ಮೈತ್ರಿ ಸರ್ಕಾರದಿಂದ ಆಡಳಿತ ಯಂತ್ರ ದುರ್ಬಳಕೆ: ಆಯೋಗಕ್ಕೆ ಬಿಜೆಪಿ ದೂರು

Published : Mar 28, 2019, 03:38 PM ISTUpdated : Mar 28, 2019, 05:48 PM IST
ಮೈತ್ರಿ ಸರ್ಕಾರದಿಂದ ಆಡಳಿತ ಯಂತ್ರ ದುರ್ಬಳಕೆ: ಆಯೋಗಕ್ಕೆ ಬಿಜೆಪಿ ದೂರು

ಸಾರಾಂಶ

ಚುನಾವಣಾ ಲಾಭಕ್ಕಾಗಿ ಮೈತ್ರಿ ಸರ್ಕಾರದಿಂದ ಆಡಳಿತ ಯಂತ್ರ ದುರ್ಬಳಕೆ ಆರೋಪ; ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು 

ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್- ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಸರ್ಕಾರಿ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಮೈತ್ರಿ ಸರ್ಕಾರವು ಆಡಳಿತ ಯಂತ್ರವನ್ನು ದುರ್ಬಳಕೆ ಮಾಡುತ್ತಿದೆ. ಸ್ವಚ್ಚ ಮತ್ತು ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಪಕ್ಷಪಾತಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು, ಸಂಸದ ರಾಜೀವ್ ಚಂದ್ರಶೇಖರ್ ಮತ್ತು ಶಾಸಕ ಸುರೇಶ್ ಕುಮಾರ್  ನಿಯೋಗ ಮನವಿ ಮಾಡಿದೆ.

ಕರ್ನಾಟಕದಲ್ಲಿ 2 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲನೇ ಹಂತದ ಮತದಾನ 18 ಏಪ್ರಿಲ್, ಹಾಗೂ ಎರಡನೇ ಹಂತದ ಮತದಾನ 23 ಏಪ್ರಿಲ್ ರಂದು ನಡೆಯಲಿದೆ. ಮೇ. ೨೩ಕ್ಕೆ ಫಲಿತಾಂಶಗಳು ಪ್ರಕಟವಾಗಲಿದೆ. ಮೊದಲನೇ ಹಂತಕ್ಕೆ ಈಗಾಗಲೇ ನಾಮಪತ್ರ ಸಲ್ಲಿಸುವಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!