ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳ ಯುದ್ಧ: ಬ್ಯಾಲೆಟ್ ಪೇಪರ್‌ಗೆ ಒತ್ತಾಯ!

By Web DeskFirst Published Apr 14, 2019, 4:00 PM IST
Highlights

ಚುನಾವಣಾ ಆಯೋಗದ ಮೇಲೆ ಮುಗಿಬಿದ್ದ 21 ವಿಪಕ್ಷಗಳು| ಇವಿಎಂ ಮತಯಂತ್ರ ದುರ್ಬಳಕೆ ಆರೋಪ ಮಾಡುತ್ತಿರುವ ವಿಪಕ್ಷಗಳು| ಬ್ಯಾಲೆಟ್ ಪೇಪರ್‌ ಪದ್ದತಿಗೆ ಮರಳುವಂತೆ ವಿಪಕ್ಷಗಳ ಒತ್ತಾಯ| ನವದೆಹಲಿಯಲ್ಲಿ ಸಭೆ ಸೇರಿದ 21 ಪ್ರಮುಖ ವಿಪಕ್ಷಗಳು| ಶೇ.50ಕ್ಕೂ ಅಧಿಕ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ತಪಾಸಣೆಗೆ ಒಳಪಡಿಸಲು ಆಗ್ರಹ| ಜರ್ಮನಿ, ನೆದರ್ ಲ್ಯಾಂಡ್, ಕೆನಡಾ ರಾಷ್ಟ್ರಗಳ ಉದಾಹರಣೆ ನೀಡಿದ ವಿಪಕ್ಷಗಳು| ಬ್ಯಾಲೆಟ್ ಪೇಪರ್ ಜಮನಾಗೆ ಮರಳಲು ವಿಪಕ್ಷಗಳ ಒತ್ತಾಯ|

ನವದೆಹಲಿ(ಏ.14): 2019ರ ಲೋಕಸಭೆ ಚುನಾವಣೆಗೆ ಮೊದಲನೇ ಹಂತದ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೇ, ವಿಪಕ್ಷಗಳು ಚುನಾವಣಾ ಆಯೋಗದ ಮೇಲೆ ಮುಗಿದು ಬಿದ್ದಿವೆ. ಇವಿಎಂ ಮತಯಂತ್ರದಲ್ಲಿ ದೋಷವಿದ್ದು, ಬ್ಯಾಲೆಟ್ ಪೇಪರ್ ಪದ್ದತಿಯನ್ನು ಮರುಜಾರಿಗೊಳಿಸುವಂತೆ ಒತ್ತಾಯಿಸಿವೆ.

Abhishek Singhvi, Congress, at Opposition's press conference: Questions were raised after the 1st phase of election,we don't think EC is paying adequate attention. If you press the button before X Party,vote goes to Y party. VVPAT displays only for 3 seconds, instead of 7 seconds pic.twitter.com/78qLE0QlZ7

— ANI (@ANI)

ನವದೆಹಲಿಯಲ್ಲಿ ಇಂದು 20ಕ್ಕೂ ಅಧಿಕ ರಾಜಕೀಯ ಪಕ್ಷಗಳು ಸಭೆ ನಡೆಸಿದ್ದು, ಚುನಾವಣೆ ಬಳಿಕ ಶೇ.50ಕ್ಕೂ ಅಧಿಕ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿವೆ.

ಇವಿಎಂ ಬಳಸುತ್ತಿದ್ದ ಹಲವು ದೇಶಗಳು ಅದರ ದುರ್ಬಳಕೆ ಅರಿತು ಈಗಾಗಲೇ ಮರಳಿ ಬ್ಯಾಲೆಟ್ ಪೇಪರ್‌ನ್ನು ಅಪ್ಪಿಕೊಂಡಿವೆ ಎಂದು ವಿಪಕಷಗಳು ತಮ್ಮ ವಾದಕ್ಕೆ ಸಮರ್ಥನೆ ನೀಡಿವೆ.

Abhishek Singhvi, Congress: Names of Lakhs of voters are deleted online without physical verification. There is a long list the parties have given to EC. It has become even more necessary to count at least 50% of the paper trail of VVPAT. We will demand the same in Supreme Court. pic.twitter.com/8afjSxBqOc

— ANI (@ANI)

2005-09ರಲ್ಲಿ ಇವಿಎಂ ಯಂತ್ರ ಬಳಸುತ್ತಿದ್ದ ಜರ್ಮನಿ ಇದೀಗ ಮರಳಿ ಬ್ಯಾಲೆಟ್ ಪೇಪರ್ ಪದ್ದತಿ ಅಳವಡಿಸಿಕೊಂಡಿದ್ದು, ಇವಿಎಂ ದುರ್ಬಳಕೆ ಕುರಿತು ವಿಶ್ವದ ಎಲ್ಲಾ ರಾಷ್ಟ್ರಗಳೂ ಚಕಾರವೆತ್ತಿವೆ ಎಂದು ವಿಪಕ್ಷಗಳು ಹೇಳಿವೆ.

Andhra Pradesh CM N Chandrababu Naidu: EC is acting under BJP, they are not correct, they have to act impartially which they are not doing. Also, we doubt even EVMs are under manipulation & that's why we are demanding 50% counting of VVPATs. They are not agreeing. pic.twitter.com/tMbYvmFUdX

— ANI (@ANI)

ಅದರಂತೆ ನೆದರ್ ಲ್ಯಾಂಡ್ ಕೂಡ 1990-2007ರವರೆಗೂ ಇವಿಎಂ ಬಳಸಿ ಮರಳಿ ಬ್ಯಾಲೆಟ್ ಪೇಪರ್ ಅನ್ನು ಅಪ್ಪಿಕೊಂಡಿದೆ. ಐರ್ಲ್ಯಾಂಡ್ 2002-04ರವೆಗೆ ಇವಿಎಂ ಬಳಿಸಿ ಮತ್ತೆ ಬ್ಯಾಲೆಟ್ ಪೇಪರ್ ಬಳಸುತ್ತಿದೆ ಎಂದು ವಿಪಕ್ಷಗಳು ಮಾಹಿತಿ ನೀಡಿವೆ.

ಮೊದಲ ಹಂತದ ಚುನಾವಣೆ ವೇಳೆ ಆಂಧ್ರದಲ್ಲಿ ಒಟ್ಟು 4,583 ಮತಯಂತ್ರಗಳು ಕೆಟ್ಟಿದ್ದು, ಮತದಾನ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಗಂಭೀರವ ಆರೋಪ ಮಾಡಿದ್ದಾರೆ.

ಒಟ್ಟಿನಲ್ಲಿ ಇವಿಎಂ ಮತಯಂತ್ರದ ಕುರಿತಾಗಿ ವಿಪಕ್ಷಗಳು ಒಟ್ಟಾಗಿ ಚುನಾವಣೆ ಆಯೋಗದ ಮೇಲೆ ಮುಗಿದು ಬಿದ್ದಿದ್ದು, ಲೋಕಸಭೆ ಚುನಾವಣೆ ವೇಳೆಯೇ ಇವಿಎಂ ನಿಷೇಧಿಸುವಂತೆ ಒತ್ತಾಯಿಸುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!