ಸುಮಲತಾಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲ ಸುದ್ದಿಗೆ ಸಿಕ್ಕ ಸ್ಪಷ್ಟನೆ

By Web Desk  |  First Published Apr 12, 2019, 4:57 PM IST

ಮಂಡ್ಯ ರಾಜಕಾರಣ ಮಾತ್ರ ಹೇಳಿಕೆಗಳಿಂದಲೇ ಓಡುತ್ತಿದೆ.  ಮಾಜಿ ಸಿಎಂ ಸಿದ್ದರಾಮಯ್ಯ ಸುಮಲತಾ ಅವರಿಗೆ ಬೆಂಬಲ ನೀಡಿ ಎಂಬ ಮಾತು ಹೇಳಿದ್ದಾರೆ ಎನ್ನುವ ವಿಚಾರವೂ ಬಹುಚರ್ಚಿತವಾಗಿದ್ದು ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.


ಮಂಡ್ಯ(ಏ. 12) ನಾನು ಸುಮಲತಾಗೆ ಬೆಂಬಲ ನೀಡುತ್ತೇನೆ ಎಂಬುದು ಯಾರೋ  ಹರಿಯಬಿಟ್ಟ ಸುಳ್ಳು ಸುದ್ದಿ.  ನಾನು ಸುಮಲತಾಗೆ ಎಂದೂ ಬೆಂಬಲ ವ್ಯಕ್ತಪಡಿಸಿಲ್ಲ. ನಾವು ಮೈತ್ರಿ ಪಕ್ಷದವರು. ಹಾಗಾಗಿ ಮೈತ್ರಿ ಪಕ್ಷದ ಅಭ್ಯರ್ಥಿಗೆ ನಾನು  ಬೆಂಬಲ ಕೋಟ್ಟಿದ್ದೀವಿ ಎಂದು ಒಂದು ಕಡೆ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಚೆಲುರಾಯಸ್ವಾಮಿ ಬರಬೇಕು. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿದ್ದಾರೆ , ಏನು ಗೊಂದಲವಿಲ್ಲ ಎಂದು ಮಾಜಿ ಸಿಎಂ ಮತ್ತೆ ಪುನರ್ ಉಚ್ಚಾರ ಮಾಡಿದರು.

Tap to resize

Latest Videos

ಪ್ರಚಾರದ ವೇಳೆ ಶಿವನಂದಿ ದರ್ಶನ

ಒಂದು ಕಾಲದಲ್ಲಿ ಜೆಡಿಎಸ್ ನಲ್ಲಿ ಇದ್ದು ನಂತರ ಸಿಡಿದೆದ್ದು ಕಾಂಗ್ರೆಸ್ ಗೆ ಹೋಗಿದ್ದ ಚೆಲುವರಾಯಸ್ವಾಮಿ ಮಂಡ್ಯ ಭಾಗದಲ್ಲಿ ಇನ್ನು ಪ್ರಭಾವ ಹೊಂದಿದ್ದಾರೆ. ದೋಸ್ತಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಆಯ್ಕೆಯಾದಾಗಿನಿಂದಲೂ ಒಂದು ಹಂತದ ವಿರೋಧ ಕಾಂಗ್ರೆಸ್ನವರಿಂದಲೇ ಕೇಳಿಕೊಂಡು ಬಂದಿತ್ತು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!