ಸೂರ್ಯನಲ್ಲೂ ಮೊಳಗಿದ ‘ನಿಖಿಲ್ ಎಲ್ಲಿದ್ದೀಯಪ್ಪ’ ಕೂಗು: ವಿಡಿಯೋ!

Published : Mar 20, 2019, 01:11 PM ISTUpdated : Mar 20, 2019, 01:19 PM IST
ಸೂರ್ಯನಲ್ಲೂ ಮೊಳಗಿದ ‘ನಿಖಿಲ್ ಎಲ್ಲಿದ್ದೀಯಪ್ಪ’ ಕೂಗು: ವಿಡಿಯೋ!

ಸಾರಾಂಶ

ಸೂರ್ಯನ ಶಬ್ಧ ಸೆರೆಹಿಡಿದ ನಾಸಾ| ಸೂರ್ಯನ ಶಬ್ಧ ಕೇಳಿಸಿಕೊಂಡ ನಾಸಾ ದಿಗ್ಭ್ರಾಂತ| ಸೂರ್ಯನಲ್ಲೂ ಪ್ರತಿಧ್ವನಿಸುತ್ತಿದೆ ‘ನಿಖಿಲ್ ಎಲ್ಲಿದ್ದೀಯಪ್ಪ’ ಹೇಳಿಕೆ| ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋ ವೈರಲ್| ಕುಮಾರಸ್ವಾಮಿ, ನಿಖಿಲ್ ಸಂಭಾಷಣೆಯನ್ನು ಸೂರ್ಯನ ಶಬ್ಧಕ್ಕೆ ಹೋಲಿಕೆ|

ಬೆಂಗಳೂರು(ಮಾ.20): ಸಿಎಂ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ನಡುವಿನ ಸಂಭಾಷಣೆ ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ಟ್ರೋಲ್ ಆಗಿದೆ. 

ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ಉಲ್ಲೇಖಿಸಿ ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂದು ಕೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ ಹರಿದಾಡುತ್ತಿದೆ.

ಅದರಂತೆ ಟ್ರೋಲಿಗರು ಮತ್ತೊಂದು ಹೊಸ ವಿಡಿಯೋ ಬಿಡುಗಡೆ ಮಾಡಿದ್ದು, ನಾಸಾ ಸೂರ್ಯನ ಶಬ್ಧ ಸೆರೆ ಹಿಡಿದ ಅಪರೂಪದ ಕ್ಷಣಕ್ಕೆ ಕುಮಾರಸ್ವಾಮಿ ಮತ್ತು ನಿಖಿಲ್ ನಡುವಿನ ಸಂಭಾಷಣೆಯನ್ನು ಜೋಡಿಸಲಾಗಿದೆ.

"

ನಿರೂಪಕ ಸೂರ್ಯ ಹೇಗೆ ಶಬ್ಧ ಮಾಡುತ್ತಾನೆ ಎಂದು ವಿವರಸಿದ ಬಳಿಕ ‘ನಿಖಿಲ್ ಎಲ್ಲಿದ್ದೀಯಪ್ಪ’ ಎಂಬ ಕುಮಾರಸ್ವಾಮಿ ಧ್ವನಿ ಕೇಳಿಸುತ್ತದೆ. ಬಳಿಕ ನಿರೂಪಕ ಇದನ್ನು ಬ್ರಹ್ಮಾಂಡದಲ್ಲಿ ಅತ್ಯಂತ ಗೊಂದಲಮಯ ಶಬ್ಧ ಎಂದು ಹೇಳುತ್ತಾನೆ.

ಒಟ್ಟಿನಲ್ಲಿ ‘ನಿಖಿಲ್ ಎಲ್ಲಿದ್ದೀಯಪ್ಪ’ ಭಾರೀ ಟ್ರೋಲ್ ಗೆ ಒಳಗಾಗಿದ್ದು, ದಿನಕ್ಕೊಂದು ಹೊಸ ಹೊಸ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!