ರಾಜಕೀಯಕ್ಕೆ ಗುಡ್ ಬೈ ಹೇಳಿದ್ದ ಮಾಜಿ ಸಚಿವ ಲೋಕಸಭಾ ಅಖಾಡಕ್ಕೆ, ಸಿದ್ದುಗೆ ಪಂಥಾಹ್ವಾನ

By Web DeskFirst Published Mar 18, 2019, 4:24 PM IST
Highlights

ಮತ್ತೆ ಸಿದ್ದು ವಿರುದ್ಧ ಯುದ್ಧಕ್ಕೆ‌ ನಿಂತ ಪ್ರಸಾದ್ | ಚಾಮರಾಜನಗರ ಲೋಕಸಭ ಕ್ಷೇತ್ರದಿಂದ ಬಿಜೆಪಿಯದ ಚುನಾವಣೆ ಸ್ಪರ್ಧೆ ಮಾಡುತ್ತೇನೆಂದ ಪ್ರಸಾದ್ | ಶ್ರೀನಿವಾಸ್ ಪ್ರಸಾದ್ ಎಂಟ್ರಿಯಿಂದ ರಂಗೇರಿದ ಚಾಮರಾಜನಗರ ಕದನ‌‌ ಕಣ.

ಮೈಸೂರು, (ಮಾ.18): ರಾಜಕೀಯದಿಂದಲೇ ದೂರು ಇರುತ್ತೇನೆ ಎಂದು ಹೇಳಿದ್ದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಇದೀಗಾ ಲೋಕಸಭ ಚುನಾವಣೆ ಸ್ಪರ್ಧೆಗೆ‌ ಮುಂದಾಗಿದ್ದಾರೆ.

 ಶ್ರೀನಿವಾಸ್ ಪ್ರಸಾದ್ ಎಂಟ್ರಿಯಿಂದ ಚಾಮರಾಜನಗರ ಕದನ‌‌ ಕಣ ರಂಗೇರಿದೆ. ನಂಜನಗೂಡು ಉಪಚುನಾವಣೆ ಸೋಲಿನ‌ ನಂತರ ಚುನಾವಣೆ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದ ಪ್ರಸಾದ್ ಮತ್ತೆ ಕದನ‌ ಕಣಕ್ಕೆ ಇಳಿದಿದ್ದಾರೆ. 

ಬದಲಾದ ಚಾಮರಾಜನಗರ, ಶಿಷ್ಯನ ಮಣಿಸಲು ಗುರುವೇ ಅಖಾಡಕ್ಕೆ

ಈ ಬಾರಿಯ ಲೋಕಸಭ ಚುನಾವಣೆಯಲ್ಲಿ ಕಾಂಗ್ರೆಸ್ ನ ದೃವನಾರಾಯಣ್ ವಿರುದ್ಧ ಸ್ಪರ್ಧೆ ನಡೆಸುತ್ತಿರುವ ಶ್ರೀನಿವಾಸ್ ಪ್ರಸಾದ್, ಚುನಾವಣೆಯಲ್ಲಿ ಗುರು ಶಿಷ್ಯ ಸಂಬಂಧ ಇರುವುದಿಲ್ಲ ಎನ್ನುವ ಮೂಲಕ ನೇರ ಸ್ಪರ್ಧೆಗೆ ಆಹ್ಬಾನಿಸಿದ್ದಾರೆ. 

 ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಎದುರಾಳಿಯು ಎಂದು ಕೂಡ ಆ ಭಾವನೆಯಿಂದ ನಡೆದುಕೊಂಡಿಲ್ಲ. ಈಗ ಅಂತಹ ಯಾವುದೇ ಸಂಬಂಧಿಗಳು ಉಳಿದಿಲ್ಲ ಎನ್ನುವ ಮೂಲಕ ದೃವನಾರಾಯಣ್ ಗೆ ‌ ಮಾತಿನ ಮೂಲಕ ಟಾಂಗ್ ಕೊಟ್ಟು ಅಖಾಡಕ್ಕೆ ಸಿದ್ದ ಎಂದಿದ್ದಾರೆ.

ಇನ್ನು ಬೆಂಗಳೂರಿನಿಂದ ಮೈಸೂರಿಗೆ ಬಂದು ಇಳಿಯುತ್ತಿದ್ದಂತಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಪ್ರಸಾದ್, ಜಟ್ಟಿ ನೆಲಕ್ಕೆ ಬಿದ್ದರು‌ ಮೀಸೆ ಮಣ್ಣಗಾಲಿಲ್ಲ ಎನ್ನುವಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಿದ್ದಾನೆ ಎಂದು ಕಿಡಿಕಾರಿದರು.

 ಈಗಾಗಲೇ ಒಮ್ಮೆ ಉಪಚುನಾವಣೆಯ ಸೇಡು ತೀರಿಸಿಕೊಂಡ ಭಾವನೆ ನನಗಿದೆ. ಬೇಕಾದರೆ ನನ್ನ ವೈರಿಗಳೆಲ್ಲ‌ ಒಂದಾಗಿ‌ ಬಂದರು ನಾನು ಎದರುವುದಿಲ್ಲ.  ಯುದ್ದಕ್ಕೆ ಸಿದ್ದನಿದ್ದೇನೆ ಎಂದು ಹೇಳುವ ಮೂಲಕ ಸಿದ್ದು ಟೀಮ್ ಗೆ ಖಡಕ್ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ.

click me!