ಬಿಜೆಪಿ ನಾಯಕ ಶ್ರೀರಾಮುಲು ದೋಸ್ತಿ ಸರಕಾರದ ಮೇಲೆ ವಾಗ್ದಾಳಿ ಮಾಡಿದ್ದಾರೆ. ಅಲ್ಲದೇ ಕುಮಾರಸ್ವಾಮಿ ಸರಕಾರವನ್ನು ಕಮಿಷನ್ ಸರಕಾರ ಎಂದು ಟೀಕಿಸಿದ್ದಾರೆ.
ಬಾಗಲಕೋಟೆ( ಏ. 17) ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದ 'ನಿಖಿಲ್ ಎಲ್ಲಿದ್ದೀಯಪ್ಪಾ?' ವಿಚಾರ ಇಟ್ಟುಕೊಂಡು ಬಿಜೆಪಿ ನಾಯಕ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಮೊದಲ ಹಂತದ ಚುನಾವಣಾ ಪ್ರಚಾರ ಮುಗಿದಿದೆ. ಎರಡನೇ ಚುನಾವಣೆಗಾಗಿ ಅಲ್ಲಿದ್ದ ನಾಯಕರಗಳ ತಂಡ ಈ ಕಡೆಗೆ ಬತಿ೯ದೆ. ಒಂದನೇ ಹಂತದಲ್ಲಿ ಚುನಾವಣೆಯಲ್ಲಿ ನಿಖಿಲ್ ಎಲ್ಲಿದ್ದರಪ್ಪಾ ಅಂತ ಜನ ಕೇಳ್ತಿದ್ರು, ಈಗ ಎರಡನೇ ಹಂತದಲ್ಲಿ ಈ ಭಾಗದ ಜನರು ಮುಖ್ಯಮಂತ್ರಿ ಎಲ್ಲಿದ್ದರಪ್ಪಾ ಅಂತ ಕೇಳಬೇಕಾಗುತ್ತದೆ ಎಂದು ಹೇಳಿದರು.
ಬಿಜೆಪಿಗೆ ಆಘಾತ, ಬಾಗಲಕೋಟೆ ಕೈ ಅಭ್ಯರ್ಥಿ ಜತೆ ಪ್ರಭಾವಿ ನಾಯಕ
ಉತ್ತರ ಕನಾ೯ಟಕ ಭಾಗವನ್ನ ಕುಮಾರಸ್ವಾಮಿ ನಿಲ೯ಕ್ಷ್ಯ ಮಾಡಿದ್ದಾರೆ. ಎಲ್ಲ ಅನುದಾನವನ್ನು ಐದು ಜಿಲ್ಲೆಗಳಿಗೆ ಉಪಯೋಗಿಸಿದ್ದಾರೆ. ಕಮಿಷನ್ ಹೊಡೆಯಲು ಎಲ್ಲ ಅನುದಾನ ಬೇಕಾದ ಜಿಲ್ಲೆಗೆ ಹಂಚಿದ್ದಾರೆ ಎಂದು ಆರೋಪಿಸಿದರು. ಆ ಕಮಿಷನ್ ಹಣದಿಂದನೇ ಚುನಾವಣೆ ಮಾಡಿ ನೂರಾರು ಕೋಟಿ ಹಾಕಿ ಮಗನ ಗೆಲ್ಲಿಸೋಕೆ ಪ್ರಯತ್ನ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆ ನಂತ್ರ ಈ ಸಕಾ೯ರ ಬಿದ್ದು ಹೋಗುತ್ತೇ, ಸಕಾ೯ರಕ್ಕೆ ಅಸ್ತಿತ್ವ ಇಲ್ಲ ಬಿಜೆಪಿ ಮತ್ತೇ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾದ್ರೂ ಏಳೆಂಟು ಸ್ಥಾನಕ್ಕಿಂತ ಜಾಸ್ತಿ ಬರೋ ಪರಿಸ್ಥಿತಿ ಇಲ್ಲ ಬಿಜೆಪಿ ರಾಜ್ಯದಲ್ಲಿ 24 ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.