
ಕಲಬುರಗಿ[ ಏ. 16] ಭಾಷಣದ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಬಾಯಿ ತಪ್ಪಿದ್ದಾರೆ. 'ರಾಜೀವ್ ಗಾಂಧಿ' ಅವರನ್ನ ತುಕಡಿ ತುಕಡಿ ಮಾಡಿ ಕೊಂದ್ರು ಎನ್ನಲು ಹೋಗಿ ಹೋಗಿ 'ರಾಹುಲ್ ಗಾಂಧಿ' ಅವರನ್ನ ತುಕಡಿ ತುಕಡಿ ಮಾಡಿ ಕೊಂದರು ಎಂದು ಖರ್ಗೆ ಹೇಳಿದ್ದಾರೆ.
ಕಳ್ಳೆತ್ತಾ? ಜೋಡೆತ್ತಾ? ಉಸಾಬರಿಯೇ ಬೇಡ; ನಕ್ಕು ಹಗುರಾಗಿ!
ಕಲಬುರಗಿ ನಗರದ ಯಲ್ಲಮ್ಮ ಟೆಂಪಲ್‌ನ 'ಭಾವಸಾರ ಸಮಾಜದ' ಸಭೆಯಲ್ಲಿ ಕೈ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಟಂಗ್ ಸ್ಲಿಪ್ ಆಗಿದೆ.
ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಅನೇಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು ಎಂದು ಹೇಳುವಾಗ ಖರ್ಗೆ ಎಡವಟ್ಟು ಮಾಡಿಕೊಂಡಿದ್ದಾರೆ.