ಪ್ರಚಾರ ಮಾತ್ರ ಅಲ್ಲ, ಮತದಾರರ ಸೆಳೆಯಲು ಸುಮಲತಾರ ಹೊಸ ವಿಧಾನ

Published : Apr 03, 2019, 08:48 PM ISTUpdated : Apr 03, 2019, 09:50 PM IST
ಪ್ರಚಾರ ಮಾತ್ರ ಅಲ್ಲ, ಮತದಾರರ ಸೆಳೆಯಲು ಸುಮಲತಾರ ಹೊಸ ವಿಧಾನ

ಸಾರಾಂಶ

ಮಂಡ್ಯ ರಣ ಕಣದಲ್ಲಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ. ಸುಮಲತಾ ಅಂಬರೀಶ್ ಅವರಿಗೆ 20ನೇ ಕ್ರಮ ಸಂಖ್ಯೆ ಸಿಕ್ಕಿದ್ದು  ಇದೀಗ ತಮ್ಮ ಸೋಶಿಯಲ್ ಮೀಡಿಯಾ  ಮೂಲಕ ಜನರಿಗೆ ಮತ್ತಷ್ಟು ತಿಳಿವಳಿಕೆ ನೀಡುವ ಕೆಲಸ ಮಾಡಿದ್ದಾರೆ.

ಮಂಡ್ಯ[ಏ. 03]  ಮತಯಂತ್ರದ ಪ್ರಾತ್ಯಕ್ಷಿಕೆ ನೀಡಿ ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಸುಮಲತಾ ಅಂಬರೀಶ್  ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ. ಸುಮಾರು 37 ಸೆಕೆಂಡ್‌ಗಳ ವಿಡಿಯೋದಲ್ಲಿ ಸುಮಲತಾ ಅನೇಕ ವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ.

 ‘ರಾಮನವಮಿ ಮಜ್ಜಿಗೆ, ಪಾನಕಕ್ಕೂ ಟ್ಯಾಕ್ಸ್ ಅಂದ್ರೇ ಏನ್ ಮಾಡ್ಬೇಕೋ.?’

‘ಬಂಧುಗಳೆ ..ಇದು ಮಂಡ್ಯದ ಲೋಕಸಭಾ ಚುನಾವಣೆಯ ಮತ ಯಂತ್ರದ ಪ್ರಾತ್ಯಕ್ಷಿಕೆ.. ಇದು ಪ್ರತಿ ಮನೆಗೂ ತಲುಪುವಂತೆ ನೋಡಿಕೊಳ್ಳಿ ..ಮತಯಂತ್ರದಲ್ಲಿ ನನ್ನ ಭಾವಚಿತ್ರ ಮತ್ತು ನನ್ನ ಗುರುತು ಇರುತ್ತದೆ. ಇದನ್ನು ಜನತೆಯ ಮನಸ್ಸಿನ ಆಳದಲ್ಲಿ ಬೇರೂರುವಂತೆ ಮಾಡಿ .ಇದು ನನ್ನ ಪ್ರೀತಿಯ ಮನವಿ ..ಸುಮಲತಾ ಅಂಬರೀಶ್‘

22 ಜನ ಸ್ಪರ್ಧಿಗಳಿದ್ದು, ಎರಡು ಮತಯಂತ್ರ ಇರಲಿದೆ. ಎಡಭಾಗ ಇರುವ ಮತಯಂತ್ರದಲ್ಲಿ 16 ಜನ ಅಭ್ಯರ್ಥಿಗಳ ಹೆಸರಿದ್ದರೆ, ಬಲಭಾಗದ ಮತಯಂತ್ರದಲ್ಲಿ 20 ನೇ ಕ್ರಮ ಸಂಖ್ಯೆಯಲ್ಲಿ ಸುಮಲತಾ ಹೆಸರಿರಲಿದೆ ಎಂದು ವಿವರಣೆಯನ್ನು ನೀಡಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!