'ನಿಂಬೆಹಣ್ಣಿನ ಸಮೇತ ರೇವಣ್ಣನನ್ನು ನುಂಗಿ ಹಾಕ್ತೇನೆ'

By Web Desk  |  First Published Apr 13, 2019, 5:00 PM IST

ಸದಾ ಒಂದಲ್ಲ ಒಂದು ಪ್ರಚೋದನಾಕಾರಿ ಭಾಷಣ ಮಾಡುತ್ತಲೇ ಸುದ್ದಿಯಾಗುತ್ತಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಯಡಿಯೂರಪ್ಪ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಕಲಬುರಗಿ, (ಏ13):  ನನಗೆ ನಿಂಬೆ ಹಣ್ಣು ಕೊಟ್ಟರೆ ನಿಂಬೆ ಹಣ್ಣನ್ನ ಮಾಂಸದೂಟದಲ್ಲಿ ಹಿಂಡಿಕೊಂಡು ರೇವಣ್ಣ ಸಮೇತ ನುಂಗಿ ಹಾಕ್ತೇನೆ ಎಂದು ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.

 ಕಲಬುರಗಿಯಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ ಎಸ್ ಈಶ್ವರಪ್ಪ, ನಿಂಬೆಹಣ್ಣಿನ ಸಮೇತ ರೇವಣ್ಣನನ್ನು ನುಂಗಿ ಹಾಕ್ತೇನೆ ಎಂದರು. 

Tap to resize

Latest Videos

ರೇವಣ್ಣರಿಂದ ನಿಂಬೆ ಸ್ವೀಕರಿಸಲು ಕಾಂಗ್ರೆಸ್‌ ನಾಯಕಿ ಹಿಂದೇಟು

ಈಶ್ವರಪ್ಪ ಒಂದು ನಿಂಬೆಹಣ್ಣು ಕೊಡುತ್ತೇನೆ ಬಿಡಿ ಎಂಬ ಸಚಿವ ರೇವಣ್ಣ ಹೇಳಿಕೆಗೆ ಈಶ್ವರಪ್ಪ ಈ ರೀತಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ರೇವಣ್ಣನಿಗೆ ಬಿಜೆಪಿ ಕಾರ್ಯಕರ್ತರು ಏನು ಅಂತ ಗೊತ್ತಿಲ್ಲ. ಅವರಿಗೆ ಬರೀ ಜಾತಿ ರಾಜಕಾರಣ ಮತ್ತು ಕುಟುಂಬ ರಾಜಕಾರಣ ಅಷ್ಟೇ ಗೊತ್ತು. ಅವರ ಜಾತಿ ಮತ್ತು ಕುಟುಂಬವನ್ನೂ ನಿಂಬೆಹಣ್ಣಿನೊಂದಿಗೆ ಹಿಂಡಿಕೊಂಡು ಕುಡಿಯುವೆ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು. 

 ಇದಕ್ಕೂ ಮೊದಲು ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ, ಸಚಿವ ರೇವಣ್ಣ ಅವರನ್ನು ನಿಂಬೆಹಣ್ಣು ರೇವಣ್ಣ ಅಂತಲೇ ಛೇಡಿಸಿದರು. ನಿಂಬೆಹಣ್ಣಿನ ರೇವಣ್ಣ ಹೇಳ್ತಾರೆ ಈ ಬಾರಿ 22 ಸೀಟು ಗೇಲ್ತಾರಂತೆ. ಈಗ ಗೆದ್ದಿರುವ ಎರಡು ಸೀಟು ಉಳಿಸಿಕೊಳ್ಳುವುದೂ ಜೆಡಿಎಸ್ ಗೆ ಕಷ್ಟ ಇದೆ ವ್ಯಂಗ್ಯವಾಡಿದರು. 

ಪಾಕಿಸ್ತಾನದಲ್ಲಿ ಭಾರತ ನಡೆಸಿದ ಏರ್ ಸ್ಟ್ರೈಕ್ ಗೆ ಕಾಂಗ್ರೆಸ್ ಪಕ್ಷ ಸಾಕ್ಷಿ ಹೇಳುತ್ತಿದೆ. ಉಗ್ರರ ಹೆಣಗಳ ಸಾಕ್ಷಿ ಕಾಂಗ್ರೆಸ್ ನವರಿಗೆ ಬೇಕಂತೆ. ಚುನಾವಣೆಯ ನಂತರ ನಾವು ಕಾಂಗ್ರೆಸ್ ನಾಯಕರ ಹೆಣಗಳ ಲೆಕ್ಕ ಕೊಡ್ತಿವಿ ತಾಳಿ. ಚುನಾವಣೆಯಲ್ಲಿ ಸೋತು ರಾಜಕೀಯವಾಗಿ ಹೆಣ ಆಗ್ತಾರಲ್ಲಾ ಆಗ ಅವರ ಲೆಕ್ಕ ಕೊಡ್ತೆವೆ ಎಂದು ಹೇಳಿದರು.  

ಲೋಕಸಭಾ ಚುನಾವಣೆಯ ನಂತರ ರಾಜ್ಯದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಕಾಂಗ್ರೆಸ್ ನವರು ಶಾಸಕರು ವೆಚ್ಚದಲ್ಲಿ ಬಿಜೆಪಿಗೆ ಬರಲು ಕ್ಯೂನಲ್ಲಿ ನಿಂತಿದ್ದಾರೆ ಎಂದು ಈಶ್ವರಪ್ಪ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ತಿಳಿಸಿದರು.

click me!