ಎರಡನೇ ಹಂತ ಮುಕ್ತಾಯ: ಮೂರನೇ ಹಂತಕ್ಕೆ ಕಾಯುತ್ತಿದೆ ಭಾರತ!

By Web Desk  |  First Published Apr 18, 2019, 7:00 PM IST

ಎರಡನೇ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯ| ಕರ್ನಾಟಕ ಸೇರಿದಂತೆ ದೇಶದ 11 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ| ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ| ಕಣದಲ್ಲಿದ್ದಾರೆ ಹಲವು ಪ್ರಮುಖ ಅಭ್ಯರ್ಥಿಗಳು| ಹಲವು ರಾಜ್ಯಗಳಲ್ಲಿ ಇವಿಎಂ ಮತಯ್ರಂತದಲ್ಲಿ ದೋಷ| ವಿವಿಧ ರಾಜ್ಯಗಳಲ್ಲಿ ಶೇಕಡಾವಾರು ಮತದಾನ ಪ್ರಕಟಿಸಿದ ಚುನವಣಾ ಆಯೋಗ| ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಹೆಚ್ಚು(ಶೇ.75.27) ಮತದಾನ| ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯಂತ ಕಡಿಮೆ(ಶೇ.43.37) ಮತದಾನ|


ನವದೆಹಲಿ(ಏ.18): 2019 ರ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಇಂದು ಮುಕ್ತಾಯವಾಗಿದ್ದು, ಕರ್ನಾಟಕವೂ ಸೇರಿದಂತೆ ದೇಶದ 11 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಮುಗಿದಿದೆ.

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ ಮತ್ತು ಲೋಕಸಭಾ ಕ್ಷೇತ್ರಗಳ ಸಂಖ್ಯೆ:
2ನೇ ಹಂತದ ಮತದಾನದಲ್ಲಿ ಅಸ್ಸಾಂ(05), ಬಿಹಾರ(05),  ಛತ್ತೀಸ್​ಘಡ್(03), ಜಮ್ಮು-ಕಾಶ್ಮೀರ(02), ಕರ್ನಾಟಕ(14), ಮಹಾರಾಷ್ಟ್ರ(10), ಮಣಿಪುರ್(01), ಓದಿಶಾ(05), ತಮಿಳುನಾಡು(39), ತ್ರಿಪುರ(01), ಉತ್ತರಪ್ರದೇಶ(08), ಪಶ್ಚಿಮ ಬಂಗಾಳ(03), ಕೇಂದ್ರಾಡಳಿತ ಪ್ರದೇಶ ಪುದುಚೇರಿ(01) ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

Latest Videos

undefined

ಒಟ್ಟು ಅಭ್ಯರ್ಥಿಗಳ ಸಂಖ್ಯೆ:
97 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 1,644 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇವರಲ್ಲಿ ರಾಷ್ಟ್ರೀಯ ಪಕ್ಷ(209), ಪ್ರಾದೇಶಿಕ ಪಕ್ಷ(107) ಮತ್ತು ಸ್ವತಂತ್ರ್ಯ(888) ಅಭ್ಯರ್ಥಿಗಳಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Total voter turnout for 2nd phase of is 61.12%. pic.twitter.com/mw2R25FLWC

— ANI (@ANI)

ಇಂದು ಸಂಜೆ 6 ಗಂಟೆಗೆ ಮತದಾನ ಮುಕ್ಯಾತವಾಗಿದ್ದು, ಕೇಂದ್ರ ಚುನಾವಣಾ ಆಯೋಗ ವಿವಿಧ ರಾಜ್ಯಗಳ ಶೇಕಡಾವಾರು ಮತದಾನದ ಕುರಿತು ವರದಿ ನೀಡಿದೆ.

(ಗಮನಿಸತಕ್ಕದ್ದು-2014 ರ ಶೇಕಡಾವಾರು ಮತದಾನದ ವಿವರ ಚುನಾವಣೆ ಮುಗಿದ ಬಳಿಕದ ಒಟ್ಟಾರೆ ಮತದಾನದ ಅಂಕಿ ಅಂಶವಾಗಿವೆ.)

ಅಸ್ಸಾಂ- ಶೇ.73.22-(2014ರಲ್ಲಿ ಶೇ.49.5%)
ಬಿಹಾರ-ಶೇ.58.14-(2014ರಲ್ಲಿ ಶೇ.56.3%)
ಛತ್ತೀಸ್ ಘಡ: ಶೇ.68.70-(2014ರಲ್ಲಿ ಶೇ.69.5%)
ಜಮ್ಮು-ಕಾಶ್ಮೀರ- ಶೇ.43.37-(2014ರಲ್ಲಿ ಶೇ.49.5%)
ಕರ್ನಾಟಕ-ಶೇ.61.80-(2014ರಲ್ಲಿ ಶೇ.67.2%)
ಮಣಿಪುರ್-ಶೇ.55.37-(2014ರಲ್ಲಿ ಶೇ.79.6%)
ಒಡಿಶಾ-ಶೇ.57.41-(2014ರಲ್ಲಿ ಶೇ.73.8%)
ತಮಿಳುನಾಡು-ಶೇ.61.52-(2014ರಲ್ಲಿ ಶೇ.73.7%)
ಉತ್ತರ ಪ್ರದೇಶ-ಶೇ.58.12-(2014ರಲ್ಲಿ ಶೇ.58.4%)
ಪಶ್ಚಿಮ ಬಂಗಾಳ-ಶೇ.75.27-(2014ರಲ್ಲಿ ಶೇ.82.2%)

ದೇಶಾದ್ಯಂತ ಎರಡನೇ ಹಂತದ ಮತದಾನದಲ್ಲಿ ಒಟ್ಟಾರೆ ಶೇ. 61.12 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯಂತ ಕಡಿಮೆ(ಶೇ.43.37) ಮತದಾನವಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಹೆಚ್ಚು(ಶೇ.75.27) ಮತದಾನವಾಗಿದೆ.

ಪ.ಬಂಗಾಳದಲ್ಲಿ ಹಿಂಸಾಚಾರದ ಕುರಿತು ವರದಿಯಾಗಿದೆ. ರಾಯಗಂಜ್ ಲೋಕಸಭಾ ಕ್ಷೇತ್ರದ ಪಟಾಗೋರಾದಲ್ಲಿ ಮತದಾನ ಮಾಡಲು ಬಂದಿದ್ದ ಸಿಪಿಎಂ ಅಭ್ಯರ್ಥಿ ಮೊಹ್ಮದ್ ಸಲೀಂ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡಿಸಿದ್ದಾರೆ.

ತಮಿಳುನಾಡಿನಲ್ಲಿ ೆರಡನೇ ಹಂತದ ಚುನಾವಣೆ ಮಧ್ಯೆಯೇ ಹಲವು ಕಡೆ ಐಟಿ ದಾಳಿ ನಡೆದಿದ್ದು ವಿಶೇಷವಾಗಿತ್ತು.

ತಮಿಳುನಾಡು ಮತ್ತು ಬಿಹಾರದಲ್ಲಿ ಇವಿಎಂ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕುರಿತು ವರದಿಯಾಗಿದೆ. ಕೆಲವು ಅಹಿತಕರ ಘಟನೆ ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯ ಕಂಡಿದೆ ಎಂದು ಚುನವಣಾ ಆಯೋಗ ಸ್ಪಷ್ಟಪಡಿಸಿದೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!