ಯಡಿಯೂರಪ್ಪ ಆಪ್ತ ಕಾಂಗ್ರೆಸ್ ಸೇರ್ಪಡೆ ಹಿಂದಿನ ಗುಟ್ಟು ಬಿಚ್ಚಿಟ್ಟ ನಿರಾಣಿ

Published : Apr 13, 2019, 04:34 PM IST
ಯಡಿಯೂರಪ್ಪ ಆಪ್ತ ಕಾಂಗ್ರೆಸ್ ಸೇರ್ಪಡೆ ಹಿಂದಿನ ಗುಟ್ಟು ಬಿಚ್ಚಿಟ್ಟ ನಿರಾಣಿ

ಸಾರಾಂಶ

ಬಿಎಸ್ ಯಡಿಯೂರಪ್ಪ ಅವರ ಆಪ್ತ ವಯಲದಲ್ಲಿ ಗುರುತಿಸಿಕೊಂಡಿದ್ದ ಗದಗ ಜಿಲ್ಲೆಯ ಪ್ರಮುಖ ಲಿಂಗಾಯತ ಮುಖಂಡ ಶ್ರೀಶೈಲ ಬಿದರೂರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬಿಜೆಪಿ ನಾಯಕ ಗುಟ್ಟು ಬಿಚ್ಚಿಟ್ಟಿದ್ದಾರೆ.

ಗದಗ, (ಏ.13): ಗದಗನ ಮಾಜಿ ಶಾಸಕ, ಜಿಲ್ಲೆಯ ಪ್ರಭಾವಿ ಲಿಂಗಾಯತ ಮುಖಂಡ ಶ್ರೀಶೈಲಪ್ಪ ಬಿದರೂರ ಅವರು ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. 

2018ರ ವಿಧಾನಸಭಾ ಟೆಕೆಟ್ ಸಿಕ್ಕಿರಲಿಲ್ಲ. ಈ ಹಿನ್ನಲೆಯಲ್ಲಿ ಅಸಮಾಧಾನಗೊಂಡಿದ್ದ  ಶ್ರೀಶೈಲಪ್ಪ ಬಿದರೂರ ಅವರು ಬಿಜೆಪಿಯಿಂದ ಅಂತರ ಕಾಯ್ದುಕೊಂಡು ತೆರೆಮರೆಗೆ ಸರಿದಿದ್ದರು.

HK ಪಾಟೀಲ್ ಪ್ಲಾನ್ ಸಕ್ಸಸ್, ಕಾಂಗ್ರೆಸ್ ಸೇರಿದ ಯಡಿಯೂರಪ್ಪ ಆಪ್ತ..!

ಇನ್ನು 2018 ವಿಧಾಸಭಾ ಎಲೆಕ್ಷನ್ ವೇಳೆ ಶ್ರೀಶೈಲಪ್ಪಗೆ ಟಿಕೆಟ್ ಯಾಕೆ ನೀಡಲಿಲ್ಲ ಎನ್ನುವುದನ್ನು ಇದೀಗ ಬಿಜೆಪಿ ನಾಯಕ ಮುರಗೇಶ್ ನಿರಾಣಿ ಗುಟ್ಟು ರಟ್ಟು ಮಾಡಿದ್ದು,  'ಶ್ರೀಶೈಲಪ್ಪ ಬಿದರೂರು ಒಳ್ಳೆ ವ್ಯಕ್ತಿ.  ಕಳೆದ ಬಾರಿ ಅವರಿಗೆ ಆಕ್ಸಿಡೆಂಟ್ ಆಗಿತ್ತು. ಹಾಗಾಗಿ ಅವರಿಗೆ ಟಿಕೆಟ್ ತಪ್ಪಿತ್ತು. ಈಗಾಗಿ ಅವರು ಅಸಮಾಧನಗೊಂಡಿದ್ದರು' ಎಂದು ಸ್ಪಷ್ಟಪಡಿಸಿದರು.

ಪಕ್ಷ ಬಿಡಬೇಡಿ ಅಂತ ನಾನು ಅವರಿಗೆ ಹೇಳಿದ್ದೆ. ರಾಜಕಾರಣ ನಿಂತ‌ ನೀರಲ್ಲ ಎಲ್ಲರೂ ನಿರ್ಧಾರ ಕೈಗೊಳ್ಳುವಲ್ಲಿ ಸ್ವತಂತ್ರರು. ಅವರು ಎಲ್ಲೇ ಹೋದ್ರೂ ಅವರಿಗೆ ಶುಭವಾಗಲಿ ಎಂದು ನಿರಾಣಿ, ಶ್ರೀಶೈಲಪ್ಪ ಬಿದರೂರಗೆ ಶುಭ ಹಾರೈಸಿದರು.

ಏಪ್ರಿಲ್ 23ರಂದು ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿಯಿಂದ ಹಾಲಿ ಸಂಸದ ಶಿವಕುಮಾರ ಉದಾಸಿ ಅಭ್ಯರ್ಥಿ. ಕಾಂಗ್ರೆಸ್‌-ಜೆಡಿಎಸ್ ಅಭ್ಯರ್ಥಿಯಾಗಿ ಡಿ.ಆರ್.ಪಾಟೀಲ್ ಅವರು ಕಣದಲ್ಲಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!