'ಕುಮಾರಸ್ವಾಮಿ ಹಾಡು ಕೇಳಲು, ಮಮತಾ ಬ್ಯಾನರ್ಜಿ ಡ್ಯಾನ್ಸ್ ನೋಡಲು ಜನ ಸೇರ್ತಾರಾ'?

By Web DeskFirst Published Mar 19, 2019, 11:21 AM IST
Highlights

ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ ಕೇಂದ್ರ ಸಚಿವ ಮಹೇಶ್ ಶರ್ಮಾ | ಪ್ರಿಯಾಂಕಾ ಗಾಂಧಿ ಅವರನ್ನು ‘ಪಪ್ಪು-ಪಪ್ಪಿ’ ಎಂದು ಜರಿದಿದ್ದಾರೆ | ಮಮತಾ ಬ್ಯಾನರ್ಜಿಯನ್ನೂ ಟೀಕಿಸಿದ್ದಾರೆ. 

ಬುಲಂದಶಹರ್‌ (ಉ.ಪ್ರ.):  ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೃತ್ಯ ನೋಡಲು ಅಥವಾ ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಡು ಕೇಳಲು ಯಾರಾದರೂ ಜನ ಸೇರುತ್ತಾರಾ?’ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್‌ ಶರ್ಮಾ ವ್ಯಂಗ್ಯವಾಡಿದ್ದಾರೆ. ಜೊತೆಗೆ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ‘ಪಪ್ಪು-ಪಪ್ಪಿ’ ಎಂದು ಜರಿದಿದ್ದಾರೆ.

'ಬಿಜೆಪಿ ಎನ್ನುವ ಉಡುಪಿ, ಕಾಪು, ಬ್ರಹ್ಮಾವರ, ಕಾರ್ಕಳದವರಿಗೆ ತಿಳಿವಳಿಕೆ ಕಡಿಮೆ!'

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬುಲಂದಶಹರ್‌ ಜಿಲ್ಲೆಯ ಸಿಕಂದರಾಬಾದ್‌ನಲ್ಲಿ ಸಣ್ಣ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಶರ್ಮಾ, ‘ಪ್ರತಿಪಕ್ಷಗಳು ದುರ್ಬಲವಾಗಿವೆ. ಮೋದಿ ಅವರನ್ನು ಎದುರಿಸಲು ಅವುಗಳಿಗೆ ಶಕ್ತಿಯಿಲ್ಲ. ಮಮತಾ ಬ್ಯಾನರ್ಜಿ ನೃತ್ಯ ನೋಡಲು, ಕುಮಾರಸ್ವಾಮಿ ಹಾಡು ಕೇಳಲು ಯಾರಾದರೂ ಇಲ್ಲಿ ಜನ ಸೇರುತ್ತಾರಾ?’ ಎಂದು ಕುಟುಕಿದರು.

ಕರ್ನಾಟಕದಿಂದ ರಾಹುಲ್ ಸ್ಪರ್ಧೆ?: #ಒಂದ್_ಕೈ_ನೋಡ್ತೀವಿ ಎಂದ ಕನ್ನಡಿಗರು

ರಾಹುಲ್‌-ಪ್ರಿಯಾಂಕಾ ಅವರನ್ನು ಟೀಕಿಸಿದ ಶರ್ಮಾ, ‘ಮೊದಲು ಪಪ್ಪು ತಾನು ಪ್ರಧಾನಿ ಆಗುತ್ತೇನೆ ಎಂದ. ಈಗ ಪಪ್ಪು ಜತೆ ಪಪ್ಪಿ ಕೂಡ ಬಂದಿದ್ದಾಳೆ. ಆದರೆ ಅವರ ಮೇಲೆ ನೋಡಿದರೆ ಮೋದಿ ಎಂಬ ಸಿಂಹ ಕೂತಿದೆ’ ಎಂದು ನಗೆಗಡಲಿನ ಮಧ್ಯೆ ಹೇಳಿದರು.

click me!