ಶಾಲಾ ಬಾಲಕಿಯರಿಗೆ ಸೈಕಲ್‌ ಯೋಜನೆ ಆರಂಭಿಸಿದ್ದಾರೆ. ಜತೆಗೆ ಸಾರಾಯಿ ನಿಷೇಧ, ಸಿಎಂ ನ್ಯಾಪಕಿನ್‌ ಯೋಜನೆ, ಕನ್ಯಾ ವಿಕಾಸ ಯೋಜನೆ ಜಾರಿಗೊಳಿಸಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!