ಮತ ಮಾಹಿತಿ ಪಡೆಯಲು ಇದೆ ಆಯೋಗದ ಮೊಬೈಲ್ ನಂಬರ್

By Web DeskFirst Published Apr 17, 2019, 4:55 PM IST
Highlights

ಮೊದಲ ಹಂತದ ಮತದಾನಕ್ಕೆ ಸಜ್ಜಾದ ಕರ್ನಾಟಕ| ರಾಷ್ಟ್ರೀಯ ಹಬ್ಬಕ್ಕೆ ಚುನಾವಣಾ ಆಯೋಗದ ಸಕಲ ಸಿದ್ಧತೆ| ಮತದಾರರ ಪಟ್ಟಿಯ ಮಾಹಿತಿ ಪಡೆಯಲು ಚುನಾವಣಾ ಆಯೋಗದ ಮೊಬೈಲ್ ನಂಬರ್| 9731979899 ಮೊಬೈಲ್ ಸಂಖ್ಯೆಗೆ ಮೆಸೆಜ್ ಮಾಡುವ ಮೂಲಕ ಪಡೆಯಬಹುದು ಮಾಹಿತಿ| ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಸುವರ್ಣನ್ಯೂಸ್.ಕಾಂ ಮನವಿ|

ಬೆಂಗಳೂರು(ಏ.17): ನಾಳೆ(ಏ.18) ರಂದು ಕರ್ನಾಟಕದಲ್ಲಿ ಮೊದಲ ಹಂತ(ದೇಶದಲ್ಲಿ ಎರಡನೇ ಹಂತ)ದ ಮತದಾನ ನಡೆಯಲಿದ್ದು, ಪ್ರಜಾಪ್ರಭುತ್ವ ರಾಷ್ಟ್ರೀಯ ಹಬ್ಬ ಎಂದೇ ಪರಿಗಣಿಸಲ್ಪಡುವ ಸಾರ್ವತ್ರಿಕ ಚುನಾವಣೆಗೆ ರಾಜ್ಯ ಕೂಡ ಸಜ್ಜಾಗಿದೆ.

ಈಗಾಗಲೇ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಪೂರ್ಣಗೊಳಿಸಿದ್ದು, ಮತದಾರನಿಗೆ ಮತದಾನದ ಕರಾರುವಕ್ಕು ಮಾಹಿತಿ ನೀಡುವಲ್ಲಿ ಯಶಸ್ಸು ಕಂಡಿದೆ.

ಅದರಂತೆ ಮತದಾರ ಪಟ್ಟಿಯಲ್ಲಿನ ಮಾಹಿತಿ ತಿಳಿದುಕೊಳ್ಳಲು ಚುನಾವಣಾ ಆಯೋಗದ 9731979899 ಮೊಬೈಲ್ ಸಂಖ್ಯೆಗೆ KAEPIC ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನಿಮ್ಮ ಓಟರ್ ಐಡಿ ಸಂಖ್ಯೆ ಟೈಪ್ ಮಾಡಿ SMS ಕಳಿಸಬೇಕು. 

(KAEPIC RSB1220805) ತಕ್ಷಣವೇ ನಿಮ್ಮ ವಾರ್ಡ್, ಬೂತ್, ಕ್ರಮ ಸಂಖ್ಯೆ ನಿಮ್ಮ ಮೊಬೈಲ್ ಸಂಖ್ಯೆಗೆ ಪೂರ್ಣ ಮಾಹಿತಿ SMS ಮೂಲಕ ಬರುತ್ತದೆ. 

ಈ ಬಾರಿ ಮನೆ ಮನೆಗೆ ಬೂತ್ ಸ್ಲಿಪ್ ಬರುವುದಿಲ್ಲವಾದ್ದರಿಂದ, ನಿಮಗೆ ಬಂದ sms ಕೂಡ ಮತಗಟ್ಟೆಯಲ್ಲಿ ತೋರಿಸಿ ಮತದಾನ ಮಾಡಬಹುದಾಗಿದೆ. ಈ ಮಾಹಿತಿಯನ್ನು ಇತರರಿಗೂ ಹಂಚಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕೆಂದು ನಿಮ್ಮ ಸುವರ್ಣನ್ಯೂಸ್.ಕಾಂ ಮನವಿ ಮಾಡತ್ತದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!