ಮಾವನ ಮನೆಯಲ್ಲಿ ನಿಂತು ರಾಜಕಾರಣದ ಭವಿಷ್ಯ ಹೇಳಿದ ಕೃಷ್ಣ

By Web DeskFirst Published Apr 20, 2019, 4:19 PM IST
Highlights

ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಮತಯಾಚನೆ ಮಾಡಿದ್ದಾರೆ.

ಶಿವಮೊಗ್ಗ(ಏ. 20)  ತೀರ್ಥಹಳ್ಳಿ ಪಟ್ಟಣದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ನನ್ನ ಪತ್ನಿ ಪ್ರೇಮಾ ತೀರ್ಥಹಳ್ಳಿ ಜನತೆಗೆ ಪ್ರೀತಿ ಪೂರ್ವಕ ನಮಸ್ಕಾರ ತಿಳಿಸಿದ್ದಾಳೆ ಎಂದು ಹೇಳಿದರು.

ದೇಶದ ಜನತೆಗೆ ನಮೋ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಮೂರು ಬಾರಿ ಸಿಎಂ ಆಗಿ ಗುಜರಾತ್ ನ್ನು ಸಂಪದ್ಭರಿತ ರಾಜ್ಯವನ್ನಾಗಿ ಮಾಡಿದ್ದರು. ಗುಜರಾತ್ ನಂತೆಯೇ ಭಾರತದ ಅಭಿವೃದ್ಧಿಗಾಗಿ ನಮೋ ಪ್ರಧಾನಿ ಆಗಬೇಕೆಂದು ಅಪೇಕ್ಷಿಸಿದ ಹಿನ್ನೆಲೆಯಲ್ಲಿ ಪ್ರಧಾನಿಯಾದರು. ಮನಮೋಹನ್ ಸಿಂಗ್ ಅಧಿಕಾರಾವಧಿ ಮತ್ತು ನಮೋ ಆಡಳಿತದ ಅವಧಿ ಎರಡನ್ನೂ ನೋಡಿದ್ದೇನೆ. ನಮೋ ಭ್ರಷ್ಟಾಚಾರ ರಹಿತ ಸರ್ಕಾರವನ್ನು ಕೊಟ್ಟ ಮಾತಿನಂತೆ ಕೊಟ್ಟಿದ್ದಾರೆ ಎಂದು ವಿಶ್ಲೇಷಿಸಿದರು.

ನಮೋ ಆಡಳಿತದ. 5 ವರ್ಷದಲ್ಲಿ ಎಲ್ಲಾ ಮಂತ್ರಿಗಳು ಭ್ರಷ್ಟಾಚಾರ ಮಾಡಲಿಲ್ಲ. ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುವವರು ದಾಖಲೆ ಇಲ್ಲದೆ ಮಾಡಿದರೆ ಅದಕ್ಕೆ ಕಿಮ್ಮತ್ತಿಲ್ಲ. ರಫೇಲ್ ಒಪ್ಪಂದ ಎರಡು ದೇಶಗಳ ನಡುವೆ ನಡೆದಿದ್ದು ಅದರಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಹೇಳಿದರು.

ಲೋಕ ಸಮರಕ್ಕೂ ಮುನ್ನವೇ ಬೆಳಗಾವಿಯಲ್ಲಿ ರಾಜಕಾರಣದ ದಂಗಲ್

ಬಾಲಾಕೋಟ್ ದಾಳಿ ನಡೆಸಿದ್ದು ಉಗ್ರರ ಮೇಲಿನ ದಾಳಿ. ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ.  ಸರ್ಜಿಕಲ್ ಸ್ಟ್ರೈಕ್ ಎಂಬ ಹೊಸ ಮನ್ವಂತರವನ್ನು ಪ್ರಯೋಗಿಸಿದ್ದಾರೆ. ಬಾಲಾ ಕೋಟ್ ದಾಳಿ ಬಗ್ಗೆ ಕೆಲವರು ಸಾಕ್ಷಿ ಕೇಳ್ತಾರೆ. ಹಿಟ್ಲರ್ ಮಹಾಯುದ್ಧ ಕಾಲದಲ್ಲಿ ಎಷ್ಟು ಜನ ಸತ್ತರು ಎಂದು ಯಾರಾದರು ಕೇಳಿದರೆ? ಕಾರ್ಗಿಲ್ ಯುದ್ಧದಲ್ಲಿ ಸತ್ತವರೆಷ್ಟು ಎಂದು ಕೇಳಿದರೆ? ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಸಾರ್ಕ್ ದೇಶಗಳಲ್ಲಿ ಉತ್ತಮ ಬಾಂಧವ್ಯ ಮೂಡಿಸಲು ಎಲ್ಲರನ್ನು ಆಹ್ವಾನಿಸಿದರು ಎಂದು  ವಿವರಿಸಿದರು

ಮಹಾಘಟಬಂಧನ್ ಎಂಬುದು ವಿಧಾನಸೌಧದ ಮುಂದೆ ಕೈಯೆತ್ತಿದ್ದಕ್ಕೆ ಮಾತ್ರ ಸೀಮಿತ. ಯಾರು ಪ್ರಧಾನಿ ಸ್ಪರ್ಧೆ ಯಲ್ಲಿ ಇದ್ದಾರೆ ಅದೇ ರಾಹುಲ್ ಗಾಂಧಿಯವರಿಗೆ ಉತ್ತರ ಪ್ರದೇಶದಲ್ಲಿ ಘಟಬಂಧನ್ ನವರು ಕೇವಲ ಎರಡು ಸ್ಥಾನ ಕೊಟ್ಟಿದ್ದಾರೆ  ಕಾಂಗ್ರೆಸ್ ನವರ ಉದ್ದಟತನದಿಂದ ಕೇರಳದ ವೈನಾಡುಗೆ ಹೋಗಿದ್ದಾರೆ ಅಲ್ಲಿ ಅವರಿಗೆ ಕಮುನಿಷ್ಟ್ ರೇ ವಿರುದ್ಧವಾಗಿದ್ದಾರೆ ಒಂದು ದೇಶದ ಪ್ರಧಾನಿಯಾಗ ಬೇಕಾದರೆ ಎಷ್ಟು ಪ್ರಬುದ್ದತೆ ಬೇಕು. ರಾಹುಲ್ ಗಾಂಧಿಯವರಿಗೆ ಅವರ ಅನುಭವ ಎನು ? ಅವರ ಅರ್ಹತೆ ಎನು?   ಎಂದು ಕೃಷ್ಣ ಪ್ರಶ್ನೆ ಮಾಡಿದರು.

ರಫೆಲ್‌ ಪ್ರಕರಣದಲ್ಲಿ ಮೂರು ಕದ್ದ ದಾಖಲೆಗಳನ್ನು ಸುಪ್ರೀಂ ಕೋರ್ಟ್ ರಿವಿವ್ಯೂ ಪಿಟಿಷನ್ ವೇಳೆ ನೋಡ್ತೀವಿ ಅಂದ ಕೂಡಲೇ ರಾಹುಲ್ ಗಾಂಧಿಯವರು ಚೌಕಿದಾರ್ ಚೋರ್ ಅಂತ ಹೇಳಿಕೆ ಕೊಟ್ಟು ಬಿಟ್ಟರು. ಸುಪ್ರೀಂ ಕೋರ್ಟ್ ನಾವು ರೀತಿ ಹೇಳಿಲ್ಲ ಎಂದು ರಾಹುಲ್ ಗೆ ನೋಟಿಸ್ ನೀಡಿದೆ  ಮೇ 23 ರ ಫಲಿತಾಂಶದ ನಂತರ ರಾಜ್ಯ ರಾಜಕಾರಣ ಸೇರಿದಂತೆ ರಾಷ್ಟ್ರದ ರಾಜಕಾರಣ ದಲ್ಲಿ ಸ್ಥಾನ ಪಲ್ಲಟ ನಡೆಯುತ್ತದೆ ಎಂದು ಭವಿಷ್ಯ ನುಡಿದರು.

ಮೋದಿಯವರು ಪಾಪದವರು ಅವರಿಗೆ ಯಾವ ಮಕ್ಕಳು ಮೊಮ್ಮಕ್ಕಳನ್ನು ಮುಂದೆ ತರಬೇಕೆಂದು ಇಲ್ಲ ಕಾಂಗ್ರೆಸ್ ನಲ್ಲಿ ಹಾಗೆಯೇ ಇದೆ. ರಾಜ್ಯದಲ್ಲಿಯೂ ಜೆಡಿಎಸ್ ಕುಟುಂಬ ವ್ಯವಸ್ಥೆ ಹಿಗೆಯೇ ಇದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ತಿರಸ್ಕರಿಸಿ ಎಂದು ಕೃಷ್ಣ ಕರೆ ಕೊಟ್ಟರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!