ಕಮಲಕ್ಕೆ ಶಾಕ್: ಬರೋಬ್ಬರಿ 37 ನಾಯಕರ ರಾಜೀನಾಮೆ!

Published : Apr 09, 2019, 05:02 PM IST
ಕಮಲಕ್ಕೆ ಶಾಕ್: ಬರೋಬ್ಬರಿ 37 ನಾಯಕರ ರಾಜೀನಾಮೆ!

ಸಾರಾಂಶ

ಲೋಕಸಭೆ ಚುನಾವಣೆಗೂ ಮುನ್ನವೇ ಬಿಜೆಪಿಗೆ ಭಾರೀ ಹಿನ್ನೆಡೆ| ಬಿಜೆಪಿ ತೊರೆದ 37 ಪ್ರಮುಖ ನಾಯಕರು| ಹಿಂದುತ್ವ ಸಿದ್ಧಾಂತ ವಿರೋಧಿಸಿ ಪಕ್ಷ ತೊರೆಯುತ್ತಿರುವುದಾಗಿ ಸ್ಪಷ್ಟನೆ| ನಾಗಾಲ್ಯಾಂಡ್ ಬಿಜೆಪಿಯಲ್ಲಿ ಕೋಲಾಹಲ| ರಾಜ್ಯ ಬಿಜೆಪಿ ಅಧ್ಯಕ್ಷರ ಕಾರ್ಯವೈಖರಿ ಖಂಡಿಸಿ ಸಾಮೂಹಿಕ ರಾಜೀನಾಮೆ| ‘ಪೌರತ್ವ ಮಸೂದೆ ವಿಚಾರದಲ್ಲಿ ಈಶಾನ್ಯ ರಾಜ್ಯಗಳಿಗೆ ಬಿಜೆಪಿ ಮೋಸ’|

ಕೋಹಿಮಾ(ಏ.09): ಲೋಕಸಭೆ ಚುನಾವಣೆಗೂ ಮುನ್ನವೇ ಈಶಾನ್ಯ ಗಡಿ ರಾಜ್ಯ ನಾಗಾಲ್ಯಾಂಡ್ ನಲ್ಲಿ ಬಿಜೆಪಿಗೆ ಭಾರೀ ಹಿನ್ನೆಡೆಯಾಗಿದೆ. ನಾಗಾಲ್ಯಾಂಡ್ ಬಿಜೆಪಿಯ ಪ್ರಮುಖ 37 ನಾಯಕರು ಸಾಮೂಹಿಕವಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ನಾಗಾಲ್ಯಾಂಡ್ ಬಿಜೆಪಿ ಅಧ್ಯಕ್ಷ ತೆಮ್ಜೆನ್ ಇಮ್ನಾ ಅಲಾಂಗ್ ಲೊಂಗ್ಕುಮೆರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ 37 ನಾಯಕರು, ಪಕ್ಷದ ಹಿಂದುತ್ವ ನೀತಿಯನ್ನು ವಿರೋಧಿಸಿ ಪಕ್ಷ ತೊರೆಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. 

ಬಿಜೆಪಿ ರಾಜ್ಯಾಧ್ಯಕ್ಷರ ಮತ್ತು ಸಂಘಟನಾ ಕಾರ್ಯದರ್ಶಿ ಅನಂತ್ ಮಿಶ್ರಾ ಕಾರ್ಯವೈಖರಿಗೆ ನಮ್ಮ ವಿರೋಧವಿದ್ದು, ಈ ಕುರಿತು ಹೈಕಮಾಂಡ್ ಯಾವುದೇ ಕ್ರಮ ಕೈಗೊಳ್ಳದಿರುವುದು ನೋವುಂಟು ಮಾಡಿದೆ ಎಂದು ಈ ನಾಯಕರು ಪತ್ರದಲ್ಲಿ ತಿಳಿಸಿದ್ದಾರೆ.


ಪ್ರಮುಖವಾಗಿ ಪೌರತ್ವ ಮಸೂದೆ ವಿಚಾರದಲ್ಲಿ ಬಿಜೆಪಿ ಈಶಾನ್ಯ ರಾಜ್ಯಗಳಿಗೆ ಮೋಸ ಮಾಡುತ್ತಿದ್ದು, ಈ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಈ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!