ಪಠ್ಯದಲ್ಲಿ ಬಸವಣ್ಣನವರಿಗೆ ಅಪಮಾನ ಮಾಡಿದ ವಿಚಾರದ ಬಗ್ಗೆ ಸಿಎಂ ಗಂಭೀರವಾಗಿ ಪರಿಗಣಿಸಬೇಕು: ಜಗದೀಶ್ ಶೆಟ್ಟರ್!

By Govindaraj S  |  First Published Jun 2, 2022, 12:42 AM IST

ಪಠ್ಯ ಪರಿಷ್ಕರಣೆ ವೇಳೆ ಬಸವಣ್ಣನವರಿಗೆ ಅಪಮಾನ ಮಾಡಿದ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು, ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸೋ ಪ್ರಯತ್ನ ಮಾಡಬೇಕು ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.


ವರದಿ: ಗುರುರಾಜ್ ಹೂಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಹುಬ್ಬಳ್ಳಿ (ಜೂ.02): ಪಠ್ಯ ಪರಿಷ್ಕರಣೆ ವೇಳೆ ಬಸವಣ್ಣನವರಿಗೆ ಅಪಮಾನ ಮಾಡಿದ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು, ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸೋ ಪ್ರಯತ್ನ ಮಾಡಬೇಕು ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿ ಅವರು. ಪರಿಷ್ಕೃತ ಪಠ್ಯದಲ್ಲಿ ಬಸವಣ್ಣನವರಿಗೆ ಅಪಮಾನ ಮಾಡಲಾಗಿದೆ ಎನ್ನೋ ಮಾತು ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಮಠಾಧೀಶರೂ ಪತ್ರ ಬರೆದಿದ್ದಾರೆ. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸೋ ಪ್ರಯತ್ನ ಮಾಡಬೇಕು. ಎಲ್ಲಿ ತಪ್ಪಾಗಿದೆ, ಒಪ್ಪಾಗಿದೆ ಅನ್ನೋದನ್ನು ಗಮನಿಸಬೇಕು. 

Tap to resize

Latest Videos

ಪಠ್ಯ ಪರಿಷ್ಕರಣೆಯಲ್ಲಿ ಉಂಟಾಗಿರೋ ಗೊಂದಲ ಸರಿಪಡಿಸಬೇಕು ಮಠಾಧೀಶರು ಮತ್ತಿತರರು ಪತ್ರ ಬರೆದಿದ್ದಾರೆ ಎಂಬ ವಿಚಾರ ಗಮಕ್ಕೆ‌ ಬಂದಿದೆ. ಅವರ ಪತ್ರದ ಅವಲೋಕನ ನಡೆಸಬೇಕು. ಹಾಗೊಂದು ವೇಳೆ ತಪ್ಪುಗಳಾಗಿದ್ದರೆ ತಕ್ಷಣ ಸರಿಪಡಿಸಬೇಕು. ಚರ್ಚೆ ಮಾಡುವವರು, ಮಾಡದೇ ಇರೋರು ಪಠ್ಯವನ್ನೇ ನೋಡಿಲ್ಲ. ಆದರೂ ವಿನಾಕಾರಣ ಮಾತನಾಡುತ್ತಿದ್ದಾರೆ‌ ನಾನೂ ಸಹ ಪಠ್ಯ ಪುಸ್ತಕ ನೋಡಿಲ್ಲ. ಪಠ್ಯೆ ತರಿಸಿಕೊಂಡು ಪರಿಶೀಲಿಸ್ತೇನೆ. ಆದರೆ ಇದರೆ ಬಗ್ಗೆ ಅಪಸ್ವರ ಎದ್ದಿರೋದರಿಂದ ಗಂಭೀರವಾಗಿ ಪರಿಗಣಿಸಬೇಕು. ಸರಿಯಾಗಿಲ್ಲ ಅನ್ನೋದಾದ್ರೆ ತಿದ್ದುಪಡಿ ಮಾಡಲಿ. ಸರಿಯಿದ್ದಲ್ಲಿ ಯಥಾರೀತಿ ಮುಂದುವರಿಸಲಿ ಅಂತ ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

Hubballi; ವಿರೋಧದ ನಡುವೆಯೂ ಅನಧಿಕೃತ ಕಟ್ಟಡಗಳ ತೆರವು ಆರಂಭ!

ಐಟಿ-ಇಡಿ ವಿಚಾರದಲ್ಲಿ ರಾಜಕೀಯ ಸಲ್ಲದು- ಜಗದೀಶ್ ಶೆಟ್ಟರ್: ಯಾರೇ ಅಕ್ರಮವಾಗಿ ಆಸ್ತಿ ಅಥವಾ ಏನೇ ಮಾಡಲಿ ಅದಕ್ಕಾಗಿ ಐಟಿ-ಇಡಿ ತನಿಖೆ ಮಾಡುತ್ತವೆ.ಆದ್ರೆ ಇದನ್ನು ರಾಜಕೀರಣ ಮಾಡಬಾರದು ಅಂತ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿದ್ದಾರೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂದಿ ಗೆ ಇಡಿ ಸಮನ್ಸ್ ಜಾರಿ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು  ನ್ಯಾಷನಲ್ ಹೆರಾಲ್ಡ್ ಹಗರಣದ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಲಾಗಿರಬಹುದು. ಅದೊಂದು ಸ್ವತಂತ್ರ ಸಂಸ್ಥೆ. ಈಗ ಆಗಿರೋದು ರಾಜಕೀಯ ಪ್ರೇರಿತ ಅಲ್ಲ ಹಲವರ ಮೇಲೆ ಐಟಿ ಇಡಿ ದಾಳಿ ನಡೆದಿರೋದು ಗೊತ್ತಿರೋ ವಿಷಯ. ಯಾವುದೇ ಪಕ್ಷ - ಪಂಗಡವನ್ನು ಗುರಿಯಾಗಿಸಿಕೊಂಡು ದಾಳಿ ನಡೆದರೆ ರಾಜಕೀಯ ಪ್ರೇರಿತ ಅನ್ನುತ್ತಾರೆ. ಯಾರ ಬಳಿ ಅಕ್ರಮವಾಗಿ ಸಂಪಾದಿಸಿದ ಹಣ ಇರುತ್ತದೆಯೋ ಅವರ ಮೇಲೆ ದಾಳಿ ನಡೆಯೋದು ಸಹಜ. ಇದರಲ್ಲಿ ಅನಗತ್ಯ ರಾಜಕೀಯ ಮಾಡಬಾರದು ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು. 

Dharwadದಲ್ಲಿ ಗೊಬ್ಬರಕ್ಕಾಗಿ ರೈತರ ಪರದಾಟ, ಶಾಸಕ ಬೆಲ್ಲದ ಮನೆಗೆ ಮುತ್ತಿಗೆ

ಕಾಂಗ್ರೆಸ್ ಕೈ ಕೊಡುವ ಪಕ್ಷ- ಜೆಡಿಎಸ್ ಮತ್ತೆ ಮತ್ತೆ ನಂಬಿ‌ಮೋಸ ಹೋಗುತ್ತಿದೆ: ಇದೇ ವೇಳೆ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಎರಡನೆಯ ಅಭ್ಯರ್ಥಿ ಕಣಕ್ಕಿಳಿಸಿರುವ ವಿಚಾರದ ಕುರಿತು ಮಾತನಾಡಿದ ಅವರು. ಸೋನಿಯಾಗಾಂಧಿ ಜೊತೆ ಚರ್ಚಿಸಿದ ನಂತರವೇ ಅಭ್ಯರ್ಥಿಯನ್ನು ಹಾಕಿರೋದಾಗಿ ರೇವಣ್ಣ ಹೇಳ್ತಾರೆ. ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿದೆ. ಕಾಂಗ್ರೆಸ್ ಪಕ್ಷ ಬರೀ ಕೈ ಕೊಡೋ ಕೆಲಸ ಮಾಡುತ್ತದೆ. ಈ ಹಿಂದೆಯೂ ಕಾಂಗ್ರೆಸ್ ಹಲವಾರು ಬಾರಿ ಈ ರೀತಿ ಮಾಡಿದೆ. ಹೀಗಿದ್ದರೂ ಜೆಡಿಎಸ್ ಮತ್ತೆ ಮತ್ತೆ ನಂಬಿ ಮೋಸ ಹೋಗುತ್ತಿದೆ. ಈಗಲಾದ್ರೂ ಜೆಡಿಎಸ್ ಎಚ್ಚೆತ್ತುಕೊಳ್ಳಬೇಕು. ಬಿಜೆಪಿ ನಾಲ್ಕನೆಯ ಅಭ್ಯರ್ಥಿಯನ್ನೂ ಗೆಲ್ಲಿಸಿಕೊಂಡು ಬರೋಕೆ ಎಲ್ಲ ರಣತಂತ್ರ ರೂಪಿಸಿದೆ ಅಂತ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

click me!