ಗಾಂಧಿ ಪದ ತೆಗೆದು ಚುನಾವಣೆಗೆ ಬನ್ನಿ, ಶ್ರೀರಾಮುಲು ಸವಾಲು

Published : Mar 28, 2019, 04:05 PM ISTUpdated : Mar 28, 2019, 05:26 PM IST
ಗಾಂಧಿ ಪದ ತೆಗೆದು ಚುನಾವಣೆಗೆ ಬನ್ನಿ, ಶ್ರೀರಾಮುಲು ಸವಾಲು

ಸಾರಾಂಶ

ಶಿವಮೊಗ್ಗದಲ್ಲಿ ಬಿಜೆಪಿ ನಾಯಕ ಶ್ರೀರಾಮುಲು  ವಿಪಕ್ಷದವರ ಮೇಲೆ ವಾಗ್ದಾಳಿ ಮಾಡಿದ್ದಾರೆ. ಸರ್ಜಿಕಲ್ ದಾಳಿ ಟೀಕಿಸುವವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಶಿವಮೊಗ್ಗ(ಮಾ. 28)  ಶಿವಮೊಗ್ಗ ಬುದ್ಧಿವಂತರ ನಾಡು ಅನೇಕ ಮುಖ್ಯಮಂತ್ರಿಗಳು ರಾಜಕಾರಣಿಗಳಿಗೆ ಜನ್ಮನೀಡಿದ ನಾಡು.  ಯಡಿಯೂರಪ್ಪನವರು ಹಿಂದುಳಿದ ವರ್ಗದ ನಾಯಕರಾಗಿ ಬೆಳೆದು ಬಂದವರು.  ಶಿವಮೊಗ್ಗದಲ್ಲಿ ಸೇರಿರುವ ಜನರನ್ನು ನೋಡಿದ್ರೆ ವಿರೋಧ ಪಕ್ಷಗಳು ಧೂಳಿಪಟವಾಗುತ್ತವೆ ಎಂಬ ಸೂಚನೆ ಕಂಡುಬರುತ್ತಿದೆ ಎಂದು ಬಿಜೆಪಿ ನಾಯಕ ಶ್ರೀರಾಮುಲು ಅಬ್ಬರಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತ ನಾಡಿದ ರಾಮುಲು,   ಮೋದಿಯವರ ಸಾಧನೆಯಿಂದ ನಾವು ಭಾರತೀಯ ಎಂದು ಹೆಮ್ಮಯಿಂದ ಹೇಳಿಕೊಳ್ಳುವ ವಾತವರಣ ಇದೆ.  ರಾಹುಲ್ ಗಾಂಧಿಗೆ ಮೋದಿಯವರನ್ನು ಟೀಕಿಸುವ ಶಕ್ತಿ ಇಲ್ಲ. ರಾಹುಲ್ ಗಾಂಧಿಗೆ ತಾಕತ್ತಿದ್ದರೆ  ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ನಾವಿಲ್ಲ ಅಂತಾ ಹೇಳಲಿ ಎಂದು ಸವಾಲು ಹಾಕಿದರು.

ಮಗನ ನಾಮಪತ್ರ ಸಲ್ಲಿಕೆಗೆ ಬಿ.ಎಸ್.ಯಡಿಯೂರಪ್ಪ ಗೈರು

ರಾಹುಲ್ ಗಾಂಧಿ ಸೋನಿಯಾ ಗಾಂಧಿ  ಬೇಲ್ ಮೇಲೆ ಇದ್ದಾರೆ.  ರಾಹುಲ್ ಗಾಂಧಿ ನೀವು ಗಾಂಧಿ ಎಂಬ ಪದವನ್ನು ತೆಗೆದು ಚುನಾವಣೆಗೆ ಬನ್ನಿ ನೋಡೋಣ.  ಮೋದಿ  ಅವರ ಸೂಟ್, ಅನ್ನ, ಓದಿನ ಬಗ್ಗೆ ಟೀಕೆ ಮಾಡುತ್ತಿದ್ದಾರೆ.  ಸರ್ಜಿಕಲ್ ಸ್ಟ್ರೈಕ್ ನಂತರ ನಾವು ತಲೆಗಳನ್ನು ಕೊರಳಿ ಹಾಕಕೊಂಡು ಬರಬೇಕಾಗಿತ್ತಾ?  ಅರ್ಥವಿಲ್ಲದ ಪ್ರಶ್ನೆ ಕೇಳುತ್ತಾರೆ ಎಂದೊಉ ಸರ್ಜಿಕಲ್ ದಾಳೀ ಬಗ್ಗೆ ಟೀಕೆ ಮಾಡುವವರನ್ನು ತರಾಟೆಗೆ ತೆಗೆದುಕೊಂಡರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!