ಮೋದಿ ಪ್ರಮಾಣ ವಚನಕ್ಕೆ ಸೈಕಲ್ ನಲ್ಲಿ ಬಂದ ಈ ಸಚಿವ!

Published : May 30, 2019, 06:46 PM ISTUpdated : May 30, 2019, 08:42 PM IST
ಮೋದಿ ಪ್ರಮಾಣ ವಚನಕ್ಕೆ ಸೈಕಲ್ ನಲ್ಲಿ ಬಂದ ಈ ಸಚಿವ!

ಸಾರಾಂಶ

ನರೇಂದ್ರ ಮೋದಿ ಎರಡನೇ ಸಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸಲ್ಲಿಸಲು ಇನ್ನೇನು ಕೆಲವೇ ಕ್ಷಣ ಬಾಕಿ ಇದೆ. ಮೋದಿ ಸಂಪುಟದಲ್ಲಿ ಮತ್ತೊಂದು ಅವಧಿಗೆ ಸಚಿವರಾಗಲು ಸಿದ್ಧರಾಗಿರುವ  ಮನ್ಸುಖ್ ಎಲ್. ಮಂಡವಿಯ ಮಾತ್ರ ಎಲ್ಲರ ಗಮನ ಸೆಳೆದಿದ್ದಾರೆ.

ನವದೆಹಲಿ[ಮೇ. 30] ಸ್ವತಃ ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸೈಕಲ್ ನಲ್ಲಿ ತೆರಳುವುದಾಗಿ ಸಂಸದ ಮನ್ಸುಖ್ ಎಲ್. ಮಂಡವಿಯ ಹೇಳಿದ್ದಾರೆ.

47 ವರ್ಷದ ನಾಯಕ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವರಾಗಿ ಎನ್ ಡಿಎ ಸರಕಾರದಲ್ಲಿ ಕಾರ್ಯ ನಿರ್ವಹಿಸಿದ್ದರು. ಇದೀಗ ಮತ್ತೆ ಸಚಿವರಾಗುವುದು ಖಾತ್ರಿಯಾಗಿದೆ.

ಮೋದಿ ಮತ್ತೊಮ್ಮೆ : ಮಲ್ಲಿಗೆ ಹೂ ಫ್ರೀ ವಿತರಿಸಿದ ಮುಸ್ಲಿಂ ವ್ಯಾಪಾರಿ

ನನಗೆ ಸೈಕಲ್ ಮೂಲಕ ತೆರಳಿ ಪ್ರಚಾರ ಪಡೆದುಕೊಳ್ಳಬೇಕು ಎಂಬುದೂ ಏನೂ ಇಲ್ಲ. ಸೈಕಲ್ ಚಲಾವಣೆ ನನಗೆ ಫ್ಯಾಷನ್ ಅಲ್ಲ ಅದೊಂದು ಪ್ಯಾಷನ್ ಎಂದು ಹೇಳಿದ್ದಾರೆ. ನಿಸರ್ಗ ಸ್ನೇಹಿ ವಾತಾವರಣಕ್ಕೂ ಇದೇ ಪೂರಕ ಎಂದಿದ್ದಾರೆ. ಈ ಸಂಸದರು ರಾಷ್ಟ್ರಪತಿ ಭವನಕ್ಕೆ ಯಾವಾಗಲೂ ಸೈಕಲ್ ನಲ್ಲಿಯೇ ಆಗಮಿಸುತ್ತಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!