
ಮಂಡ್ಯ, [ಏ.05]: ಸುಮಲತಾ ಎದುರಾಳಿಯಾಗಿ ಸುಮಲತಾ ಹೆಸರಿನ ಮಹಿಳೆಯರು ಕಣದಲ್ಲಿ ಇರುವುದು ನಿಮಗೆ ಗೊತ್ತೇ ಇದೆ. ಈಗ ಥೇಟ್ ಸುಮಲತಾರಂತೆ ಕನ್ನಡಕ ಮತ್ತು ಅವರಂತೆ ಡ್ರೆಸ್ ಮಾಡಿಸಿ ಸುಮಲತಾ ಅವರ ಫೋಟೋ ಇವಿಎಂನಲ್ಲಿ ಇರಲಿದೆ.
ಎವಿಎಂನಲ್ಲಿ ಸುಮಲತಾ ಅಂಬರೀಶ್ ಕ್ರಮ ಸಂಖ್ಯೆ 20 ಇದೆ. ಕ್ರಮ ಸಂಖ್ಯೆ 19ರಲ್ಲೂ ಇನ್ನೋರ್ವ ಸುಮಲತಾ ಎನ್ನುವರು ಇದ್ದಾರೆ. ಅಷ್ಟೇ ಅಲ್ಲದೇ ಕ್ರಮ ಸಂಖ್ಯೆ 21ರಲ್ಲೂ ಮತ್ತೋರ್ವ ಸುಮಲತಾ ಹೆಸರಿದೆ.
ಅಣ್ಣ ನಮ್ಮವನಾದರೆ ಅತ್ತಿಗೆ ನಮ್ಮವಳಾ? ವೈರಲ್ ಆಯ್ತು ಸುಮಲತಾ ವಿರುದ್ಧ ಹಾಡು
ಇದರ ನಡುವೆ ಈಗ ಕ್ರ.ಸಂಖ್ಯೆ 19ರ ಸುಮಲತಾ ಅವರನ್ನು ಸುಮಲತಾ ಅಂಬರೀಶ್ ಅವರಂತೆ ಮೇಕಪ್ ಮಾಡಿ, ಫುಲ್ ಬ್ಲೌಸ್ ಮತ್ತು ಕನ್ನಡಕ ಹಾಕಿರೋ ಫೋಟೋವನ್ನು ಇವಿಎಂನಲ್ಲಿ ಹಾಕಲಾಗಿದೆ.
ಇದರ ಗೇಮ್ ಪ್ಲಾನ್ ಇಷ್ಟೇ. ಸುಮಲತಾ ಅಂಬರೀಶ್ ಚಸ್ಮ ಹಾಕಿಕೊಂಡು ಪ್ರಚಾರಕ್ಕೆ ಬಂದಿದ್ರು. ಇವರೇ ಅವರು ಎನ್ನುವ ರೀತಿಯಲ್ಲಿ ಬಿಂಬಿಸಲು ವೋಟಿಂಗ್ ಮಷಿನ್ ನಲ್ಲಿ ಕ್ರ.ಸಂಖ್ಯೆ 19 ಸುಮಲತಾ ಅವರು ಚಸ್ಮಾ ಹಾಕಿರೋ ಫೋಟೋವನ್ನು ಅಳವಡಿಸಲಾಗಿದೆ. ಇದ್ರಿಂದ ಮತದಾರರು ಕನ್‍ಫ್ಯೂಸ್ ಆಗುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಸಿಎಂ ಕುಮಾರಸ್ವಾಮಿ ಪುತ್ರನ ಗೆಲುವಿಗಾಗಿ ಏನೆಲ್ಲಾ ಅಸ್ತ್ರಗಳಿವೆಯೋ ಅವೆಲ್ಲವೂಗಳನ್ನು ಪ್ರಯೋಗಿಸುತ್ತಿದ್ದಾರೆ.