‘ನ್ಯಾಯ್’ ಟೀಕಿಸಿದ್ದ ನೀತಿ ಆಯೋಗದ ಉಪಾಧ್ಯಕ್ಷ ತಪ್ಪಿತಸ್ಥ: ಆಯೋಗ!

By Web DeskFirst Published Apr 6, 2019, 3:13 PM IST
Highlights

ಕಾಂಗ್ರೆಸ್‌ನ ಕನಿಷ್ಠ ಆದಾಯ ಖಾತ್ರಿ ಯೋಜನೆ ಟೀಕಿಸಿದ್ದ ನೀತಿ  ಆಯೋಗದ ಉಪಾಧ್ಯಕ್ಷ| ರಾಜೀವ್ ಕುಮಾರ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದ ಚುನಾವಣಾ ಆಯೋಗ| ‘ನ್ಯಾಯ್’ ಟೀಕಿಸಿ ಟ್ವೀಟ್ ಮಾಡಿದ್ದ ರಾಜೀವ್ ಕುಮಾರ್| ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಸೂಚನೆ ನೀಡಿದ ಚುನಾವಣಾ ಆಯೋಗ|  

ನವದೆಹಲಿ(ಏ.06): ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ನ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಟೀಕಿಸಿದ್ದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.

ಕಾಂಗ್ರೆಸ್‌  'ನ್ಯಾಯ್' ನೀತಿಯನ್ನು ಟೀಕಿಸಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದರು. ಈ ಕುರಿತು ವಿಚರಣೆ ನಡೆಸಿರುವ ಚುನಾವಣಾ ಆಯೋಗ, ರಾಜೀವ್ ಕುಮಾರ್ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು, ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಸೂಚನೆ ನೀಡಿದೆ.

ಈ ಕುರಿತು ರಾಜೀವ್ ಕುಮಾರ್ ಅವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ‘ನಿಮ್ಮ ಹೇಳಿಕೆ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಭವಿಷ್ಯದಲ್ಲಿ ಇಂತಹ ಹೇಳಿಕೆ ನೀಡದಿರುವಂತೆ ಎಚ್ಚರಿಕೆ ನೀಡುತ್ತಿದ್ದೇವೆ..’ ಎಂದು ತಿಳಿಸಿದೆ.

 ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಘೋಷಿಸಿದ 'ಕನಿಷ್ಠ ಆದಾಯ ಖಾತ್ರಿ ಯೋಜನೆ' ವಿರುದ್ಧ ಹೇಳಿಕೆ ನೀಡಿದ್ದ ನೀತಿ ರಾಜೀವ್‌ ಕುಮಾರ್‌ ಇದು ಬಡವರನ್ನು ಮತ್ತಷ್ಟು ಸೋಮಾರಿಗಳನ್ನಾಗಿ ಮಾಡುತ್ತದೆ ಎಂದು ದೂಷಿಸಿದ್ದಾರೆ.

click me!