* ವೈಜ್ಞಾನಿಕ ಫೆಲೋಶಿಪ್ ಗಳು, ಅನುದಾನ, ವಿದ್ಯಾರ್ಥಿ ವೇತನಗಳಿಗೆ ಒಂದೇ ಅರ್ಜಿ
* ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಪ್ರಸ್ತಾಪ
* ವಿಜ್ಞಾನ ಸಚಿವಾಲಯಗಳು ಮತ್ತು ವಿಜ್ಞಾನ ವಿಭಾಗಗಳ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆಯಲ್ಲಿ ಹೇಳಿಕೆ
ನವದೆಹಲಿ, (ಜ.12): ವೈಜ್ಞಾನಿಕ ಫೆಲೋಶಿಪ್ ಗಳು, ಅನುದಾನ, ವಿದ್ಯಾರ್ಥಿ ವೇತನಗಳಿಗೆ(Students Scholarships) ಒಂದೇ ಸಾಮಾನ್ಯ ಅರ್ಜಿ (Application) ಸಲ್ಲಿಕೆ ಅಗತ್ಯವಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಪ್ರಸ್ತಾಪಿಸಿದ್ದಾರೆ.
ಎಲ್ಲಾ ವಿಜ್ಞಾನ ಸಚಿವಾಲಯಗಳು ಮತ್ತು ವಿಜ್ಞಾನ ವಿಭಾಗಗಳ ಕಾರ್ಯದರ್ಶಿಗಳ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಜಿತೇಂದ್ರ ಸಿಂಗ್, ಫೆಲೋಶಿಪ್ ಗಳು ಮತ್ತು ಸಂಶೋಧನಾ ವಿಭಾಗಗಳ ಅನುದಾನಗಳನ್ನು ಸುಗಮಗೊಳಿಸುವುದರಿಂದ ಸಮಯ ಮತ್ತು ವೆಚ್ಚವನ್ನಷ್ಟೇ ಕಡಿಮೆ ಮಾಡುವುದಿಲ್ಲ, ಇದರಿಂದ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಗೆ ವಿಜ್ಞಾನ ಶಿಕ್ಷಣವನ್ನು ಸುಲಭಗೊಳಿಸಲು, ವಿದ್ಯಾರ್ಥಿಗಳಿಗೆ ಸಮತಟ್ಟಾದ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು.
Student Scholarships: ಈ ವಿದ್ಯಾರ್ಥಿ ವೇತನಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ? ತಪ್ಪದೇ ಇಂದೇ ಅರ್ಜಿ ಹಾಕಿ
ಈ ವ್ಯವಸ್ಥೆಯನ್ನು ಸುಗಮಗೊಳಿಸುವ ಸಿಎಸ್ಐಆರ್ ಸಮಿತಿಯ ಕಾರ್ಯದರ್ಶಿ ಡಾ. ಶೇಖರ್ ಮುಂಡೆ, ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ. ಎಂ. ರವಿಚಂದ್ರನ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಎಸ್. ಚಂದ್ರಶೇಖರ್, ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ರಾಜೇಶ್ ಗೋಖಲೆ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಚಿವರು ಸಭೆಯಲ್ಲಿ ಮಾಹಿತಿ ನೀಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ [ಎಂ.ಒ.ಎಸ್.ಟಿ] ಮತ್ತು ಭೂ ವಿಜ್ಞಾನ [ಎಂ.ಒ.ಇ.ಎಸ್] ಸಚಿವಾಲಯಗಳಲ್ಲಿ ಪ್ರಸ್ತುತ ಹಲವಾರು ಕಾರ್ಯಕ್ರಮಗಳಿವೆ. ವಿದ್ಯಾರ್ಥಿಗಳು, ಸಂಶೋಧಕರಿಗೆ ವಿವಿಧ ಹಂತಗಳಲ್ಲಿ ವಿದ್ಯಾರ್ಥಿ ವೇತನ/ಫೆಲೋಶಿಪ್ ಗಳಿವೆ [ಶಾಲೆ/ಯುಜಿ/ಪಿಜಿ/ಪಿಎಚ್ಡಿ/ಪೋಸ್-ಡಾಕ್/ಆರ್.ಎ/ವಿದೇಶದಿಂದ ವಾಪಸ್ ಆಗುವವರಿಗೆ]. ಉದಾಹರಣೆಗೆ ಸಿ.ಎಸ್.ಐ.ಆರ್ ಮತ್ತು ಡಿಬಿಟಿಯಲ್ಲಿ ಪ್ರತ್ಯೇಕ ಕಿರಿಯ ಸಂಶೋಧನಾ ಫೆಲೋಶಿಪ್ [ಜಿ.ಆರ್.ಎಫ್] ಪರೀಕ್ಷೆಗಳಿವೆ, ವಿದೇಶದಿಂದ ವಾಪಸ್ ಆಗುವವರಿಗೆ, ಪೋಸ್ಟ್ ಡಾಕ್/ ಸಹಯೋಗದಲ್ಲಿ ಸಂಶೋಧನೆ ಕೈಗೊಳ್ಳಲು ಡಿ.ಎಸ್.ಟಿ, ಡಿ.ಬಿಟಿ ಮತ್ತು ಸಿ.ಎಸ್.ಐ.ಆರ್ ನಲ್ಲಿ ವಿವಿಧ ಯೋಜನೆಗಳಿವೆ.
ಆದಾಗ್ಯೂ ಈ ಎಲ್ಲಾ ವಿಭಾಗಗಳಲ್ಲಿ ಪ್ರತ್ಯೇಕ ಜಾಹೀರಾತು ಮತ್ತು ಸಂದರ್ಶನ/ ಆಯ್ಕೆ ಪ್ರಕ್ರಿಯೆಗಳಿದ್ದು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ವಿವಿಧ ಪೋರ್ಟಲ್ ಗಳಲ್ಲಿ, ವಿವಿಧ ನಮೂನೆಗಳಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ ಮತ್ತು ಬಹುಹಂತದ ಸಂದರ್ಶನಗಳು, ಪರೀಕ್ಷೆಗಳನ್ನು ಎದುರಿಸುವುದು ವಿದ್ಯಾರ್ಥಿ ಸಮುದಾಯಕ್ಕೆ ತ್ರಾಸದಾಯಕವಾಗಿದೆ. ಇದರಿಂದ ವಿದ್ಯಾರ್ಥಿಗಳ ಸಮಯವಷ್ಟೇ ವ್ಯರ್ಥವಾಗುವುದಿಲ್ಲ ದನ ಸಹಾಯ ಮಾಡುವ ಏಜನ್ಸಿಗಳಿಂದ ಅನುದಾನ ಮತ್ತು ಸಂಪನ್ಮೂಲ ವಿತರಣೆಗೂ ತೊಂದರೆಯಾಗಲಿದೆ.
ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆಗಳಿಗೆ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಎಂ.ಒ.ಎಸ್.ಟಿ ಮತ್ತು ಎಂ.ಒ.ಇ.ಎಸ್ ಸಚಿವಾಲಯಗಳಲ್ಲಿನ ವಿದ್ಯಾರ್ಥಿ ವೇತನ ಮತ್ತು ಫೆಲೋಶಿಪ್ ಗಳಿಗೆ ಏಕರೂಪದ ವೆಬ್ ಇಂಟರ್ಫೇಸ್ ಸೌಲಭ್ಯ ಕಲ್ಪಿಸುವ ಆಲೋಚನೆಯನ್ನು ಸಚಿವರು ನೀಡಿದರು.
ಯೋಜನೆಗಳನ್ನು ವಿದ್ಯಾರ್ಥಿ ಕೇಂದ್ರಿತವಾಗಿಸುವ ಮತ್ತು ಪ್ರಕ್ರಿಯೆ ಸರಳಗೊಳಿಸುವ ಗುರಿ ಹೊಂದಲಾಗಿದೆ. ಇದನ್ನು ಕಾರ್ಯಗತಗೊಳಿಸಿದ ನಂತರ ವಿದ್ಯಾರ್ಥಿಗಳು ಹಲವಾರು ಅರ್ಜಿಗಳನ್ನು ವಿವಿಧ ಪೋರ್ಟಲ್ ಗಳಲ್ಲಿ ಸಲ್ಲಿಸುವ ಅಗತ್ಯವಿಲ್ಲ. ಏಕೆಂದರೆ ಎಲ್ಲಾ ನಾಲ್ಕು ವಿಭಾಗಗಳು ಎಲ್ಲಾ ವಿದ್ಯಾರ್ಥಿ ವೇತನ ಮತ್ತು ಫೆಲೋಶಿಪ್ ಗಳು ಒಂದೇ ಪೋರ್ಟಲ್ ನಲ್ಲಿ ಲಭ್ಯವಾಗಲಿದೆ.
ವಿದ್ಯಾರ್ಥಿ ವೇತನ ಮತ್ತು ಫೇಲೋ ಶಿಪ್ ಗಳು ಏಕ ಗವಾಕ್ಷಿ ವ್ಯವಸ್ಥೆಯಿಂದ ಪ್ರಕ್ರಿಯೆ ಸರಳಗೊಳ್ಳುವುದಲ್ಲದೇ ಏಕರೂಪತೆ ಬರಲಿದೆ. ವಿದ್ಯಾರ್ಥಿಗಳು/ ಸಂಶೋಧಕರಿಗೆ ಏಕ ಸಂಪರ್ಕ ವ್ಯವಸ್ಥೆ ಲಭ್ಯವಾಗಲಿದ್ದು, ಪ್ರಕ್ರಿಯೆಯನ್ನು ತ್ವರಿತವಾಗಿ ಅಳವಡಿಸಿಕೊಳ್ಳಲು ಮತ್ತು ಸಕಾಲಕ್ಕೆ ಫೆಲೋಶಿಪ್ ಬಿಡುಗಡೆ, ನಕಲು ತಡೆಗಟ್ಟಲು, ಪ್ರಕ್ರಿಯೆಯನ್ನು ಸಂಯೋಜಿಸಲು, ವರ್ಗಾವಣೆ ವೆಚ್ಚ ಮತ್ತು ಸಮಯ ಉಳಿತಾಯ ಮಾಡಲು ಸಹಕಾರಿಯಾಗಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳನ್ನು ವಿಲೀನಗೊಳಿಸಲು ಮತ್ತು ಪ್ರಾಯೋಜಕ ಸಂಸ್ಥೆಗಳಿಂದ ಪಡೆದ ನಿರಪೇಕ್ಷಣಾ ಸಂಶೋಧಕರಿಗೆ ಫೆಲೋಶಿಪ್ ಅನುದಾನವನ್ನು ಅನ್ವೇಷಿಸಲು ಸಚಿವಾಲಯಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ವಿದ್ವಾಂಸರು ಮತ್ತು ವಿದ್ಯಾರ್ಥಿಗಳಿಗೆ ಫೆಲೋಶಿಪ್ ಗಳು/ ಸಂಶೋಧನಾ ಅನುದಾನವನ್ನು ಮಂಜೂರು ಮಾಡಲು ಮತ್ತು ಬಿಡುಗಡೆಗೊಳಿಸಲು ವಿಳಂಬವಾಗುತ್ತಿರುವ ಕುರಿತು ಹಲವಾರು ಕುಂದು ಕೊರತೆ ಸಮಸ್ಯೆಗಳು ಗಮನಕ್ಕೆ ಬಂದಿವೆ. ಪ್ರತಿಯೊಂದು ವಿಭಾಗಗಳು ಫೆಲೋಶಿಪ್ ಅನುದಾನಗಳ ಮಂಜೂರಾತಿ ಮತ್ತು ನಿಗಾ ವಹಿಸಲು ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಮಾಹಿತಿ, ಅರ್ಜಿ, ಆಯ್ಕೆ, ಅನುದಾನಗಳ ಸಕಾಲಿಕ ಬಿಡುಗಡೆ, ಅದರ ಪರಿಣಾಮಕಾರಿ ಬಳಕೆ ಮತ್ತು ಮೇಲ್ವಿಚಾರಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವ ಅವಶ್ಯಕತೆಯಿದೆ ಎಂದು ಸಚಿವರು ಹೇಳಿದರು.
ಫೆಲೋಶಿಪ್ ಗಳು ಮತ್ತು ಸಂಶೋಧನಾ ಅನುದಾನಗಳನ್ನು ಸುಗಮಗೊಳಿಸಲು ಡಾ. ಜಿತೇಂದ್ರ ಸಿಂಗ್ ಅವರು ಸಮಿತಿಯೊಂದನ್ನು ರಚಿಸಿದ್ದಾರೆ. ಡಾ. ಶೇಖರ್ ಸಿ. ಮಾಂಡೆ, ಕಾರ್ಯದರ್ಶಿ, ಡಿ.ಎಸ್.ಐ.ಆರ್ ಮತ್ತು ಡಿಜಿ, ಕಾರ್ಯದರ್ಶಿ ಸಿ.ಎಸ್.ಐ.ಆರ್ ಮತ್ತು ಕಾರ್ಯದರ್ಶಿ ಡಿ.ಎಸ್.ಟಿ, ಕಾರ್ಯದರ್ಶಿ ಡಿ.ಬಿ.ಟಿ, ಕಾರ್ಯದರ್ಶಿ ಎಂ.ಒ.ಇ.ಎಸ್ ಇವರುಗಳು ಸದಸ್ಯರಾಗಿರಲಿದ್ದಾರೆ. ಎಚ್.ಆರ್.ಡಿ.ಜಿ ಮುಖ್ಯಸ್ಥ ಡಾ. ಅಂಜನ್ ರಾಯ್ ಮತ್ತು ಹಿರಿಯ ವಿಜ್ಞಾನಿ ಡಾ. ಸಂಜಯ್ ಮಿಶ್ರಾ ಅವರು ಇತರೆ ಇಬ್ಬರು ಸಮಿತಿಯ ಸದಸ್ಯರಾಗಿದ್ದಾರೆ.
ಸಮಿತಿಯು ಕೇಂದ್ರೀಕೃತ ಯೋಜನಾ ನಿರ್ವಹಣಾ ಘಟಕವನ್ನು ಸ್ಥಾಪಿಸಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದ್ದು, ಇದು ಫೆಲೋಶಿಫ್ ಗಳಿಗೆ ಸಂಬಂಧಿಸಿದ ಎಲ್ಲಾ ಕಾರ್ಯಾಚರಣೆಗಳು, ಸಂಸ್ಕರಣೆ, ವಿತರಣೆಗಳು ಮತ್ತು ಯೋಜನೆಗಳ ನಿಧಿಯನ್ನು ಒಂದೇ ಸ್ಥಳದಿಂದ ನಿರ್ವಹಿಸುತ್ತದೆ. ಪಿಎಂಯು ವೃತ್ತಿಪರ ಹೊರಗುತ್ತಿಗೆ ಸಿಬ್ಬಂದಿ ಮತ್ತು ಪ್ರತಿಯೊಂದು ಇಲಾಖೆಯ ನೋಡೆಲ್/ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಸರಿಯಾದ ಸಮಯದಲ್ಲಿ ಪೋರ್ಟಲ್ ಅನ್ನು 24x7 ಅನ್ನು ಸಹಾಯವಾಣಿ ಕೇಂದ್ರ ಬೆಂಬಲಿಸುತ್ತದೆ. ಇದಲ್ಲದೇ ವಿದ್ಯಾರ್ಥಿಗಳು/ಸಂಶೋಧಕರು/ಪಿಐಗಳು/ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುತ್ತಾರೆ.
ಪಿಎಂಯು/ಉದ್ದೇಶಿತ ಕೇಂದ್ರದ ಕಾರ್ಯಾಚರಣೆ ವೆಚ್ಚಗಳನ್ನು [ಬಂಡವಾಳ ಮತ್ತು ಮರುಕಳಿಸುವ ಎರಡೂ] ಡಿ.ಎಸ್.ಟಿ, ಎಸ್.ಇ.ಬಿ.ಆರ್, ಡಿಬಿಡಿ ಮತ್ತು ಡಿ.ಎಸ್.ಐ.ಆರ್/ಸಿ.ಎಸ್.ಐ.ಆರ್ ನಿಂದ ಸಮಾನವಾಗಿ ಭರಿಸಬಹುದು. ಫೆಲೋಶಿಪ್ ಗಳ ಮೇಲಿನ ವೆಚ್ಚವನ್ನು ಪ್ರಸ್ತುತ ಮಾಡುತ್ತಿರುವಂತೆ ಸಂಬಂಧಿಸಿದ ಇಲಾಖೆಗಳು ಭರಿಸುತ್ತವೆ.