ಯಾರೂ ಸೇರಲ್ಲ ಎಂದ ಗಂಟೆಯಲ್ಲಿ ಆಡಳಿತಾರೂಢ ಶಾಸಕ ಬಿಜೆಪಿಗೆ!

By Web DeskFirst Published May 3, 2019, 6:22 PM IST
Highlights

ಸೇರಲ್ಲ ಬಿಡ್ರಿ ಎಂದಿದ್ದ ಆಡಳಿತಾರೂಢ ಪಕ್ಷಕ್ಕೆ ಮುಖಭಂಗ| ಕೇವಲ ಒಂದು ಗಂಟೆಯಲ್ಲಿ ಬಿಜೆಪಿ ಸೇರಿದ ಶಾಸಕ| ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಮುಖಭಂಗ| ಪಕ್ಷ ತೊರೆದು ಬಿಜೆಪಿ ಸೇರಿದ ಆಪ್ ಶಾಸಕ| ದೆಹಲಿಯ ಗಾಂಧಿ ನಗರ ಶಾಸಕ ಅನಿಲ್ ಭಾಜಪೇಯಿ ಬಿಜೆಪಿ ತೆಕ್ಕೆಗೆ| ಪಕ್ಷದಲ್ಲಿ ಸೂಕ್ತ ಗೌರವ ದೊರೆತಿಲ್ಲ ಎಂದು ಹರಿಹಾಯ್ದ ಅನಿಲ್ ಭಾಜಪೇಯಿ| ಆಪ್ ಶಾಸಕರಿಗೆ ಬಿಜೆಪಿಯಿಂದ 10 ಕೋಟಿ ರೂ. ಆಫರ್ ಆರೋಪ ಮಾಡಿದ್ದ ಕೇಜ್ರಿ|

ನವದೆಹಲಿ(ಮೇ.03): ದೆಹಲಿ ಸಿಎಂ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಿಲಾ, ಪಕ್ಷದ ಶಾಸಕರನ್ನು ಸೆಳೆಯಲು ಸಾಧ್ಯವಿಲ್ಲ ಎಂದು ಹೆಳಿ ಒಂದು ಗಂಟೆಯಲ್ಲಿ ಆಪ್ ಶಾಸಕರೊಬ್ಬರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

 ದೆಹಲಿಯ ಗಾಂಧಿ ನಗರದ ಆಪ್ ಶಾಸಕ ಅನಿಲ್ ಭಾಜಪೇಯಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

Delhi: Aam Aadmi Party MLA from Gandhi Nagar(Delhi) Anil Bajpayi joins BJP in presence of Union Minister Vijay Goel pic.twitter.com/RtdSMg2eVP

— ANI (@ANI)

ಕೇಂದ್ರ ಸಚಿವ ವಿಜಯ್ ಗೊಯೆಲ್ ಉಪಸ್ಥಿತಿಯಲ್ಲಿ ಪಕ್ಷ ಸೇರಿದ ಅನಿಲ್, ಏಳು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದರೂ ಪಕ್ಷದಲ್ಲಿ ತಮಗೆ ಸರಿಯದ ಗೌರವ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.

ಪಕ್ಷಕ್ಕಾಗಿ ದೇಣಿಗೆ ನೀಡುವಂತೆ ಆಪ್ ನಾಯಕರು ತಮ್ಮನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದರು ಎಂದಿರುವ ಅನಿಲ್, ಪಕ್ಷಕ್ಕಾಗಿ ಹಣ ಹೊಂದಿಸಿ ಸಾಕಾಗಿದೆ ಎಂದು ಹರಿಹಾಯ್ದಿದ್ದಾರೆ.

ಬಿಜೆಪಿ ತಮ್ಮ ಪಕ್ಷದ ಶಾಸಕರನ್ನು ಖರೀದಿಸಲು 10 ಕೋಟಿ ರೂ. ಆಫರ್ ನೀಡಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 

click me!