744 ರೂ. ಕೊಟ್ಟು IAF ಜೆಟ್‌ಗಳನ್ನು ಟ್ಯಾಕ್ಸಿ ಮಾಡಿದ್ದು ನೀವು: ಕಾಂಗ್ರೆಸ್!

By Web DeskFirst Published May 9, 2019, 5:06 PM IST
Highlights

ಫ್ಯಾಮಿಲಿ ಹಾಲಿಡೇಗಾಗಿ INS ವಿರಾಟ್‌ ಬಳಕೆ ಆರೋಪ| 'ರಾಜೀವ್ ಗಾಂಧಿ ಸ್ವಂತಕ್ಕಾಗಿ ನೌಕಾಸೇನೆ ಹಡಗು ಬಳಿಸಿದ್ದರು'| ಪ್ರಧಾನಿ ಮೋದಿ ಆರೋಪಕ್ಕೆ ಭರ್ಜರಿ ತಿರುಗೇಟು ನೀಡಿದ ಕಾಂಗ್ರೆಸ್| 'ಚುನಾವಣಾ ಪ್ರಚಾರಕ್ಕಾಗಿ ವಾಯಸೇನೆ ಜೆಟ್ ಬಳಸುತ್ತಿರುವುದು ಪ್ರಧಾನಿ'| ಪ್ರಯಾಣಕ್ಕಾಗಿ ಐಎಎಫ್ ಜೆಟ್‌ಗೆ ಮೋದಿ ಕೇವಲ 744 ರೂ. ನೀಡಿದ್ದಾರೆ ಎಂದ ಕಾಂಗ್ರೆಸ್| ಮೋದಿ ವಾಯುಸೇನೆ ವಿಮಾನಗಳನ್ನು ಟ್ಯಾಕ್ಸಿ ಮಾಡಿಕೊಂಡಿದ್ದಾರೆ ಎಂದ ಕಾಂಗ್ರೆಸ್|

ನವದೆಹಲಿ(ಮೇ.09): INS ವಿರಾಟ್‌ನ್ನು ರಾಜೀವ್ ಗಾಂಧಿ ತಮ್ಮ ಫ್ಯಾಮಿಲಿ ಹಾಲಿಡೇಗಾಗಿ ಬಳಸುವ ಮೂಲಕ, ನೌಕಾಸೇನೆಯ ಹಡಗುಗಳನ್ನು ಟ್ಯಾಕ್ಸಿ ಮಾಡಿಕೊಂಡಿದ್ದರು ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.

Modiji,

Distraction & Fakery is your last resort

You have made Indian Air Force jets your own Taxi!

You have paid as low as ₹744 for using IAF jets for election trips!

Scared of your own sins haunting u, you are shamelessly pointing fingers on others! https://t.co/6VD4ZbJsBQ

— Randeep Singh Surjewala (@rssurjewala)

ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ವಾಯುಸೇನೆಯು ಜೆಟ್ ವಿಮಾನಗಳನ್ನು, ಕೇವಲ 744 ರೂ.ಗೆ ಬಾಡಿಗೆ ಪಡೆಯುವ ಮೂಲಕ ಪ್ರಧಾನಿ ವಾಯುಸೇನೆಯ ಯುದ್ಧ ವಿಮಾನಗಳನ್ನು ಟ್ಯಾಕ್ಸಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಣದೀಪ್ ಸರ್ಜೆವಾಲಾ, ಪ್ರಧಾನಿ ಮೋದಿ ಅವರ ಸುಮಾರು 240 ಚುನಾವಣಾ ಪ್ರಚಾರಗಳಿಗಾಗಿ ವಾಯುಸೇನೆಯ ಜೆಟ್ ವಿಮಾನ ಬಳಕೆಗೆ ಬಿಜೆಪಿ ಕೇವಲ 1.4 ಕೋಟಿ ರೂ. ಪಾವತಿಸಿದೆ. ಜನೆವರಿ 15, 2019ರಲ್ಲಿ ಮೋದಿ ಮಾಡಿದ ಅನಧಿಕೃತ ಪ್ರವಾಸಕ್ಕೆ ಕೇವಲ 744 ರೂ. ಪಾವತಿಸಲಾಗಿದೆ ಎಂದು ಆರೋಪಿಸಿದರು.

Modiji’s lies about Rajiv Gandhiji has been exposed by-

-Adm L Ramdass,Ex Chief of Naval Staff & then Fleet Officer,Commanding-In-Chief, Southern Naval Command

-V Adm Vinod Pasricha,Commanding Officer,INS Viraat

-Wajahat Habibullah, Adminstrator,Lakshadweep

Satyameva Jayate!

— Randeep Singh Surjewala (@rssurjewala)

ಇದೇ ವೇಳೆ ರಾಜೀವ್ ಗಾಂಧಿ ಸ್ವಂತಕ್ಕಾಗಿ INS ವಿರಾಟ್ ಬಳಸಿಲ್ಲ ಬದಲಾಗಿ ಯುದ್ಧ ನೌಕೆಗೆ ಅಧಿಕೃತ ಭೇಟಿ ನೀಡಿದ್ದರು ಎಂದು ನಿವೃತ್ತ ವೈಸ್ ಅಡ್ಮಿರಲ್ ವಿನೋದ್ ಪಸ್ರಿಚಾ ಹೇಳಿದ್ದನ್ನು ಕಾಂಗ್ರೆಸ್ ಪುನರುಚ್ಛಿಸಿದೆ. ಅಲ್ಲದೇ ರಾಜೀವ್ ಭೇಟಿಯ ಮಾಹಿತಿ ಇದ್ದ ನೌಕಾಸೇನಾಧಿಕಾರಿಗಳ ಮಾಹಿತಿ ನೀಡಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!