ರೌಡಿ ಶೀಟರ್ ಜೊತೆ ಅನಂತ್‌ ಕುಮಾರ್ -ಬಿಜೆಪಿ ಕಾರ್ಯಕರ್ತರಿಂದ ಮಂಗಳಾರತಿ!

Published : Mar 20, 2019, 01:02 PM ISTUpdated : Mar 20, 2019, 01:06 PM IST
ರೌಡಿ ಶೀಟರ್ ಜೊತೆ ಅನಂತ್‌ ಕುಮಾರ್ -ಬಿಜೆಪಿ ಕಾರ್ಯಕರ್ತರಿಂದ ಮಂಗಳಾರತಿ!

ಸಾರಾಂಶ

ರೌಡಿ ಶೀಟರ್ ಜೊತೆಗೆ ಕಾಣಿಸಿಕೊಳ್ಳುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗೆಡೆಗೆ ಬಿಜೆಪಿ ಕಾರ್ಯಕರ್ತರೆ ಮಂಗಳಾರಾತಿ ಮಾಡಿದ್ದಾರೆ. ಲೋಕಸಭಾ ಚುನಾವಣೆ ಕಣ ರಂಗೇರುತ್ತಿದ್ದಂತೆ ಅನಂತ್ ವಿವಾದ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರವಾರ(ಮಾ.20): 2019ರ ಲೋಕಸಭಾ ಚುನಾವಣೆ ಕಾವು ಏರುತ್ತಿದ್ದಂತೆ ಕೇಂದ್ರ ಸಚಿವ ಅನಂತ್‌ ಕುಮಾರ್ ಹೆಗಡೆ ಒಂದಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ರೌಡಿ ಶೀಟರ್ ಫಯಾಝ್ ಚೌಟಿ ಜೊತೆ ಸುಮಾರು 30ಕ್ಕೂ ಹೆಚ್ಚು ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಂಡಿರುವುದು ಇದೀಗ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: 30 ಪ್ರಕರಣವಿರುವ ರೌಡಿ ಶೀಟರ್ ಜತೆ ಅನಂತ್ ಕುಮಾರ್ ಹೆಗಡೆ ರೌಂಡ್ಸ್!

ಅನಂತ್ ಕುಮಾರ್ ಹೆಗಡೆ ಹಾಗೂ ರೌಡಿ ಶೀಟರ್ ಫಯಾಝ್ ಚೌಟಿ ನಡುವಿನ ಸ್ನೇಹ  ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂ ಪೈಯರ್ ಬ್ರ್ಯಾಂಡ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳಾರತಿ ಮಾಡಲಾಗಿದೆ. ಫೇಸ್ಬುಕ್ ಹಾಗೂ ಇತರ ಸಾಮಾಜಿ ಮಾಧ್ಯಮಗಳಲ್ಲಿ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.

ಇದನ್ನೂ ಓದಿ: ಮತಯಾಚನೆಗೆ ಹೋಗಿ ನೀತಿ ಸಂಹಿತೆ  ಉಲ್ಲಂಘಿಸಿದ ಅನಂತ್ ಕುಮಾರ್ ಹೆಗಡೆ?

ಅನ್ಯ ಧರ್ಮದ ರಕ್ತವನ್ನು ಟೀಕಿಸುತ್ತಿದ್ದ ಅನಂತ್ ಕುಮಾರ್ ಹೆಗಡೆ ಇದೀಗ ಅನ್ಯಧರ್ಮದ ರೌಡಿ ಶೀಟರ್ ಜೊತೆ ಕಾಣಿಸಿಕೊಂಡಿದ್ದಾರೆ.  ರೌಡಿ ಶೀಟರ್‌ಗೆ ಕುರ್ಚಿ, ಪಕ್ಷ ಸಂಘಟನೆಯಲ್ಲಿ ತೊಡಗಿಸಿರುವ ಸಾಮಾನ್ಯ ಕಾರ್ಯಕರ್ತನಿಗೆ ಜೈಲು. ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಸಹವಾಸವೇ ಬೇಡ ಎಂದು ಬಿಜೆಪಿ ಹಾಗೂ ಹಿಂದೂ ಯುವ ಪಡೆ ಅನಂತ್ ಕುಮಾರ್ ಹೆಗೆಡೆ ವಿರುದ್ಧ ತಿರುಗಿ ಬಿದ್ದಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!