ಶೇ.50 ಮತ ಎಣಿಕೆಗೆ ವಿಪಕ್ಷಗಳ ಕೋರಿಕೆ: ಲೋಕ ಫಲಿತಾಂಶ 6 ದಿನ ತಡ?

By Web DeskFirst Published Mar 31, 2019, 8:57 AM IST
Highlights

ಶೇ.50 ವಿವಿಪ್ಯಾಟ್‌ ಎಣಿಸಿದರೆ ಲೋಕ ಫಲಿತಾಂಶ 6 ದಿನ ತಡ| ಈಗಿರುವ ವ್ಯವಸ್ಥೆ ಚೆನ್ನಾಗಿದೆ, ಬದಲಾವಣೆ ಸಲ್ಲ| ಸುಪ್ರೀಂಕೋರ್ಟ್‌ಗೆ ಆಯೋಗ ಅಫಿಡವಿಟ್‌| 

ನವದೆಹಲಿ[ಮಾ.31]: 21 ರಾಜಕೀಯ ಪಕ್ಷಗಳ ಬೇಡಿಕೆಯಂತೆ ಶೇ.50ರಷ್ಟುವಿವಿಪ್ಯಾಟ್‌ ಯಂತ್ರಗಳಲ್ಲಿನ ಮತಗಳನ್ನೂ ಎಣಿಸಿದರೆ ಲೋಕಸಭೆ ಚುನಾವಣೆ ಫಲಿತಾಂಶ 6 ದಿನಗಳ ಕಾಲ ವಿಳಂಬವಾಗಲಿದೆ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಚುನಾವಣೆಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯ ವಿವಿಪ್ಯಾಟ್‌ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ತೀವ್ರ ಅಧ್ಯಯನ ಹಾಗೂ ಪರೀಕ್ಷೆಗಳ ನಂತರ ಈ ವಿಧಾನ ಆಯ್ದುಕೊಳ್ಳಲಾಗಿದ್ದು, ಇದು ಸೂಕ್ತವಾಗಿದೆ. ಆದರೆ ಇದನ್ನು ಬದಲಾವಣೆ ಮಾಡಬೇಕು ಎಂಬುದಕ್ಕೆ ರಾಜಕೀಯ ಪಕ್ಷಗಳು ಪ್ರಬಲ ಕಾರಣ ನೀಡಿಲ್ಲ ಎಂದು 50 ಪುಟಗಳ ಅಫಿಡವಿಟ್‌ನಲ್ಲಿ ಆಯೋಗ ತಿಳಿಸಿದೆ.\

1 ಕ್ಕಿಂತ ಹೆಚ್ಚು ಕಡೆ ವಿವಿಪ್ಯಾಟ್ ಮತ ತಾಳೆ ಸಾಧ್ಯವೇ? ಸುಪ್ರೀಂ

ವಿದ್ಯುನ್ಮಾನ ಮತಯಂತ್ರ- ವಿವಿಪ್ಯಾಟ್‌ ನಿಖರತೆ ಬಗ್ಗೆ ಶೇ.99.9936ರಷ್ಟುವಿಶ್ವಾಸವಿದೆ. ಸ್ಯಾಂಪಲ್‌ ಗಾತ್ರವನ್ನು ಹೆಚ್ಚಿಸಿ, ಮತ್ತಷ್ಟುವಿವಿಪ್ಯಾಟ್‌ಗಳ ಪರಿಶೀಲನೆ ನಡೆಸುವುದರಿಂದ ವಿಶ್ವಾಸಾರ್ಹತೆ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಳವೇನೂ ಆಗುವುದಿಲ್ಲ. ಬದಲಿಗೆ ಮತ ಎಣಿಕೆ 6 ದಿನಗಳ ಕಾಲ ವಿಸ್ತರಣೆಯಾಗಲಿದೆ. 400ಕ್ಕೂ ಹೆಚ್ಚು ಮತಗಟ್ಟೆಗಳನ್ನು ಹೊಂದಿದ ಹಲವು ವಿಧಾನಸಭಾ ಕ್ಷೇತ್ರಗಳು ಇದ್ದು, ಅಲ್ಲೆಲ್ಲಾ ಮತ ಎಣಿಕೆಗೆ 8ರಿಂದ 9 ದಿನಗಳು ಬೇಕಾಗುತ್ತದೆ ಎಂದು ಆಯೋಗ ತಿಳಿಸಿದೆ.

ರಾಜಕೀಯ ಪಕ್ಷಗಳ ಬೇಡಿಕೆಯಂತೆ ವಿವಿಪ್ಯಾಟ್‌ ಚೀಟಿಗಳ ಎಣಿಕೆ ಮಾಡಲು ಭಾರಿ ಪ್ರಮಾಣದ ತರಬೇತಿ ಹಾಗೂ ಸಾಮರ್ಥ್ಯ ಬೇಕಾಗುತ್ತದೆ. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏ.11ರಂದು ನಡೆಯಲಿದೆ. ಈ ಹಂತದಲ್ಲಿ ಹಾಲಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಆಗದು ಎಂದೂ ಹೇಳಿದೆ.

ಲೋಕಸಭಾ ಚುನಾವಣೆ: 100 ರಷ್ಟು ಇವಿಎಂ ತಿರುಚುವ ಸಾಧ್ಯತೆ

ವಿದ್ಯುನ್ಮಾನ ಮತಯಂತ್ರದ ಬಗ್ಗೆ ಅನುಮಾನ ಇರುವ ಹಿನ್ನೆಲೆಯಲ್ಲಿ ಶೇ.50ರಷ್ಟುವಿವಿಪ್ಯಾಟ್‌ನಲ್ಲಿನ ಮತಗಳನ್ನು ಎಣಿಕೆ ಮಾಡಬೇಕು ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ 21 ರಾಜಕೀಯ ಪಕ್ಷಗಳು ಅರ್ಜಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ವಿವಿಪ್ಯಾಟ್‌ ಮಾದರಿ ಸಮೀಕ್ಷೆ ಹೆಚ್ಚಿಸಲು ಸಾಧ್ಯವೇ ಎಂದು ಮಾ.25ರಂದು ಆಯೋಗದ ಅಭಿಪ್ರಾಯವನ್ನು ನ್ಯಾಯಾಲಯ ಕೇಳಿತ್ತು. ಹೀಗಾಗಿ ಆಯೋಗ ಅಫಿಡವಿಟ್‌ ಸಲ್ಲಿಕೆ ಮಾಡಿದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!