'ಮೋದಿಯಂತಹ ಹೇಡಿ, ದುರ್ಬಲ ಪ್ರಧಾನಿಯನ್ನು ನೋಡಿಲ್ಲ'

Published : May 10, 2019, 07:48 AM IST
'ಮೋದಿಯಂತಹ ಹೇಡಿ, ದುರ್ಬಲ ಪ್ರಧಾನಿಯನ್ನು ನೋಡಿಲ್ಲ'

ಸಾರಾಂಶ

ಮೋದಿಯಂತಹ ದುರ್ಬಲ, ಹೇಡಿ ಪ್ರಧಾನಿ ನೋಡೇ ಇಲ್ಲ: ಪ್ರಿಯಾಂಕಾ| ರೈತರು, ಬಡವರ ಸಮಸ್ಯೆ ಇತ್ಯರ್ಥಪಡಿಸಿಲ್ಲವೆಂದು ಆರೋಪ| ಟೀವಿ, ಬೃಹತ್‌ ರಾರ‍ಯಲಿಯಿಂದ ರಾಜಕೀಯ ಶಕ್ತಿ ಅಸಾಧ್ಯ

ಪ್ರತಾಪ್‌ಗಢ(ಉತ್ತರ ಪ್ರದೇಶ): ಐಎನ್‌ಎಸ್‌ ವಿರಾಟ್‌ ಯುದ್ಧ ನೌಕೆಯನ್ನು ರಾಜೀವ್‌ ಗಾಂಧಿ ಅವರು ತಮ್ಮ ವೈಯಕ್ತಿಕ ಟ್ಯಾಕ್ಸಿಯನ್ನಾಗಿಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರ ಆರೋಪ ಮಾಡಿದ ಬೆನ್ನಲ್ಲೇ, ತಮ್ಮ ಜೀವಮಾನದಲ್ಲೇ ಮೋದಿ ಅವರಷ್ಟುದುರ್ಬಲ ಹಾಗೂ ಹೇಡಿ ಪ್ರಧಾನಿಯನ್ನು ನೋಡಿಯೇ ಇಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಚುನಾವಣಾ ರಾರ‍ಯಲಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ‘ಟೀವಿ ಶೋಗಳು ಹಾಗೂ ದೊಡ್ಡ-ದೊಡ್ಡ ರಾರ‍ಯಲಿಗಳ ಮೂಲಕ ರಾಜಕೀಯ ಶಕ್ತಿ ಸಾಧಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ದೊಡ್ಡವರು,’ ಎಂದು ಹೇಳುವ ಮೋದಿಗೆ ಟಾಂಗ್‌ ನೀಡಿದರು. ಓರ್ವ ನಾಯಕನಿಗೆ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಪರಿಹರಿಸುವ ಶಕ್ತಿ ಇರಬೇಕು. ಪ್ರತಿಪಕ್ಷಗಳ ಧ್ವನಿಯನ್ನು ಕೇಳುವ ವ್ಯವಧಾನ ಇರಬೇಕು. ನಿಮ್ಮ ಧ್ವನಿ ಕೇಳುವುದನ್ನು ಬಿಡಿ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲೂ ಮೋದಿ ಅವರಿಗೆ ಗೊತ್ತಿಲ್ಲ,’ ಎಂದು ಕಿಡಿಕಾರಿದರು.

ಈಡೇರಿಸದೇ ಹಾಗೆಯೇ ಉಳಿದ ರೈತರ ಆದಾಯ ಹೆಚ್ಚಿಸುವ ಹಾಗೂ 2 ಕೋಟಿ ಹುದ್ದೆಗಳ ಕುರಿತಾಗಿ ಜನತೆ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಮೋದಿ ಅವರು ವಿಫಲರಾಗಿದ್ದಾರೆ. ಪ್ರಧಾನಿ ಮೋದಿ ಅವರು ನಿಜವಾಗಿಯೂ ಶಕ್ತಿಶಾಲಿಯಾಗಿದ್ದರೆ, ನಿಮ್ಮ ಸಮಸ್ಯೆಗಳನ್ನು ಅವರು ಏಕೆ ಪರಿಹರಿಸುತ್ತಿಲ್ಲ. ತಮ್ಮ ಪ್ರತಿಯೊಂದು ಭಾಷಣದಲ್ಲಿಯೂ ಪಾಕಿಸ್ತಾನವನ್ನು ಉಲ್ಲೇಖಿಸುತ್ತಾರೆ. ಆದರೆ, ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಏನು ಮಾಡಿದೆ ಎಂಬ ಬಗ್ಗೆಯೂ ತಿಳಿಸಬೇಕು. ನೀವು ನಮಗೆ ನಾಯಕರನ್ನಾಗಿ ಮಾಡಿದ್ದೀರಿ. ಆದರೆ, ನಮಗಿಂತ ನೀವೇ ದೊಡ್ಡವರು ಎಂದು ಪ್ರಿಯಾಂಕಾ ವಾದ್ರಾ ಹೇಳಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!