ಬಿಜೆಪಿ ಪರ ನಿಂತ ಚಿಂಚನಸೂರ್‌ಗೆ ಜೀವ ಬೆದರಿಕೆ ಹಾಕಿದ್ದು ಯಾರು?

Published : Mar 25, 2019, 05:08 PM ISTUpdated : Mar 25, 2019, 05:13 PM IST
ಬಿಜೆಪಿ ಪರ ನಿಂತ ಚಿಂಚನಸೂರ್‌ಗೆ ಜೀವ ಬೆದರಿಕೆ ಹಾಕಿದ್ದು ಯಾರು?

ಸಾರಾಂಶ

ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರಿಂದ ಜೀವ ಬೆದರಿಕೆ ಬಂದಿದೆ ಎಂದು ಒಂದು ಕಾಲದಲ್ಲಿ ಕಾಂಗ್ರೆಸ್ ನಲ್ಲೆ ಇದ್ದು ಬಿಜೆಪಿ ಸೇರ್ಪಡೆಯಾಗಿ ಅನೇಕ ಮುಖಂಡರನ್ನು ಕರೆತಂದಿರುವ ಚಿಂಚನಸೂರ್ ಆರೋಪಿಸಿದ್ದಾರೆ.

ಕಲಬುರಗಿ(ಮಾ. 25)   ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಪರ ಪ್ರಚಾರ‌ ಕೈಗೊಂಡಿದಕ್ಕೆ ಚಿಂಚನಸೂರ್‌ಗೆ ಜೀವ ಬೆದರಿಕೆ ಬಂದಿದೆಯಂತೆ ಈ ಬಗ್ಗೆ ಮಾಜಿ ಸಚಿವ ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ ಸ್ವತಃ ಆತಂಕ  ವ್ಯಕ್ತಪಡಿಸಿದ್ದಾರೆ.

ಉಮೇಶ್ ಜಾಧವ್ ಮತ್ತು ಮಾಲಕರೆಡ್ಡಿರನ್ನ ಬಿಜೆಪಿಗೆ ಕರೆತಂದಿದಕ್ಕೆ ನಿತ್ಯ ಜೀವ ಬೆದರಿಕೆ ಬರುತ್ತಿದೆ. ಜಾಧವ್ ಪರ ಗುರುಮಠಕಲ್‌ನಲ್ಲಿ ಪ್ರಚಾರ ಮಾಡದಂತೆ ಬೆದರಿಕೆ ಬಂದಿದೆ.  ಕಲಬುರಗಿಯ ನನ್ನ ನಿವಾಸಕ್ಕೆ ಬಂದು ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಕಲಬುರ್ಗಿಯಲ್ಲಿ ಖರ್ಗೆ-ಉಮೇಶ್ ಜಾಧವ್ ನಡುವೆ ಜಂಗೀಕುಸ್ತಿ: ಗೆಲುವು ಯಾರಿಗೆ?

ಒಂದು ವೇಳೆ ಪ್ರಚಾರ ಮಾಡಿದ್ರೆ ಕೈಕಾಲು ಮುರಿತಿವಿ, ನಾನು ಸತ್ತರು ಪರ್ವಾಗಿಲ್ಲ ಪ್ರಚಾರ ಮಾಡೆ ಮಾಡ್ತೆನೆ. ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮಾಚ್೯ 22 ರಂದು ಬೆಂಗಳೂರಿನಿಂದ ಕಲಬುರಗಿಗೆ ಬಂದಿದ್ದೆ. ನನ್ನ ನಿವಾಸದ ಬಳಿ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಆಗಮಿಸಿ ಬೆದರಿಕೆ ಹಾಕಿದ್ದಾರೆ ಎಂದರು. ಈ ಬಗ್ಗೆ ಈಶಾನ್ಯ ವಲಯ ಐಜಿಪಿ ಸೇರಿದಂತೆ ರಾಜ್ಯಪಾಲರಿಗೂ ದೂರು ನೀಡುತ್ತೆನೆ. ಇಲ್ಲಿಯವರೆಗೆ ನನಗೆ ಯಾರು ವಿರೋಧಿಗಳಿರಲಿಲ್ಲ. ಆ ಕಾರಣಕ್ಕೆ ಮನೆ ಸುತ್ತ ಸಿಸಿಟಿವಿ ಸಹ ಅಳವಡಿಕೆ ಮಾಡಿರಲಿಲ್ಲ. ಇನ್ನು ಮುಂದೆ ಸಿಸಿಟಿವಿ ಹಾಕಬೇಕಾದ ಅನಿವಾರ್ಯ ಎದುರಾಗಿದೆ ಎಂದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!