‘CRPF ಯೋಧರಿಂದಾಗಿ ಕೋಲ್ಕತ್ತಾದಿಂದ ಜೀವಂತವಾಗಿ ಹೊರಬಂದೆ’!

By Web DeskFirst Published May 15, 2019, 2:18 PM IST
Highlights

‘CRPFಯೋಧರಿಂದಾಗಿ ಕೋಲ್ಕತ್ತಾದಿಂದ ಜೀವಂತವಾಗಿ ಹೊರ ಬಂದೆ’| ಕೋಲ್ಕತ್ತಾ ಹಿಂಸಾಚಾರ ನೆನೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ| ತಮ್ಮನ್ನು ರಕ್ಷಿಸಿದ CRPF ಯೋಧರಿಗೆ ಧನ್ಯವಾದ ಅರ್ಪಿಸಿದ ಅಮಿತ್ ಶಾ| ‘ಕೋಲ್ಕತ್ತಾ ಹಿಂಸಾಚಾರಕ್ಕೆ ಟಿಎಂಸಿ ಗೂಂಡಾಗಳೇ ಕಾರಣ’| ‘ಪ.ಬಂಗಾಳ ಜನತೆ ಮಮತಾ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ’|

ನವದೆಹಲಿ(ಮೇ.15): ತಮ್ಮ ರೋಡ್ ಶೋ ಬಳಿಕ ಪ.ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.

ತಾವು ಕೋಲ್ಕತ್ತಾದಿಂದ ಜೀವಂತವಾಗಿ ಹೊರ ಬಂದಿದ್ದು, ಇದಕ್ಕೆ CRPFಗೆ ಧನ್ಯವಾದ ಸಲ್ಲಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಹಿಂಸಾಚಾರಕ್ಕೆ ಟಿಎಂಸಿ ಗೂಂಡಾಗಳೇ ಕಾರಣ ಎಂದಿರುವ ಶಾ, ತಮ್ಮನ್ನು ಕೊಲ್ಲಲು ಬಯಸಿದ್ದ ಟಿಎಂಸಿ ಕಾರ್ಯಕರ್ತರನ್ನು CRPF ಯೋಧರು ದಿಟ್ಟತನದಿಂದ ಎದುರಿಸಿದ್ದಾರೆ ಎಂದು ತಿಳಿಸಿದ್ದಾರೆ.

BJP President Amit Shah on violence at his roadshow in Kolkata yesterday: Had CRPF not been there, it would have been really difficult for me to escape, BJP workers were beaten up, TMC can go to any extent, it's with luck that I made it out. pic.twitter.com/GksBpZA2iY

— ANI (@ANI)

ಹಿಂಸಾಚಾರಕ್ಕೆ ಟಿಎಂಸಿ ಕಾರಣ ಎಂದಿರುವ ಅಮಿತ್ ಶಾ, ಬಿಜೆಪಿ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುತ್ತಿರುವ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಪ.ಬಂಗಾಳ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
 

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!