Kannada Medium BE: ಆರಂಭವಾದ ವರ್ಷವೇ ಸೊನ್ನೆ ಸುತ್ತಿದ ಕನ್ನಡ ಮಾಧ್ಯಮ ಕೋರ್ಸ್

By Suvarna News  |  First Published Jan 13, 2022, 5:11 PM IST

ಕನ್ನಡದಲ್ಲಿ ಎಂಜಿನಿಯರಿಂಗ್ ಆರಂಭಿಸಿದ   ಈ ವರ್ಷ ಯಾವುದೇ ಒಂದು ವಿದ್ಯಾರ್ಥಿಯೂ ದಾಖಲಾಗಿಲ್ಲದಿರುವುದು ವಿಪರ್ಯಾಸ ಎನಿಸಿಕೊಂಡಿದೆ.


ಬೆಂಗಳೂರು(ಜ.13): ಪಿಯು ಶಿಕ್ಷಣ ಮುಗಿದ ಬಳಿಕ ಎಂಜಿನಿಯರಿಂಗ್ (Engineering) ಮಾಡಬೇಕೆನ್ನುವುದು ಹಲವರ ಆಸೆ ಮಾತ್ರವಲ್ಲ ಆಯ್ಕೆ ಕೂಡ. ಸಾಫ್ಟ್‌ವೇರ್‌ ಕಂಪನಿಗಳಲ್ಲಿ ಕೆಲಸ ಮಾಡಿ ಕೈ ತುಂಬ ಸಂಬಳ ತೆಗೆದುಕೊಳ್ಳಬೇಕು ಎನ್ನುವ  ಆಸೆಯಿಂದ ಹಲವರು ಎಂಜಿನಿಯರಿಂಗ್ ಓದುತ್ತಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಓದಿದವರಿಗೆ ಮತ್ತು ಕನ್ನಡ (kannada) ಮಾಧ್ಯಮದಲ್ಲೇ ಓದಿದವರಿಗೆ ಎಂಜಿನಿಯರಿಂಗ್ ಮಾಡಲು ಅವಕಾಶ ಸಿಗಬೇಕೆಂಬ ಕಾರಣಕ್ಕೆ ಈ ವರ್ಷದಿಂದ ಕನ್ನಡ ಮಾಧ್ಯಮದಲ್ಲೇ ಎಂಜಿನಿಯರಿಂಗ್ ಕೋರ್ಸ್‌ ಅನ್ನು ರಾಜ್ಯ ಸರ್ಕಾರ (Karnataka government) ಆರಂಭಿಸಿದೆ.

ಆದರೆ ಕನ್ನಡದಲ್ಲಿ ಎಂಜಿನಿಯರಿಂಗ್ ಆರಂಭಿಸಿದ   ಈ ವರ್ಷ ಯಾವುದೇ ಒಂದು ವಿದ್ಯಾರ್ಥಿಯೂ ದಾಖಲಾಗಿಲ್ಲದಿರುವುದು ವಿಪರ್ಯಾಸ ಎನಿಸಿಕೊಂಡಿದೆ. ಈ ಕುರಿತು ವರದಿ ಸಲ್ಲಿಸಲು ಕಾಲೇಜುಗಳಿಗೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿತ್ತು. ಈ ಬಾರಿ ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 23,001 ಸೀಟುಗಳು ಖಾಲಿ ಇದೆಯಂತೆ.

Latest Videos

undefined

ರಾಷ್ಟ್ರೀಯ ಶಿಕ್ಷಣ ನೀತಿಯ (national education policy - NEP) ಭಾಗವಾಗಿ 2021-22ರ ಶೈಕ್ಷಣಿಕ ಸಾಲಿಗೆ ಪ್ರಾದೇಶಿಕ ಭಾಷೆಯಲ್ಲಿ ಎಂಜಿನಿಯರಿಂಗ್ ಅನ್ನು ಪರಿಚಯಿಸಲಾಯಿತು. ರಾಜ್ಯದ ಮೂರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಮೀಸಲಿಡಲಾಗಿತ್ತು. ಒಟ್ಟಾರೆ 72 ಸೀಟುಗಳನ್ನು ಈ ಬಾರಿ ಕನ್ನಡ ಮಾಧ್ಯಮದವರಿಗೆ ಮೀಸಲಿಡಲಾಗಿತ್ತು. ಕೌನ್ಸೆಲಿಂಗ್‌ನ ಆರಂಭಿಕ ಸುತ್ತಿನಲ್ಲಿ ಕೆಲ ವಿದ್ಯಾರ್ಥಿಗಳು ಹಾಜರಾಗಿದ್ದರು. ಆದರೆ ಈಗ ಒಬ್ಬರು ಕೂಡ  ಕಾಲೇಜುಗಳಿಗೆ ಪ್ರವೇಶಾತಿ ಪಡೆದುಕೊಂಡಿಲ್ಲ. ಈ ಸಂಬಂಧ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಕೂಡ ಆಶ್ಚರ್ಯ ವ್ಯಕ್ತಪಡಿಸಿದೆ.

INFOSYS OFF CAMPUS DRIVE 2022: 55,000 ಫ್ರೆಶರ್ ಹುದ್ದೆಗಳ ನೇಮಕಾತಿಗೆ ಮುಂದಾದ ಇನ್ಫೋಸಿಸ್‌

ಈ ಕೋರ್ಸ್ ಗಳನ್ನು ನೀಡುವ ಕಾಲೇಜುಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಕೆಲವು ವಿದ್ಯಾರ್ಥಿಗಳು ಇದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ಪೋಷಕರಿಗೆ ಈ ಕಾರ್ಯಕ್ರಮದ ಬಗ್ಗೆ ವಿಶ್ವಾಸ ಇಲ್ಲದಿರಬಹುದು. ಹಾಗಾಗಿ ಇದನ್ನು ಇನ್ನಷ್ಟು ಬಲಪಡಿಸಿ ಮುಂದಿನ ವರ್ಷ ಹೆಚ್ಚಿನ ಕಾಲೇಜುಗಳಲ್ಲಿ ಪರಿಚಯಿಸುತ್ತೇವೆ'' ಎಂದು ವಿಟಿಯು ಉಪಕುಲಪತಿ ಕರಿಸಿದ್ದಪ್ಪ ವಿಶ್ವಾಸ ವ್ಯಕ್ತಪಡಸಿದ್ದಾರೆ.

ಒಟ್ಟಾರೆ ಈ ವರ್ಷ 16,457 ಸೀಟುಗಳು ಖಾಲಿ ಇವೆ. ಸಿಇಟಿ ಮೂಲಕ 64,484 ಸೀಟುಗಳು ಲಭ್ಯವಿದ್ದರೆ, 48,027 ಸೀಟುಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಹೆಚ್ಚುವರಿಯಾಗಿ, 6,544 ವಿದ್ಯಾರ್ಥಿಗಳು ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಿಲ್ಲ. ಹೀಗಾಗಿ ಒಟ್ಟು 23,001 ಸೀಟುಗಳು ಖಾಲಿ ಇದೆಯಂತೆ.

RTE Karnataka Admission 2022-23: RTE ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭ

ಈ ವರ್ಷ ದ್ವಿತೀಯ ಪಿಯುಸಿಯಿಂದ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ಮತ್ತು CET ನಲ್ಲಿ ಕಟ್ ಆಫ್‌ ಅಂಕಗಳ ಕೊರತೆಯಿಂದಾಗಿ ಕಳೆದ ವರ್ಷಕ್ಕಿಂತ ಈ ಭಾರಿ ದಾಖಲಾದವರ ಸಂಖ್ಯೆ ಉತ್ತಮವಾಗಿವೆ. ಗ್ರಾಮೀಣ ಕಾಲೇಜುಗಳಿಗೆ ಈ ಬಾರಿ ಉತ್ತಮ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ. ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಅನ್ನು ತೆಗೆದುಕೊಳ್ಳುವವರ ಸಂಖ್ಯೆ ಕುಂದಿದೆ.'' ಎಂದೂ  ವಿಟಿಯು ಉಪಕುಲಪತಿ ಕರಿಸಿದ್ದಪ್ಪ ಹೇಳಿದ್ದಾರೆ.

ವೈದ್ಯಕೀಯ ಮತ್ತು ದಂತ ವೈದ್ಯಕೀಯ (Medical and Dental course) ಕೋರ್ಸ್‌ಗಳಿಗೆ ಸೀಟು ಹಂಚಿಕೆ ಮಾಡುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ. ವೈದ್ಯಕೀಯ ಸೀಟುಗಳನ್ನು ಪಡೆದ ನಂತರ ಕೆಲ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟುಗಳನ್ನು ತೊರೆಯುವ ಅವಕಾಶಗಳು ಹೆಚ್ಚಿವೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.

KNNL Recruitment 2022: ಕರ್ನಾಟಕ ನೀರಾವರಿ ನಿಗಮದಲ್ಲಿನ ಸೆಕ್ರೆಟರಿ ಹುದ್ದೆ

click me!