ಮಾಜಿ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್‌ಗೆ ಸಚಿವ ಸ್ಥಾನ!

By Web Desk  |  First Published May 30, 2019, 5:29 PM IST

ಮೋದಿ-1 ಸರ್ಕಾರದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ  ಎಸ್. ಜೈಶಂಕರ್| ಮೋದಿ-2 ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಜೈಶಂಕರ್| ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾಗಿ ಜೈಶಂಕರ್ ಆಯ್ಕೆ| ಅಮೆರಿಕ, ಚೀನಾ ದೇಶಗಳ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಜೈಶಂಕರ್|


ನವದೆಹಲಿ(ಮೇ.30): ಮಹತ್ವದ ಬೆಳವಣಿಗೆಯೊಂದರಲ್ಲಿ ಮೋದಿ-1 ಸರ್ಕಾರದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ  ಎಸ್. ಜೈಶಂಕರ್, ಇದೀಗ ಮೋದಿ-2 ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜೈಶಂಕರ್ ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿರುವುದು ಬಹುತೇಕ ನಿಶ್ಚಿತವಾಗಿದೆ. ಜೈಶಂಕರ್ ಮೋದಿ-2 ಸರ್ಕಾರದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

Delhi: Former Foreign Secretary S. Jaishankar (File pic) also arrives at 7 Lok Kalyan Marg (PM Modi's residence). pic.twitter.com/sKJCz5zf39

— ANI (@ANI)

ಅಮೆರಿಕ, ಚೀನಾ ಸೇರಿದಂತೆ ಹಲವು ಪ್ರಮುಖ ದೇಶಗಳಿಗೆ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಜೈಶಂಕರ್, ಅಮೆರಿಕ-ಭಾರತ ನಡುವಿನ ಅಣು ಒಪ್ಪಂದದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.
 

click me!