ಕೊನೆಯ ಬಾರಿ ಭೇಟಿಯಾದಾಗ ಅಡ್ವಾಣಿ ಅತ್ತಿದ್ದರು: ಶತ್ರುಘ್ನ!

Published : May 15, 2019, 01:39 PM IST
ಕೊನೆಯ ಬಾರಿ ಭೇಟಿಯಾದಾಗ ಅಡ್ವಾಣಿ ಅತ್ತಿದ್ದರು: ಶತ್ರುಘ್ನ!

ಸಾರಾಂಶ

‘ಅವರು ಹೋಗ್ಬೇಡ ಅನ್ನಲಿಲ್ಲ, ಆದರೆ ಕಣ್ಣೀರು ಹಾಕಿದ್ದರು’| ಅಡ್ವಾಣಿ ಕೊನೆಯ ಭೇಟಿ ನೆನೆದ ಶತ್ರುಘ್ನ ಸಿನ್ಹಾ| ಪಕ್ಷ ಬಿಡುವುದಕ್ಕೂ ಮೊದಲು ಅಡ್ವಾಣಿ ಭೇಟಿಯಾಗಿದ್ದ ಶತ್ರುಘ್ನ| ಶತ್ರುಘ್ನ ಸಿನ್ಹಾ ಪಾಟ್ನಾ ಸಾಹೀಬ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ| ಹೊರಡುವಾಗ ಅಡ್ವಾಣಿ ಕಣ್ಣಲ್ಲಿ ನೀರಿತ್ತು ಎಂದ ಶತ್ರುಘ್ನ| ‘ಸರಿ ದಾರಿಯಲ್ಲಿ ಸಾಗಲು ಅಡ್ವಾಣಿ ಅವರ ಆಶೀರ್ವಾದ ಪಡೆದಿದ್ದೇನೆ’|

ಪಾಟ್ನಾ(ಮೇ.15): ತಾವು ಪಕ್ಷ ಬಿಡುವ ನಿರ್ಧಾರ ತಿಳಿಸಿದಾಗ ಬಿಜೆಪಿ ಭಿಷ್ಮ ಎಲ್.ಕೆ. ಅಡ್ವಾಣಿ ಕಣ್ಣಾಲಿಗಳು ತುಂಬಿ ಬಂದಿದ್ದವು ಎಂದು ಪಾಟ್ನಾ ಸಾಹೀಬ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.

ಎರಡು ದಶಕಗಳಿಂದ ದುಡಿದ ಪಕ್ಷವನ್ನು ಬಿಟ್ಟು ಹೊರಡುವ ವೇಳೆ ಕೊನೆಯ ಬಾರಿಗೆ ಅಡ್ವಾಣಿ ಅವರನ್ನು ಭೇಟಿಯಾಗಲು ತೆರಳಿದ್ದೆ. ಈ ವೇಳೆ ಅವರು ಪಕ್ಷ ಬಿಡಬೇಡ ಎಂದು ಹೇಳಲಿಲ್ಲವಾದರೂ, ಅವರು ನನ್ನ ಮುಂದೆ ಕಣ್ಣೀರು ಹಾಕಿದ್ದರು ಎಂದು ಶತ್ರುಘ್ನ ಹೇಳಿದ್ದಾರೆ.

ಬಿಜೆಪಿ ತೊರೆಯುವುದು ತಮ್ಮ ಜೀವನದ ಅತ್ಯಂತ ಕಠಿಣ ನಿರ್ಧಾರಗಳಲ್ಲಿ ಒಂದಾಗಿತ್ತು ಎಂದಿರುವ ಶತ್ರುಘ್ನ, ಸರಿ ದಾರಿಯಲ್ಲಿ ಸಾಗಲು ಅಡ್ವಾಣಿ ಅವರ ಆಶೀರ್ವಾದ ಪಡೆದಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಅತ್ಯಂತ ಹಿರಿಯ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಶತ್ರುಘ್ನ ಸಿನ್ಹಾ, ಮೋದಿ-ಶಾ ಕಾರ್ಯವೈಖರಿ ಖಂಡಿಸಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!