
ಮಂಗಳೂರು[ಮಾ.25]: ಬಿಜೆಪಿಯಿಂದ ಎರಡು ಬಾರಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಕಾಂಗ್ರೆಸ್‌ನಿಂದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮುಖಾಮುಖಿಯಾಗಲಿದ್ದಾರೆ.
ಎಸ್‌ಡಿಪಿಐ ತನ್ನ ಅಭ್ಯರ್ಥಿಯಾಗಿ ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹಮ್ಮದ್ ತುಂಬೆ ಅವರನ್ನು ಕಣಕ್ಕಿಳಿಸಿದೆ. ದ.ಕ. ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿ ನಡೆಯುವುದು ಖಚಿತವಾದಂತಾಗಿದೆ. ನಳಿನ್ ಕುಮಾರ್ ಸ್ಪರ್ಧೆಗೆ ಆರಂಭದಲ್ಲಿ ಪಕ್ಷದಲ್ಲೇ ಅಪಸ್ವರ ಕೇಳಿಬಂದಿತ್ತು.
ಈಗ ಪರಿಸ್ಥಿತಿ ತಿಳಿಯಾದಂತಿದೆ. ಕಾಂಗ್ರೆಸ್‌ನ ಮಿಥುನ್ ರೈಗೂ ಹಲವು ಸವಾಲುಗಳು ಎದುರಾಗಿವೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...