ರಾಹುಲ್ ಕಾರ್ಯಕ್ರಮದಲ್ಲಿ ಮೋದಿ ಪರ ಘೋಷಣೆ : ಕೆಪಿಸಿಸಿಯಿಂದ ದೂರು

Published : Mar 20, 2019, 12:16 PM ISTUpdated : Mar 20, 2019, 12:37 PM IST
ರಾಹುಲ್ ಕಾರ್ಯಕ್ರಮದಲ್ಲಿ ಮೋದಿ ಪರ ಘೋಷಣೆ : ಕೆಪಿಸಿಸಿಯಿಂದ ದೂರು

ಸಾರಾಂಶ

ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮಿಸಿದ್ದ ವೇಳೆ ಇಲ್ಲಿನ ಟೆಕ್ಕಿಗಳೊಂದಿಗೆ ಸಂವಾದಕ್ಕೆ ತೆರಳಿದ್ದ ಸಂದರ್ಭದಲ್ಲಿ ಮೋದಿ ಪರ ಘೋಷಣೆ ಕೂಗಿದ್ದು, ಈ ಸಂಬಂಧ ಕೆಪಿಸಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ. 

ಬೆಂಗಳೂರು : ಎಐಸಿಸಿ ಅಧ್ಯಕ್ಷ ರಾಹುಲ್  ಗಾಂಧಿ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಮೋದಿ ಎಂದು ಘೋಷಣೆ ಕೂಗಿದ ಸಂಬಂಧ ಕೆಪಿಸಿಸಿ  ನಗರ ಪೊಲೀಸ್ ಆಯುಕ್ತರಿಗೆ  ದೂರು ನೀಡಲಾಗಿದೆ. 

MLC ವೇಣುಗೋಪಾಲ್ ನಿಯೋಗದಿಂದ ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಅವರಿಗೆ ದೂರು  ಸಲ್ಲಿಸಲಾಗಿದೆ. ಅಲ್ಲದೇ ಮೋದಿ ಎಂದು ರಾಹುಲ್ ಆಗಮನದ ವೇಳೆ ಘೋಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. 

ಮಾನ್ಯತಾ ಟೆಕ್ ಪಾರ್ಕ್ ಗೆ ಸಂವಾದ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿದ್ದ ವೇಳೆ ಹಲವರು ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ. ಎಸ್ ಪಿ ಜಿ ಭದ್ರತೆ ನೀಡಲಾಗಿರುವ ರಾಹುಲ್ ಗಾಂಧಿ ಅವರತ್ತ ಘೋಷಣೆ ಕೂಗುತ್ತ ಗುಂಪು ನುಗ್ಗಲು ಪ್ರಯತ್ನ ಮಾಡಿದೆ. ಈ ನಿಟ್ಟಿನಲ್ಲಿ ದೂರು ಸಲ್ಲಿಸಲಾಗಿದೆ ಎಂದು ಎಂ ಎಲ್ ಸಿ ವೇಣುಗೋಪಾಲ್ ಹೇಳಿದ್ದಾರೆ. 

ಮತ್ತೆ ಇಂತಹ ಅಚಾತುರ್ಯಗಳು ಸಂಭವಿಸದಂತೆ ರಾಜಕೀಯ ಪ್ರೇರಿತ ಗುಂಪಿನ ಸದಸ್ಯರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!