
ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಗೆ ಪದೋನ್ನತಿ ಸಿಗುತ್ತದೆ. ಹೀಗೊಂದು ಸುದ್ದಿ ದಿಲ್ಲಿ ವಲಯದಲ್ಲಿ ತುಂಬಾ ವೇಗದಲ್ಲಿ ಓಡಾಡುತ್ತಿದೆ.
ಬಂಗಾಳದಲ್ಲಿ ದೀದಿಯನ್ನು ಹಿಂದಿಕ್ಕಿ 23 ಸೀಟು ಗೆಲ್ಲುತ್ತಾ ಬಿಜೆಪಿ?
ಮುಂದಿನ ಜುಲೈನಲ್ಲಿ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷರು ಆಯ್ಕೆಯಾದರೆ ರಾಮಲಾಲ್ ಜಾಗಕ್ಕೆ ಬಿ. ಎಲ್ ಸಂತೋಷ್ ಬರಬಹುದು ಎನ್ನುತ್ತಿವೆ ಮೂಲಗಳು. ಹಿಂದೆ ಸಂಜಯ್ ಜೋಶಿ ಬದಲಿಸಲು ಸಂಘಟನಾ ಕಾರ್ಯದರ್ಶಿಯಾಗಿ ಉತ್ತರ ಪ್ರದೇಶದ ಸಂಘ ಪ್ರಚಾರಕ ರಾಮಲಾಲ್ ಅವರನ್ನು ದಿಲ್ಲಿಗೆ ಕರೆದುಕೊಂಡು ಬರಲಾಗಿತ್ತು.
ಮೇ 23 ರ ನಂತರ ಬಿಜೆಪಿ ಸರ್ಕಾರ ಬಂದರೆ ಮಂತ್ರಿ ಆಗ್ತಾರಾ ಶೋಭಾ ಕರಂದ್ಲಾಜೆ?
ಈಗ ಅವರನ್ನು ರಾಜ್ಯಸಭೆಗೆ ಕಳುಹಿಸುವ ಚರ್ಚೆಗಳು ಇದ್ದು, ಯಾವುದೂ ಖಚಿತತೆ ಪಡೆದಿಲ್ಲ. ಹಾಗೇನಾದರೂ ಆದರೆ ಸಂತೋಷ್ ಹೆಸರು ಪರಿಗಣನೆಯಲ್ಲಿ ಇದೆಯಂತೆ. ಅಂದಹಾಗೆ ಬಿಜೆಪಿಯಲ್ಲಿ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನು ನೇಮಕ ಮಾಡುವ ಅಧಿಕಾರ ಇರುವುದು ಸಂಘಕ್ಕೇ ವಿನಃ ಬಿಜೆಪಿಗಲ್ಲ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ