
ಬೆಂಗಳೂರು ಕೇಂದ್ರ : ಬಿಜೆಪಿಯಿಂದ ಸಂಸದ ಪಿ.ಸಿ.ಮೋಹನ್ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ಅಭ್ಯರ್ಥಿಯಾಗಿದ್ದ ಎಂಎಲ್ಸಿ ರಿಜ್ವಾನ್ ಅರ್ಷದ್ ಅವರೇ ಕಣಕ್ಕಿಳಿದಿದ್ದಾರೆ.
ಆದರೆ, ಇವರಿಬ್ಬರ ಜೊತೆಗೆ ಕಣದಲ್ಲಿರುವ ಪ್ರಮುಖ ಅಭ್ಯರ್ಥಿ ನಟ ಪ್ರಕಾಶ್ ರಾಜ್. ಹಿಂದು, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳನ್ನು ಪ್ರತಿನಿಧಿಸುವ ಮೂವರು ಅಭ್ಯರ್ಥಿಗಳಿದ್ದರೂ ನೇರ ಹಣಾಹಣಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನಡೆವ ನಿರೀಕ್ಷೆಯಿದೆ.
ಕ್ಷೇತ್ರದಲ್ಲಿ ಮುಸ್ಲಿಂ ಕ್ರೈಸ್ತ ಮತದಾರರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರಕಾಶ್ ರಾಜ್ ಸ್ಪರ್ಧೆ ಕಾಂಗ್ರೆಸ್ಸಿಗೆ ನಷ್ಟ ತರುವ ಸಂಭವವೂ ಕಂಡುಬರುತ್ತಿದೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...