
ಶಿವಮೊಗ್ಗ : ಈ ಕ್ಷೇತ್ರದಲ್ಲಿ 2018 ರ ಉಪ ಚುನಾವಣೆಯಲ್ಲಿನ ಎದುರಾಳಿಗಳೇ ಪುನಃ ಮುಖಾಮುಖಿಯಾಗಿದ್ದಾರೆ. ಬಿಜೆಪಿಯಿಂದ ಕಳೆದ ಬಾರಿ ಗೆದ್ದಿದ್ದ ಬಿ.ವೈ. ರಾಘವೇಂದ್ರ ಪುನಃ ಟಿಕೆಟ್ ಪಡೆದಿದ್ದಾರೆ.
ಮೈತ್ರಿ ಕೂಟದಿಂದ ಜೆಡಿಎಸ್ ನ ಮಧುಬಂಗಾರಪ್ಪ ಸ್ಪರ್ಧಿಸಿದ್ದಾರೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಇಡೀ ರಾಜ್ಯ ಸರ್ಕಾರವೇ ಇಲ್ಲಿಗೆ ಬಂದು ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಲು ಸತತ ಯತ್ನ ನಡೆಸಿತಾದರೂ ಫಲಿಸಿರಲಿಲ್ಲ.
ಡಿ.ಕೆ. ಶಿವಕುಮಾರ್ ಅವರಿಗೆ ಕ್ಷೇತ್ರದ ಚುನಾವಣೆ ಹೊಣೆ ನೀಡಿರುವುದು ಕುತೂಹಲ ಕೆರಳಿಸಿದೆ. ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಮೈತ್ರಿಪಕ್ಷಗಳಿವೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...