‘ವಾರಣಾಸಿಯಿಂದ ಮೋದಿ ಸೋತರೆ ಇತಿಹಾಸ ಸೃಷ್ಟಿ’

Published : May 18, 2019, 04:17 PM ISTUpdated : May 18, 2019, 05:20 PM IST
‘ವಾರಣಾಸಿಯಿಂದ ಮೋದಿ ಸೋತರೆ ಇತಿಹಾಸ ಸೃಷ್ಟಿ’

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಒಂದು ವೇಳೆ ಸೋತರೆ ಇತಿಹಾಸವೇ ಸೃಷ್ಟಿಯಾಗಲಿದೆ ಎನ್ನುವುದು ರಾಜಕೀಯ ನಾಯಕಿಯೋರ್ವರ ಮಾತಾಗಿದೆ. 

ಲಕ್ನೋ : ವಾರಣಾಸಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಈ ಕ್ಷೇತ್ರದಿಂದ ಗೆಲ್ಲುವುದಕ್ಕಿಂತ ಸೋತರೆ ಇತಿಹಾಸ ಸೃಷ್ಟಿಯಾಗಲಿದೆ ಎಂದು ಬಿಎಸ್ ಪಿ ಮುಖಂಡೆ ಮಾಯಾವತಿ ಹೇಳಿದ್ದಾರೆ. 

ಅಲ್ಲದೇ ಪ್ರಧಾನಿ ಮೋದಿ ಅವರ ಗುಜರಾತ್ ಮಾದರಿ ಅಭಿವೃದ್ಧಿ ಬಗ್ಗೆ ವಾಗ್ದಾಳಿ ನಡೆಸಿದ ಮಾಯಾವತಿ ಇಲ್ಲಿನ ಎಲ್ಲಾ ಅಭಿವೃದ್ಧಿ ಮಾದರಿಯಾಗಿಲ್ಲ. ಬಡತನ, ನಿರುದ್ಯೋಗ, ಹಿಂದುಳಿದ ವರ್ಗಗಳ ಅಭಿವೃದ್ಧಿ ಮಾಡುವಲ್ಲಿ ಮೋದಿ ಯಶಸ್ವಿಯಾಗಿಲ್ಲ. 

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವಿದ್ದು, ಮೋದಿ ಹಾಗೂ ಯೋಗಿ ಸಂಯೋಜನೆಯಲ್ಲಿ  ಕೋಮು ಸಂಘರ್ಷ ಹುಟ್ಟುಹಾಕಲಾಗುತ್ತಿದೆ.  ದೇಶದಲ್ಲಿ ಹಿಂಸಾತ್ಮಕತೆಯನ್ನು ಬಿತ್ತಲಾಗುತ್ತಿದೆ ಎಂದು ಮಾಯಾವತಿ ವಾಗ್ದಾಳಿ ನಡೆಸಿದರು. 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!