ನಿಮ್ಮ ಗಮನಕ್ಕೆ: ಚುನಾವಣೋತ್ತರ ಸಮೀಕ್ಷೆ ಭಾನುವಾರ ಸಂಜೆ 4ಕ್ಕೆ!

By Web DeskFirst Published May 18, 2019, 8:33 PM IST
Highlights

ಅಂತಿಮ ಹಂತಕ್ಕೆ ಬಂದು ತಲುಪಿದ ಲೋಕಸಭೆ ಚುನಾವಣೆ|ಏಳನೇಯ ಹಂತದ ಮತದಾನಕ್ಕೆ ಸಜ್ಜಾಗಿರುವ ಭಾರತ| ಮೇ.23ರ ಮಹಾ ಫಲಿತಾಂಶಕ್ಕೆ ಕಾತರದಿಂದ ಕಾಯುತ್ತಿರುವ ಮತದಾರ| ಲೋಕಸಭೆ ಚುನಾವಣೆಯ ಇಂಚಿಂಚು ಮಾಹಿತಿ ನೀಡಿದ ನಿಮ್ಮ ಸುವರ್ಣನ್ಯೂಸ್ ಮತ್ತು ಸುವರ್ಣನ್ಯೂಸ್.ಕಾಂ| ಮೇ.23 ರ ಫಲಿತಾಂಶಕ್ಕಾಗಿ ಸರ್ವ ಸನ್ನದ್ಧವಾಗಿದೆ ಸುವರ್ಣನ್ಯೂಸ್ ಮತ್ತು ಸುವರ್ಣನ್ಯೂಸ್.ಕಾಂ| ಭಾನುವಾರ(ಮೇ.19) ಸಂಜೆ 4 ಗಂಟೆಗೆ ಚುನಾವಣೋತ್ತರ ಸಮೀಕ್ಷೆ| ರಾಜಕೀಯ ವಿಶ್ಲೇಷಕರು, ತಜ್ಞರಿಂದ ಚುನಾವಣೋತ್ತರ ಸಮೀಕ್ಷೆ|

ಬೆಂಗಳೂರು(ಮೇ.18): 2019ರ ಲೋಕಸಭೆ ಚುನಾವಣೆ ಅಂತಿಮ ಹಂತಕ್ಕೆ ಬಂದು ತಲುಪಿದೆ. 6 ಹಂತದ ಮತದಾನ ಪೂರ್ಣಗೊಳಿಸಿರುವ ಭಾರತ, ಇದೀಗ 7ನೇಯ ಮತ್ತು ಕೊನೆಯ ಹಂತದ ಮತದಾನಕ್ಕೆ ಸಜ್ಜಾಗಿದೆ.

ಇನ್ನು ಮೇ.23ರ ಮಹಾಸಮರದ ಮಹಾ ಫಲಿತಾಂಶಕ್ಕೆ ದೇಶ ಕಾತರದಿಂದ ಎದುರು ನೋಡುತ್ತಿದೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ಕುರ್ಚಿ ಯಾರಿಗೆ ಒಲಿಯಲಿದೆ. ದೇಶದ ಭವಿಷ್ಯವನ್ನು ಮತದಾರ ಯಾರ ಕೈಗೆ ಕೊಡಲಿದ್ದಾನೆ ಎಂಬಿತ್ಯಾದಿ ಚರ್ಚೆಗಳು ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿದೆ.

ಅದರಂತೆ ಲೋಕಸಭೆ ಚುನಾವಣೆಯ ಇಂಚಿಂಚು ಮಾಹಿತಿಯನ್ನು ವೀಕ್ಷಕರು ಮತ್ತು ಓದುಗರಿಗೆ ನೀಡಿದ ಹೆಮ್ಮೆ ನಿಮ್ಮ ಸುವರ್ಣನ್ಯೂಸ್ ಮತ್ತು ಸುವರ್ಣನ್ಯೂಸ್.ಕಾಂ ಗೆ ಇದೆ. ಬರೋಬ್ಬರಿ ಒಂದುವರೆ ತಿಂಗಳಿನಿಂದ ನಿರಂತರವಾಗಿ ಮಹಾಸಮರದ ಎಲ್ಲಾ ಘಟನಾವಳಿಗಳನ್ನು ನಮ್ಮ ಹೆಮ್ಮೆಯ ವೀಕ್ಷಕರು ಮತ್ತು ಓದುಗರಿಗೆ ನಾವು ಉಣಬಡಿಸಿದ್ದೇವೆ.

ಲೋಕಸಭೆ ಚುನಾವಣೆ ಘೋಷಣೆಯಾದ ದಿನಾಂಕದಿಂದ ಹಿಡಿದು, ಇಂದಿನವರೆಗೆ ತನ್ನ ವೀಕ್ಷಕರು ಮತ್ತು ಓದುಗರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ಸುವರ್ಣನ್ಯೂಸ್ ಮತ್ತು ಸುವರ್ಣನ್ಯೂಸ್.ಕಾಂ, ಇದೀಗ ಮೇ.23ರ ಫಲಿತಾಂಶದ ದಿನಕ್ಕಾಗಿ ಸರ್ವ ಸನ್ನದ್ಧವಾಗಿ ಕುಳಿತಿದೆ.

ಇದಕ್ಕೂ ಮೊದಲು ಭಾನುವಾರ(ಮೇ.19) ಲೋಕಸಭೆ ಚುನಾವಣೆಯ ಏಳನೇಯ ಮತ್ತು ಕೊನೆಯ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಸಂಜೆ 4 ಗಂಟೆ ಬಳಿಕ ನಿಮ್ಮ ಸುವರ್ಣನ್ಯೂಸ್‌ನಲ್ಲಿ ಚುನಾವಣೋತ್ತರ ಸಮೀಕ್ಷೆಯ ಕಾರ್ಯಕ್ರಮ ಪ್ರಸಾರವಾಗಲಿದೆ.

ಸುದ್ದಿ ಸಂಸ್ಥೆಯ ಹಿರಿಯ ಮತ್ತು ಅನುಭವಿ ಪತ್ರಕರ್ತರು, ರಾಜಕೀಯ ವಿಶ್ಲೇಷಕರು ಮತ್ತು ತಜ್ಞರಿಂದ ಚುನಾವಣೋತ್ತರ ಸಮೀಕ್ಷೆ ಮತ್ತು ಚರ್ಚೆ ನಡೆಯಲಿದ್ದು, ವೀಕ್ಷಕರು ತಪ್ಪದೇ ಈ ಕಾರ್ಯಕ್ರಮ ನೋಡಬೇಕಾಗಿ ಸುವರ್ಣನ್ಯೂಸ್ ವಿನಂತಿ ಮಾಡುತ್ತದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!