'ಕಂಡ-ಕಂಡವರನ್ನು ಅಪ್ಪ ಎನ್ನುವ ಮಧು,' ಅಣ್ಣನ ಇದೆಂಥಾ ಮಾತು..?

By Web DeskFirst Published Mar 19, 2019, 3:14 PM IST
Highlights

ಒಂದು ಕಡೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮದಗಜಗಳ ಕಾಳಗ ನಡೆಯುತ್ತಿದ್ದರೆ, ಮತ್ತೊಂದೆಡೆ  ಕುಮಾರ ಬಂಗಾರಪ್ಪ ಹಾಗೂ  ಮಧು ಬಂಗಾರಪ್ಪ ಜಗಳಕ್ಕಿಳಿದು, ಕುಮಾರ ಬಂಗಾರಪ್ಪ ಅವರು ಮಧು ತಮ್ಮ ಸಹೋದರ ಎನ್ನದೇ ಕಟುವಾಗಿ ಟೀಕಿಸಿದ್ದಾರೆ.

ಶಿವಮೊಗ್ಗ, (ಮಾ. 19): ಡಿ.ಕೆ.ಶಿವಕುಮಾರ್  ಅವರು ನನ್ನ ಸಹೋದರ. ಅವರು ಶಿವಮೊಗ್ಗದಲ್ಲಿ ನನ್ನ ಪರ ಪ್ರಚಾರಕ್ಕೆ ಬರುತ್ತಾರೆ ಎನ್ನವ ಮಧು ಬಂಗಾರಪ್ಪ ಹೇಳಿಕೆಗೆ ಕುಮಾರ ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.

ಶಿವಮೊಗ್ಗದಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕುಮಾ ಬಂಗಾರಪ್ಪ, 'ಅಣ್ಣನಿಗೆ ಕೊಡ ಬೇಕಾದ ಮರ್ಯಾದೆ ಯಾವತ್ತೂ ಕೊಡಲಿಲ್ಲ.

 ಕಂಡ ಕಂಡವರನ್ನು ಅಣ್ಣ ಎನ್ನುವ, ಕಂಡಕಂಡವರನ್ನು ಅಪ್ಪ ಎನ್ನುವ ಮಧು ಬಂಗಾರಪ್ಪ, ಮೊನ್ನೆಯವರೆಗೂ ಕಾಗೋಡು ತಿಮ್ಮಪ್ಪ ಅಪ್ಪನಾಗಿದ್ದರು. ಈಗ ಅವರ ಬದಲಿಗೆ ದೇವೇಗೌಡರು ಬಂದಿದ್ದಾರೆಂದು ಲೇವಡಿ ಮಾಡಿದರು.

ಲೋಕಸಭಾ ಚುನಾವಣೆ: ಡಿ.ಕೆ. ಶಿವಕುಮಾರ್ ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು..!

ಅಪ್ಪನ ಸ್ಮಾರಕ ಮಾಡಲು ಕಳ್ಳತನ ಮಾಬೇಕಾ ? ಭೀಕ್ಷೆ ಎತ್ತಿ ಮಾಡಬೇಕಾ? ಎನ್ನುತ್ತೀರಾ. ಹಾಗಾದರೆ ನೀವು ವಿದೇಶಿ ಪ್ರವಾಸಕ್ಕೆ , ಮೊನ್ನೆ ನಡೆಸಿದ ಚುನಾವಣೆಯಲ್ಲಿ ಭೀಕ್ಷೆ ಎತ್ತಿ ಮಾಡಿದ್ರಾ? ಇಲ್ಲವೇ ಕಳ್ಳತನ ಮಾಡಿ ಮಾಡಿದ್ರಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು

ಚುನಾವಣೆಯಲ್ಲಿ ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಅಪ್ಪ ಮಕ್ಕಳ ಪಕ್ಷ ದೇವೇಗೌಡರು  ಹಾಸನ ಮತ್ತು ಮಂಡ್ಯದಲ್ಲಿ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದರು.

ಶಿವಮೊಗ್ಗ: ಡಿಕೆಶಿ ಉಸ್ತುವಾರಿಯಾದರೆ ಮಧುಗೆ ಗೆಲವು ಸುಲಭ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಆಭ್ಯರ್ಥಿ ಮಧು ಬಂಗಾರಪ್ಪನವರು ಮಾದ್ಯಮ ಸಂದರ್ಶನದಲ್ಲಿ ಬಿಜೆಪಿ ನಾಯಕರ ವಿರುದ್ಧ ಮಾತನಾಡಿದ್ದಾರೆ. ಯಡಿಯೂರಪ್ಪ ಏನು ಮಾಡಿದ್ದಾರೆ ಎಂದು ಕೇಳಿದ್ದಾರೆ.  ಸೊರಬ ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ಒಂದೇ ಒಂದು ನೀರಾವರಿ ಯೋಜನೆಗೂ ನೀವು ಮುಂದಾಗಲಿಲ್ಲ ಎಂದು ಕಿಡಿಕರಿದರು.

click me!