'ದೇಶದಲ್ಲಿ ಬಿಜೆಪಿ 125ಕ್ಕಿಂತ ಹೆಚ್ಚು ಸೀಟು ಗೆಲ್ಲಲ್ಲ'

By Web DeskFirst Published Apr 1, 2019, 12:01 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಗೆಲುವಿನ ಕಸರತ್ತು ಪಕ್ಷಗಳಲ್ಲಿ ನಡೆಯುತ್ತಿದ್ದು, ಭರ್ಜರಿ ಪ್ರಚಾರದಲ್ಲಿ ತೊಡಗಿವೆ. 

ನವದೆಹಲಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ವಿವಿಧ ಪಕ್ಷಗಳಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಯುತ್ತಿದ್ದು, ಗೆಲುವಿಗಾಗಿ ಸಕಲ ಕಸರತ್ತಿನಲ್ಲಿ ತೊಡಗಿವೆ. 

ಇದೇ ವೇಳೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಗೆ ತಮ್ಮ ರಾಜ್ಯದಲ್ಲಿ ಒಂದೇ ಒಂದು ಸ್ಥಾನವೂ ದೊರೆಯುವುದಿಲ್ಲ ಎಂದಿದ್ದಾರೆ. 

ಇನ್ನು ದೇಶದಲ್ಲಿ 543 ಲೋಕಸಭಾ ಕ್ಷೇತ್ರಗಳಲ್ಲಿ ಮೋದಿ ನೇತೃತ್ವದ ಎನ್ ಡಿ ಎ ಪಡೆಯು 125  ಸ್ಥಾನಗಳನ್ನೂ ಕೂಡ ಪಡೆಯಲು ಸಾಧ್ಯವಿಲ್ಲ ಎಂದರು. 

ಇನ್ನು ಬಿಜೆಪಿಗೆ ಬೆಂಬಲ ನೀಡುವವರಲ್ಲಿ ಒಂದು ಕಿವಿಮಾತು. ದೇಶದ ಹಿತದೃಷ್ಟಿಯಿಂದ, ದೇಶವನ್ನು ನೀವು ಪ್ರೀತಿಸುವುದಾದಲ್ಲಿ ಅಮಿತ್ ಶಾ ಹಾಗೂ ನರೇಂದ್ರ ಮೋದಿಗೆ ಬೆಂಬಲ ನೀಡಬೇಡಿ ಎಂದಿದ್ದಾರೆ.

ಇಬ್ಬರು ದೇಶವನ್ನು ವಿಭಜನೆ ಮಾಡುತ್ತಿದ್ದು, ಇದೊಂದು ಒಳ್ಳೆಯ ಸಂದರ್ಭವಾಗಿದ್ದು, ನಿಮ್ಮ ಅಮೂಲ್ಯವಾದ ಮತವನ್ನು ನಿಮ್ಮ ಅಭಿವೃದ್ಧಿಯತ್ತ ಗಮನ ಹರಿಸುವವರಿಗೆ ನೀಡಿ ಎಂದಿದ್ದಾರೆ. 

ದೇಶದಲ್ಲಿ ಯಾವುದೇ ರಾಜ್ಯಗಳನ್ನು ಭಿನ್ನತೆಯಿಂದ ಕಾಣದ ಪ್ರಧಾನಿಯ ಅಗತ್ಯವಿದೆ. ಆದರೆ ಗುಜರಾತ್, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಎಂದು ವಿಂಗಡಣೆ ಮಾಡುವ ಪ್ರಧಾನಿಯಲ್ಲ ಎಂದರು. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!