ಪತ್ರ ಬರೆದು ಮಂಡ್ಯ ಜನರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡ ಸುಮಲತಾ

Published : Mar 19, 2019, 02:00 PM ISTUpdated : Mar 19, 2019, 02:13 PM IST
ಪತ್ರ ಬರೆದು ಮಂಡ್ಯ ಜನರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡ ಸುಮಲತಾ

ಸಾರಾಂಶ

ಮಂಡ್ಯ ಕ್ಷೇತ್ರದಿಂದ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ | ಮಂಡ್ಯ ಜನರನ್ನುದ್ದೇಶಿಸಿ ಭಾವನಾತ್ಮಕ ಪತ್ರ ಬರೆದ ಸುಮಲತಾ | ಮಂಡ್ಯ ಜನತೆ ಜೊತೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ

ಬೆಂಗಳೂರು (ಮಾ. 19): ನಿಖಿಲ್‌ ಕುಮಾರಸ್ವಾಮಿ ಹಾಗೂ ನಟ ಅಂಬರೀಷ್‌ ಅವರ ಪತ್ನಿ ಸುಮಲತಾ ಸ್ಪರ್ಧೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರ ‘ಹೈವೋಲ್ಟೇಜ್‌ ಮುಖಾಮುಖಿ’ ಎಂದೇ ಬಿಂಬಿತವಾಗಿದೆ.

ಅನಂತ್‌ ಹೆಗಡೆಗೆ ಟಿಕೆಟ್‌ ತಪ್ಪಿಸಲು ರಾಜ್ಯ ಬಿಜೆಪಿ ಯತ್ನ?

ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಷ್‌ ಸ್ಪರ್ಧೆ ಬಗ್ಗೆ ಉಂಟಾಗಿರುವ ಕುತೂಹಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಸುಮಲತಾರವರು ಮಂಡ್ಯ ಲೋಕಸಭಾ ಕಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆಂದು ಘೋಷಿಸಿದ್ದಾರೆ. ಇವರಿಗೆ ಸ್ಯಾಂಡಲ್‌ವುಡ್ ಕೂಡಾ ಸಾಥ್ ನೀಡಿದೆ. 

ಕಾಂಗ್ರೆಸ್‌ನ ಮಧ್ವರಾಜ್‌ ಜೆಡಿಎಸ್‌ನಿಂದ ಸ್ಪರ್ಧೆ

ಮಂಡ್ಯ ಜನರು ಅಂಬಿ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಮಣಿದು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಸುಮಲತಾ ಹೇಳಿದ್ದಾರೆ. ಮಂಡ್ಯ ಜನರನ್ನುದ್ದೇಶಿಸಿ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. 

 

ಸುಮಲತಾ, ನಿಖಿಲ್ ಸ್ಪರ್ಧೆಯಿಂದ ಮಂಡ್ಯ ಚುನಾವಣಾ ಅಖಾಡ ಭಾರೀ ಮಹತ್ವ ಪಡೆದಿದೆ. ಗೌಡರ ಮೊಮ್ಮಗ ಹಾಗೂ ಮಂಡ್ಯದ ಸೊಸೆ ನಡುವಿನ ಈ ಸಮರದಲ್ಲಿ ಮಂಡ್ಯ ಜನತೆ ಯಾರಿಗೆ ಪ್ರೀತಿ ನೀಡುತ್ತಾರೆ ಕಾದು ನೋಡಬೇಕು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!