ಸಿ.ಟಿ. ರವಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು!

By Web DeskFirst Published Apr 26, 2019, 8:18 AM IST
Highlights

ಸಿ.ಟಿ. ರವಿ ವಿರುದ್ಧ ಮಹಿಳಾ ಆಯೋಗಕ್ಕೆ ಕಾಂಗ್ರೆಸ್‌ ದೂರು| ‘ಬಿಜೆಪಿಗೆ ಮತ ಹಾಕದವರು ತಾಯಿಗಂಡರು’ ಹೇಳಿಕೆ ವಿವಾದ| 

ಬೆಂಗಳೂರು[ಏ.26]: ಬಿಜೆಪಿಗೆ ಮತ ಹಾಕದವರು ತಾಯ್ಗಂಡರಿದ್ದಂತೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿಕೆ ನೀಡಿದ್ದು, ಈ ಮೂಲಕ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಮಹಿಳಾ ಕಾಂಗ್ರೆಸ್‌ ಘಟಕವು ಮಹಿಳಾ ಆಯೋಗಕ್ಕೆ ದೂರು ನೀಡಿದೆ.

ರಾಜ್ಯ ಕಾಂಗ್ರೆಸ್‌ ಮಹಿಳಾ ಅಧ್ಯಕ್ಷೆ ಡಾ. ಪುಷ್ಪಲತಾ ಅಮರನಾಥ್‌ ನೇತೃತ್ವದಲ್ಲಿ ಗುರುವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೇ ಬಾಯಿ ಅವರಿಗೆ ದೂರು ಸಲ್ಲಿಸಲಾಗಿದೆ.

‘ಜಯಮಾಲಾ ಮುಖ್ಯಮಂತ್ರಿಗೆ ಸಂಸ್ಕಾರ ಕಲಿ​ಸಲಿ’

‘ಸಿ.ಟಿ. ರವಿ ಅವರು ಬಿಜೆಪಿ ಹಾಗೂ ನರೇಂದ್ರ ಮೋದಿಗೆ ಮತ ಹಾಕದೆ ಇರುವವರು ತಾಯಿ ಗಂಡರಂತೆ ಎಂದು ಹೇಳಿಕೆ ನೀಡಿದ್ದಾರೆ. ಯಾರಾದರೂ ಜಾತಿ ಕಾರಣಕ್ಕೆ, ಧರ್ಮದ ಕಾರಣಕ್ಕೆ ಮತ ಹಾಕದೇ ಹೋದರೆ ಉಂಡ ಮನೆಗೆ ದ್ರೋಹ ಬಗೆದಂತೆ. ನಮ್ಮ ಹಳ್ಳಿ ಕಡೆಯಲ್ಲಿ ಕರೆಯುವ ತಾಯ್ಗಂಡ ಎನ್ನುವ ರೀತಿ ಎಂದು ಹೇಳಿದ್ದಾರೆ. ಈ ಮೂಲಕ ಸ್ತ್ರೀಯರ ಘನತೆಗೆ ಚ್ಯುತಿ ಬರುವಂತಹ ಹೇಳಿಕೆ ನೀಡಿ ಅವಮಾನ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

click me!