ಲೋಕಸಭಾ ಚುನಾವಣೆ : ಬಿಜೆಪಿ ಬೆಂಬಲಿಸಲು ಕರೆ ನೀಡಿದ ಕೈ ಮುಖಂಡ

Published : Apr 20, 2019, 04:22 PM ISTUpdated : Apr 20, 2019, 05:09 PM IST
ಲೋಕಸಭಾ ಚುನಾವಣೆ : ಬಿಜೆಪಿ ಬೆಂಬಲಿಸಲು ಕರೆ ನೀಡಿದ ಕೈ ಮುಖಂಡ

ಸಾರಾಂಶ

ಲೋಕಸಭಾ ಚುನಾವಣೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಹಲವು ರೀತಿಯ ಸಂಚಲನಗಳು ಉಂಟಾಗುತ್ತಿವೆ. ಕೈ ಅತೃಪ್ತ ಮುಖಂಡರೋರ್ವರು  ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಬೆಂಬಲಿಗರಿಗೆ ಸೂಚಿಸಿದ್ದಾರೆ.

ಬೆಳಗಾವಿ : ಲೋಕಸಭಾ ಚುನಾವಣೆ ಕಾವು ರಾಜ್ಯದಲ್ಲಿ ಜೋರಾಗಿದ್ದು, ಇದೇ ವೇಳೆ ಕಾಂಗ್ರೆಸ್ ಅತೃಪ್ತ ಮುಖಂಡ ರಮೇಶ್ ಜಾರಕಿಹೊಳಿ  ತಮ್ಮ ಬೆಂಬಲಿಗರೊಂದಿಗೆ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಕಾರ್ಯಕರ್ತರರನ್ನು ಒಬ್ಬೊಬ್ಬರಾಗಿ ಭೇಟಿ ಮಾಡಿದ ಮಾಜಿ ಸಚಿವ ಜಾರಕಿಹೊಳಿ ಬಿಜೆಪಿ ಬೆಂಬಲಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. 

"

ಅತೃಪ್ತ ಮುಖಂಡ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾಯ ಪಾಟೀಲ್ ಈ ಬಗ್ಗೆ  ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ಈಗಾಗಲೇ ಕಾಂಗ್ರೆಸ್ ನಿಂದ ದೂರವೇ ಉಳಿದಿರುವ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಚರ್ಚೆ ಜೋರಾಗಿದ್ದು,  ಇದೇ ವೇಳೆ ಬಿಜೆಪಿ ಬೆಂಬಲದ ವಿಚಾರದಿಂದ ಇನ್ನಷ್ಟು ಸ್ಪಷ್ಟವಾದಂತಾಗಿದೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!