ಮಗನ ಸೋಲಿಗೆ ಸಚಿನ್ ಕಾರಣ: ಗೆಹ್ಲೋಟ್ VS ಪೈಲೆಟ್!

By Web DeskFirst Published Jun 4, 2019, 1:50 PM IST
Highlights

ರಾಜಸ್ಥಾನ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಂತರಿಕ ಭಿನ್ನಮತ| ರಾಜಸ್ಥಾನದಲ್ಲಿ ಹೀನಾಯವಾಗಿ ಸೋತ ಕಾಂಗ್ರೆಸ್| ಸಿಎಂ ಅಶೋಕ್ ಗೆಹ್ಲೋಟ್, ಡಿಸಿಎಂ ಸಚಿನ್ ಪೈಲೆಟ್ ನಡುವೆ ಮುನಿಸು| ಮಗ ವೈಭವ್ ಸೋಲಿಗೆ ಸಚಿನ್ ಕಾರಣ ಎಂದ ಅಶೋಕ್| ಜೋಧ್‌ಪುರ ಕ್ಷೇತ್ರದಿಂದ ಹೀನಾಯವಾಗಿ ಸೋತಿದ್ದ ವೈಭವ್ ಗೆಹ್ಲೋಟ್| ಸಚಿನ್ ಪೈಲೆಟ್ ಜೊತೆ ಭಿನ್ನಮತವಿದೆ ಎಂದ ಅಶೋಕ್ ಗೆಹ್ಲೋಟ್|

ಜೈಪುರ್(ಜೂ.04): ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ.

ಸಿಎಂ ಅಶೋಕ್ ಗೆಹ್ಲೋಟ್ ಕುಟುಂಬದ ಭದ್ರಕೋಟೆ ಜೋಧ್‌ಪುರ ಕ್ಷೇತ್ರದಲ್ಲಿ ಮಗ ವೈಭವ್ ಗೆಹ್ಲೋಟ್ ಸೋಲುಂಡಿದ್ದು, ತಮ್ಮ ಮಗನ ಸೋಲಿಗೆ ಡಿಸಿಎಂ ಸಚಿನ್ ಪೈಲೆಟ್ ಕಾರಣ ಎಂದು ಅಶೋಕ್ ಗೆಹ್ಲೋಟ್ ಗಂಭೀರ ಆರೋಪ ಮಾಡಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದು, ಸೋಲಿನ ಹೊಣೆಯನ್ನು ಡಿಸಿಎಂ ಸಚಿನ್ ಪೈಲೆಟ್ ಅವರೇ ಹೊರಬೇಕು ಎಂದು ಸಿಎಂ ಅಶೋಕ್ ಗೆಹ್ಲೋಟ್ ಆಗ್ರಹಿಸಿದ್ದಾರೆ.

ಜೋಧ್‌ಪುರದಲ್ಲಿ ನಾವು ಬಹುದೊಡ್ಡ ಅಂತರದಲ್ಲಿ ಗೆಲ್ಲಬಹುದು ಎಂದು ಪೈಲಟ್ ಸಾಬ್ ಹೇಳಿದ್ದರು. ಅಲ್ಲಿ 6 ಶಾಸಕರು ನಮ್ಮ ಪಕ್ಷದವರೇ ಇದ್ದಾರೆ. ಚುನಾವಣೆ ಪ್ರಚಾರ ಕೂಡ ಬಹಳ ಚೆನ್ನಾಗಿಯೇ ನಡೆದಿತ್ತು. ಕನಿಷ್ಠ ಪಕ್ಷ ಈ ಕ್ಷೇತ್ರದ ಸೋಲಿನ ಹೊಣೆಯನ್ನಾದರೂ ಅವರೇ ಹೊರಬೇಕು ಎಂದು ಗೆಹ್ಲೋಟ್ ಆಗ್ರಹಿಸಿದ್ದಾರೆ.

click me!